Wayanad Landslide | ಸಾವಿನ ಸಂಖ್ಯೆ 320ಗೆ ಏರಿಕೆ: ಕಾಂಗ್ರೆಸ್ 100 ಮನೆಗಳನ್ನು ನಿರ್ಮಿಸುತ್ತದೆ- ರಾಹುಲ್ ಗಾಂಧಿ
ಭೂಕುಸಿತ ಪೀಡಿತ ಪ್ರದೇಶದ 6 ವಲಯಗಳಲ್ಲಿ ಭೂಸೇನೆ, ಎನ್‌ಡಿಆರ್‌ಎಫ್, ಡಿಎಸ್‌ಜಿ, ಕೋಸ್ಟ್ ಗಾರ್ಡ್, ನೌಕಾಪಡೆ, ಎಂಇಜಿ, ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಒಳಗೊಂಡ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಮಳೆ ಮತ್ತು ಸವಾಲಿನ ಭೂಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ತಂಡಗಳು ನಾಪತ್ತೆಯಾದವರಿಗೆ ಹುಡುಕಾಟ ನಡೆಸಿದರು. ಸಾವಿನ ಸಂಖ್ಯೆ 199 ಎಂದು ಸರ್ಕಾರ ಹೇಳಿದೆ, ಆದರೆ ಬೇರೆ ಮೂಲಗಳ ಪ್ರಕಾರ ಸಾವಿನ ಸಂಖ್ಯೆ 320 ದಾಟಿದೆ ಎಂದು ಹೇಳಲಾಗುತ್ತದೆ. ದುರಂತದಲ್ಲಿ 264 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೆಲವು ಕಡೆಗಳಲ್ಲಿ ದೇಹದ ಭಾಗಗಳು ಸಿಕ್ಕಿವೆ, ಇದೀಗ ಅವುಗಳ ಆನುವಂಶಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದೆಂಬ ಭಯವು ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇರಳ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಪ್ರತಿಕೂಲ ವಾತಾವರಣದ ನಡುವೆಯೂ ಪಡವೆಟ್ಟಿ ಕುನ್ನು ಎಂಬಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಇದರಿಂದ ಆಶದಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. 190 ಅಡಿ ಉದ್ದದ ಬೈಲಿ ಸೇತುವೆಯ ಪೂರ್ಣಗೊಂಡಿಂದರಿಂದ ಶುಕ್ರವಾರ ಮುಂಜಾನೆ ಆರಂಭವಾದ 40 ತಂಡಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯಕವಾಗಿದೆ. ಅತ್ಯಂತ ಕೆಟ್ಟ ಪರಿಸ್ಥಿತಿ ಇರುವ ಮುಂಡಕ್ಕೆ ಮತ್ತು ಚೂರಲ್ಮಲಾ ಕುಗ್ರಾಮಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬ್ಯುಲೆನ್ಸ್‌ಗಳು ಸೇರಿದಂತೆ ಭಾರೀ ಯಂತ್ರಗಳ ಕೊಂಡಯ್ಯಬಹುದಾಗಿದೆ.
6 ವಲಯಗಳಲ್ಲಿ 40 ತಂಡಗಳು
ಬೆಳಿಗ್ಗೆ 7 ಗಂಟೆಗೆ ಶ್ವಾನದಳಗಳೊಂದಿಗೆ ರಕ್ಷಕರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭೂಕುಸಿತ ಪೀಡಿತ ಪ್ರದೇಶಗಳ ಆರು ವಲಯಗಳಲ್ಲಿ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ - ಅಟ್ಟಮಲ ಮತ್ತು ಆರಣಮಲ, ಮುಂಡಕ್ಕೆ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್ ವೆಳ್ಳರಿಮಲ, ಮತ್ತು ನದಿ ದಂಡೆ.
ಜಂಟಿ ತಂಡಗಳಲ್ಲಿ ಸೇನೆ, ಎನ್‌ಡಿಆರ್‌ಫ್, ಡಿಎಸ್‌ಜಿ, ಕೋಸ್ಟ್ ಗಾರ್ಡ್, ನೌಕಾಪಡೆ ಮತ್ತು ಎಂಇಜಿ ಸಿಬ್ಬಂದಿ ಮತ್ತು ಮೂವರು ಸ್ಥಳೀಯರು ಮತ್ತು ಒಬ್ಬ ಅರಣ್ಯ ಇಲಾಖೆ ಉದ್ಯೋಗಿ ಇದ್ದಾರೆ.
Live Updates
- 2 Aug 2024 1:12 PM IST
Wayanad landslide | Indian Army found 4 alive individuals - two males and two females - who were stranded in Padavetti Kunnu, Wayanad. The operation was carried out with precision and care, ensuring the safety of all individuals involved. A casualty evacuation was coordinated and…
— ANI (@ANI) August 2, 2024 - 2 Aug 2024 11:13 AM IST
#WATCH | Wayanad Landslide | ADGP, Law & Order Kerala, MR Ajith Kumar says, "In the last four days we have been doing operations here. A joint team of the Indian army, the NDRF, the local police, special operations groups, the fire force, the Coast Guard and the Navy have been… pic.twitter.com/G19XhjpubZ
— ANI (@ANI) August 2, 2024 - 2 Aug 2024 11:13 AM IST
Indian Air Force undertakes simultaneous HADR operations in Wayanad and Uttarakhand hills. Following the recent cloud burst incident in Uttarakhand, IAF Chinook and Mi-17V5 helicopters are positioned at Gaucher, actively deploying NDRF teams, relief material, and conducting… pic.twitter.com/pleBmWFWEa
— ANI (@ANI) August 2, 2024 - 2 Aug 2024 11:13 AM IST
#WATCH | Kerala: Search and rescue operations continue at landslide-affected Chooralmala in Wayanad.
