ಕ್ರಿಕೆಟಿಗ ಶಿಖರ್ ಧವನ್ ನಿವೃತ್ತಿ
x

ಕ್ರಿಕೆಟಿಗ ಶಿಖರ್ ಧವನ್ ನಿವೃತ್ತಿ

ಶಿಖರ್‌ ಧವನ್(38)‌ ಕ್ರಿಕೆಟ್ಟಿನ ಎಲ್ಲಾ ಮೂರು ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.34 ಟೆಸ್ಟ್, 167 ಒಂದು ದಿನದ ಪಂದ್ಯ ಮತ್ತು 68 ಟಿ 20 ಪಂದ್ಯಗಳಲ್ಲಿ ಆಡಿದ್ದಾರೆ.


ನವದೆಹಲಿ: ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್(38) ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು 2 ವರ್ಷದಿಂದ ಯಾವುದೇ ರಾಷ್ಟ್ರೀಯ ಪಂದ್ಯಗಳಲ್ಲಿ ಆಟವಾಡಿಲ್ಲ.

2010 ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಒಂದು ದಿನದ ಪಂದ್ಯದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ ಅವರು, ಆನಂತರ ಎಲ್ಲಾ ಮೂರು ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.

ʻಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಿದ್ದು, ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಗಳ ಹೊರೆ ಹೊತ್ತಿದ್ದೇನೆ. ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು! ಜೈ ಹಿಂದ್!,ʼ ಎಂದು ಧವನ್ ಎಕ್ಸ್ ನ‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ʻಜೀವನದಲ್ಲಿ ಮುಂದುವರಿಯುವಿಕೆ ಮುಖ್ಯ; ಅದಕ್ಕಾಗಿ ಅಂತಾರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇಷ್ಟು ದಿನ ದೇಶಕ್ಕಾಗಿ ಆಡಿದ್ದು, ಶಾಂತಿಯಿಂದ ಹೊರಡುತ್ತಿದ್ದೇನೆ,ʼ ಎಂದು ಹೇಳಿದ್ದಾರೆ.

ಧವನ್ 34 ಟೆಸ್ಟ್, 167 ಒಂದು ದಿನದ ಪಂದ್ಯ ಮತ್ತು 68 ಟಿ 20 ಪಂದ್ಯಗಳಲ್ಲಿ ಆಡಿದ್ದಾರೆ. 50 ಓವರ್‌ಗಳ ಸ್ವರೂಪದಲ್ಲಿ 44.11 ಸರಾಸರಿಯಲ್ಲಿ 6,793 ರನ್‌ ಹಾಗೂ ಟೆಸ್ಟ್‌ಗಳಲ್ಲಿ 40.61 ಸರಾಸರಿಯಲ್ಲಿ 2,315 ರನ್‌ ಗಳಿಸಿದ್ದಾರೆ.

Read More
Next Story