Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್
x
ಬದುಕುಳಿದವರಿಗೆ ಸಲ್ಲಬೇಕಾದ್ದು ಸಿಗುವಂತೆ ಮಾಡಲು ತಮ್ಮ ಪಕ್ಷ ಪ್ರಯತ್ನಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಫೋಟೋ: ANI/X

Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್

ಸಿಎಂ ಪಿಣರಾಯಿ ವಿಜಯನ್ ಸರ್ವಪಕ್ಷ ಸಭೆ: ಮುಂಡಕ್ಕೆ, ಚೂರಲ್‌ಮಲಾ, ಅಟ್ಟಮಲ ಮತ್ತು ನೂಲ್‌ವುಳದ ಭೂಕುಸಿತ ಪೀಡಿತ ಪ್ರದೇಶಗಳಿಂದ ಇದುವರೆಗೆ 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.


ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ವಿಪತ್ತಿನಲ್ಲಿ ಗಾಯಗೊಂಡ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ಗೆ ಬಂದಿದ್ದಾರೆ.

ಗುರುವಾರ (ಆಗಸ್ಟ್ 1) ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ʻʻಭೂಕುಸಿತ ಪೀಡಿತ ಮುಂಡಕ್ಕೆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಮತ್ತು ರಕ್ಷಣಾ ಕಾರ್ಯಗಳನ್ನು ಸಂಘಟಿಸಲು ನಾಲ್ವರು ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ನೇಮಿಸಲಾಗಿದೆ.

ನಾಲ್ವರು ಸಚಿವರು-ಕಂದಾಯ ಸಚಿವ ಕೆ.ರಾಜನ್, ಅರಣ್ಯ ಸಚಿವ ಎ.ಕೆ.ಸಸೀಂದ್ರನ್, ಪಿಡಬ್ಲ್ಯೂಡಿ ಮತ್ತು ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್ ಮತ್ತು ಎಸ್‌ಸಿ/ಎಸ್‌ಟಿ ಇಲಾಖೆ ಸಚಿವ ಒಆರ್ ಕೇಲು ಅವರು ಜಿಲ್ಲೆಯಲ್ಲಿ ಶಿಬಿರ ನಡೆಸಲಿದ್ದಾರೆ.

ʻʻಈ ರಕ್ಷಣಾ ಕಾರ್ಯ ಅಲ್ಪಾವಧಿಯಲ್ಲಿ ಮುಗಿಯುವಂತದ್ದಲ್ಲ. ಸದ್ಯಕ್ಕೆ 12 ಸಚಿವರು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ನಾಲ್ವರು ಸಚಿವರು ಇಲ್ಲಿಯೇ ಮೊಕ್ಕಾಂ ಹೂಡಲು ಸರ್ವಪಕ್ಷ ಸಭೆ ನಿರ್ಧರಿಸಿದೆ ಎಂದು ವಿಜಯನ್ ಹೇಳಿದರು.

ಭಾರೀ ಪ್ರಮಾಣದಲ್ಲಿ ಮಣ್ಣಿನ ಶೇಖರಣೆಯಿಂದಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆರಂಭದಲ್ಲಿ ಕಷ್ಟವಾಗಿದ್ದರೂ, ಈಗ ಸೇನೆಯು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸುತ್ತಿರುವುದರಿಂದ ಕಾರ್ಯಾಚರಣೆಯು ಸುಲಭವಾಗುತ್ತದೆ ಎಂದರು.

ಭೂಕುಸಿತ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ. ಇದರಿಂದ ಸಿಕ್ಕಿಹಾಕಿಕೊಂಡಿರುವ ಸಾಕಷ್ಟು ಜನರನ್ನು ರಕ್ಷಿಸಬಹುದಾಗಿದೆ. ಜೊತೆಗೆ ಸ್ನಿಫರ್ ಡಾಗ್‌ಗಳ ನಿಯೋಜನೆ ಮತ್ತು ಕೇಂದ್ರ ಮತ್ತು ರಾಜ್ಯ ರಕ್ಷಣಾ ತಂಡಗಳಿಂದ 1,000 ಕ್ಕೂ ಹೆಚ್ಚು ರಕ್ಷಕರು ಬೃಹತ್‌ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ, ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ.