— ANI (@ANI) August 2, 2024
Death toll stands at 308, as per Kerala Health Minister pic.twitter.com/wzaZrps7RT - 2 Aug 2024 11:12 AM IST
40 ತಂಡಗಳಿಂದ ಶೋಧ ಕಾರ್ಯಾಚರಣೆ
ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯಲ್ಲಿ ಮಳೆ ಮತ್ತು ಪ್ರತಿಕೂಲ ವಾತಾವರಣದಲ್ಲೂ ನಾಲ್ಕನೇ ದಿನವಾದ ಶುಕ್ರವಾರ 40 ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
190 ಅಡಿ ಉದ್ದದ ಬೈಲಿ ಸೇತುವ ಪೂರ್ಣಗೊಂಡ ಕಾರಣ ಮುಂಜಾನೆಯೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಪ್ರಾರಂಭವಾಗಿದೆ. ಇದೀಗ ಮುಂಡಕ್ಕೆ ಮತ್ತು ಚೂರಲ್ಮಲಾ ಕುಗ್ರಾಮಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಒಳಗೊಂಡಂತೆ ಭಾರೀ ಯಂತ್ರಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಿದೆ.
40 ತಂಡಗಳು ಭೂಕುಸಿತ ಪೀಡಿತ ಪ್ರದೇಶಗಳ ಆರು ವಲಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಿವೆ – ಅಟ್ಟಮಲ ಮತ್ತು ಆರನ್ಮಲ, ಮುಂಡಕ್ಕೆ, ಪುಂಚಿರಿಮಟ್ಟಂ, ವಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್ ಬೆಳ್ಳರಿಮಲ , ಮತ್ತು ನದಿ ದಂಡೆ.
ಜಂಟಿ ತಂಡಗಳಲ್ಲಿ ಸೇನೆ, ಎನ್‌ಡಿಆರ್‌ಎಫ್, ಡಿಎಸ್‌ಜಿ, ಕೋಸ್ಟ್ ಗಾರ್ಡ್, ನೌಕಾಪಡೆ ಮತ್ತು ಎಂಇಜಿ ಸಿಬ್ಬಂದಿ ಮತ್ತು ಮೂವರು ಸ್ಥಳೀಯರು ಮತ್ತು ಒಬ್ಬ ಅರಣ್ಯ ಇಲಾಖೆ ನೌಕರರು ಇರುತ್ತಾರೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ರೂಪಿಸಿರುವ ರಕ್ಷಣಾ ಯೋಜನೆಯ ಪ್ರಕಾರ ಚಾಲಿಯಾರ್ ನದಿಯನ್ನು ಕೇಂದ್ರೀಕರಿಸಿ ಮೂರು ಹಂತದ ಶೋಧ ಕಾರ್ಯ ಆರಂಭವಾಗಲಿದೆ.
ಚಾಲಿಯಾರ್‌ನ 40 ಕಿಮೀ ವ್ಯಾಪ್ತಿಯಲ್ಲಿರುವ ಎಂಟು ಪೊಲೀಸ್ ಠಾಣೆಗಳು ಸ್ಥಳೀಯ ಈಜು ತಜ್ಞರೊಂದಿಗೆ ಸೇರಿಕೊಂಡು ನದಿಯ ಕೆಳಭಾಗದಲ್ಲಿ ಹಾರಿಹೋಗಿರುವ ಅಥವಾ ನದಿ ದಡದಲ್ಲಿ ಸಿಕ್ಕಿಬಿದ್ದಿರುವ ಮೃತದೇಹಗಳನ್ನು ಹುಡುಕಲಿವೆ.
ಅದೇ ಸಮಯದಲ್ಲಿ, ಪೊಲೀಸ್ ಹಲಿಕಾಪ್ಟರ್ ಬಳಸಿ ಮತ್ತೊಂದು ಶೋಧ ಕಾರ್ಯಾಚರಣೆ ನಡೆಸಲಾಗುವುದು. ಇದಲ್ಲದೇ, ಕೋಸ್ಟ್ ಗಾರ್ಡ್, ನೌಕಾಪಡೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ರಕ್ಷಣಾ ಯೋಜನೆಯ ಪುಕಾರ, ನದಿ ದಡಗಳು ಮತ್ತು ಮೃತದೇಹಗಳು ಸಿಕ್ಕಿಬೀಳಬಹುದಾದ ಪ್ರದೇಶಗಳನ್ನು ಕೇಂದ್ರೀಕರಿಸಿ ಶೋಧ ಕಾರ್ಯಾಚರಣೆ ನಡೆಸಲಿವೆ.
ಕಸರಿನಲ್ಲಿ ಹೂತು ಹೋಗಿರುವ ಮೃತದೇಹಗಳನ್ನು ಪತ್ತೆ ಮಾಡಲು ಶನಿವಾರ ದೆಹಲಿಯಿಂದ ರಾಡಾರ್ ಬರಲಿವೆ ಎಂದು ರಾಜ್ಯ ಕಂದಾಯ ಸಚಿವ ಕೆ.ರಾಜನ್ ಒಂದು ದಿನದ ಹಿಂದೆ ಹೇಳಿದ್ದರು. ಪ್ರಸ್ತುತ ಆರು ಶ್ಯಾನಗಳು ಶೋಧ ಕಾರ್ಯದಲ್ಲಿ ನೆರವಾಗುತ್ತಿದ್ದು, ಇನ್ನೂ ನಾಲ್ಕು ಶ್ವಾನಗಳು ತಮಿಳುನಾಡಿನಿಂದ ವಯನಾಡಿಗೆ ಆಗಮಿಸಲಿವೆ ಎಂದು ತಿಳಿಸಿದ್ದಾರೆ.