ಮಂಗಳವಾರ ಮುಂಜಾನೆ ಮುಂಡಕ್ಕೆ, ಚೂರಲ್ಮಲಾ, ಅಟ್ಟಮಲ ಮತ್ತು ನೂಲುಳ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ.

ಹೆಚ್ಚಿನ ಲೈವ್ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://thefederal.com/category/live/wayanad-landslides-live-bailey-bridge-may-be-built-by-10-am-rahul-priyanka-leave-for-kerala-136458?infinitescroll=1

Live Updates

  • 1 Aug 2024 11:25 AM IST

    ರಾಹುಲ್, ಪ್ರಿಯಾಂಕಾ ಕೇರಳಕ್ಕೆ ಬಂದಿಳಿದರು

  • 1 Aug 2024 11:24 AM IST

    ವಯನಾಡಿನ ಇತ್ತೀಚಿನ ದೃಶ್ಯಗಳು

  • 1 Aug 2024 11:23 AM IST

    ಕಣ್ಣೂರಿಗೆ ಆಗಮಿಸಲಿರುವ ರಾಹುಲ್, ಪ್ರಿಯಾಂಕಾ

  • 1 Aug 2024 11:23 AM IST

    ಕಲ್ಪೆಟ್ಟಕ್ಕೆ ಸಿಎಂ ಭೇಟಿ

  • 1 Aug 2024 11:22 AM IST

    ವಯನಾಡ್‌ನ ಇತ್ತೀಚಿನ ಬೆಳವಣಿಗೆ

  • 1 Aug 2024 11:15 AM IST

    ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

    ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ವಿವಿಧ ಏಜೆನ್ಸಿಗಳು ಮತ್ತು ಸಶಸ್ತ್ರ ಪಡೆಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಗುರುವಾರ ವಯನಾಡಿನಲ್ಲಿ ಸರ್ವಪಕ್ಷ ಸಭೆ ನಡೆಸಲಿದ್ದಾರೆ.

    ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿರುವ ರಾಜ್ಯದ ಸಚಿವರು, ವಯನಾಡಿನ ಶಾಸಕರು, ರಾಜಕೀಯ ಪಕ್ಷದ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಕಾಂಗ್ರೆಸ್ ನಾಯಕ, ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸರ್ವಪಕ್ಷಗಳ ಸಭೆ ಬಳಿಕ ಜಿಲ್ಲೆಯ ಭೂಕುಸಿತ ಪೀಡಿತ ವುದೇಶಗಳಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

  • 1 Aug 2024 11:12 AM IST

    ಇಂದು ಬೈಲಿ ಸೇತುವೆ ಸಿದ್ಧವಾಗಬಹುದು

  • 1 Aug 2024 11:11 AM IST

    ಸಿಎಂ ಪರಿಹಾರ ನಿಧಿಗೆ ದೇಣಿಗೆ ಕೇಳಿದ ಪಿಣರಾಯಿ ವಿಜಯನ್

    ಭೂಕುಸಿತದಿಂದ ಸಂತ್ರಸ್ತರ ನೆರವಿಗೆ ಎಲ್ಲರೂ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (ಸಿಎಂಡಿಆರ್‌ಎಫ್) ದೇಣಿಗೆ ನೀಡುವಂತೆ ಸಿಎಂ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.

    ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸುಫ್ ಅಲಿ, ಪ್ರಮುಖ ಕೈಗಾರಿಕೋದ್ಯಮಿ ರವಿ ಪಿಳ್ಳೆ, ಕಲ್ಯಾಣ್ ಜುವೆಲ್ಲರ್ಸ್ ಮಾಲೀಕ ಕಲ್ಯಾಣ ರಾಮನ್, ಕೆಎಸ್ಎಫ್‌ಇ ಮತ್ತು ಅದಾನಿ ಗ್ರೂಪ್ ತಲಾ 5 ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿವೆ ಎಂದು ಅವರು ಹೇಳಿದರು.

    ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಬುಧವಾರ ಘೋಷಿಸಿದ್ದ 5 ಕೋಟಿ ರೂ.ಗಳ ನೆರವನ್ನು ಇಂದು ನಮಗೆ ಹಸ್ತಾಂತರಿಸಲಾಗಿದೆ ಎಂದು ಸಿಎಂ ಹೇಳಿದರು.

  • 1 Aug 2024 10:44 AM IST

    1,500 ಕ್ಕೂ ಹೆಚ್ಚು ಜನರ ರಕ್ಷಣೆ: ಪಿಣರಾಯಿ ವಿಜಯನ್

    ವಯನಾಡ್ ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಿಂದ 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

    ಮೊದಲ ಹಂತದಲ್ಲಿ, ದುರಂತದ ಸಮೀಪದ ‌ಪ್ರದೇಶಗಳಲ್ಲಿನ 68 ಕುಟುಂಬಗಳ 206 ಜನರನ್ನು ಮೂರು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇದರಲ್ಲಿ 75 ಪುರುಷರು, 88 ಮಹಿಳೆಯರು ಮತ್ತು 43 ಮಕ್ಕಳು ಸೇರಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

    ಭೂಕುಸಿತದ ನಂತರ, ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಪರಿಣಾಮವಾಗಿ ಸಿಲುಕಿಕೊಂಡಿದ್ದ 1,386 ಜನರನ್ನು ಮತ್ತು ಅವರ ಮನಗಳಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ. ಇದರಲ್ಲಿ 528 ಪುರುಷರು, 559 ಮಹಿಳೆಯರು ಮತ್ತು 299 ಮಕ್ಕಳನ್ನು ಏಳು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂರ ಒಂದು ಜನರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ 90 ಮಂದಿ ಪುಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

    ವಯನಾಡ್ ಜಿಲ್ಲೆಯಲ್ಲಿ ಪ್ರಸ್ತುತ 82 ಪರಿಹಾರ ಶಿಬಿರಗಳಲ್ಲಿ 8,017 ಜನರಿದ್ದಾರ ಎಂದು ವಿಜಯನ್ ಹೇಳಿದರು. ಇದರಲ್ಲಿ 19 ಗರ್ಭಿಣಿಯರು ಸೇರಿದ್ದಾರೆ. ಮಪ್ಪಾಡಿಯಲ್ಲಿ ಎಂಟು ಶಿಬಿರಗಳಿವೆ, ಅಲ್ಲಿ 421 ಕುಟುಂಬಗಳ 1,486 ಜನರು ಪುಸ್ತುತ ನೆಲೆಸಿದ್ದಾರೆ. ಪಕ್ಕದ ಮಲಪ್ಪುರಂ ಜಿಲ್ಲೆಗೆ ನದಿಯಲ್ಲಿ ತೇಲುತ್ತಿರುವ ಮೃತದೇಹಗಳನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

    ರಕ್ಷಣಾ ಕಾರ್ಯಾಚರಣೆಗೆ 1,167 ಸಿಬ್ಬಂದಿಯ ತಂಡವನ್ನು ನಿಯೋಜಿಸಲಾಗಿದೆ. 10 ಠಾಣಾಧಿಕಾರಿಗಳ ನೇತೃತ್ವದಲ್ಲಿ 645 ಅಗ್ನಿ ಶಾಮಕ ದಳದವರು, 94 ಎನ್‌ಡಿಆರ್‌ಎಫ್‌ ಸಿಬ್ಬಂದಿ, 167 ಜಿಲ್ಲಾ ಸೈನಿಕ ಕಲ್ಯಾಣ ಕೇಂದ್ರದ ಸಿಬ್ಬಂದಿ, ಮದ್ರಾಸ್ ಎಂಜಿನಿಯರ್ ಗ್ರೂಪ್‌ನ 153 ಸಿಬ್ಬಂದಿ ಮತ್ತು ಮಂಗಳವಾರ ಆಗಮಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಇದರಲ್ಲಿ ಸೇರಿದ್ದಾರೆ ಎಂದು ವಿಜಯನ್ ಹೇಳಿದರು.

  • 1 Aug 2024 10:36 AM IST

    ರಾಹುಲ್, ಪ್ರಿಯಾಂಕಾ ವಯನಾಡಿಗೆ ಪ್ರಯಾಣ

Read More
Next Story