ಭಾರತ-ಶ್ರೀಲಂಕಾ ಒಂದು ದಿನದ ಪಂದ್ಯ ನಾಟಕೀಯ ಡ್ರಾ
x

ಭಾರತ-ಶ್ರೀಲಂಕಾ ಒಂದು ದಿನದ ಪಂದ್ಯ ನಾಟಕೀಯ ಡ್ರಾ

ಶ್ರೀಲಂಕಾದ 230 ರನ್‌ ಗುರಿಯನ್ನು ಹಿಂಬಾಲಿಸಿದ ಭಾರತd ಪರವಾಗಿ ನಾಯಕ ರೋಹಿತ್ ಶರ್ಮಾ 58(47 ಎಸೆತ), ಅಕ್ಷರ್ ಪಟೇಲ್ (33) ಮತ್ತು ಕೆ.ಎಲ್. ರಾಹುಲ್ (31) ರನ್‌ ಗಳಿಸಿದರು. ಆದರೆ, ಪಂದ್ಯ ಗೆಲ್ಲಲು ಅದು ಸಾಲಲಿಲ್ಲ.


ಭಾರತ ಮತ್ತು ಶ್ರೀಲಂಕಾ ನಡುವೆ ಕೊಲಂಬೋದಲ್ಲಿ ಶುಕ್ರವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯವು ರೋಚಕ ಡ್ರಾ ಆಗಿದೆ.

ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಶ್ರೀಲಂಕಾ, ದುನಿತ್ ವೆಲ್ಲಲಾಗೆ ಮತ್ತು ಪಾತುಮ್ ನಿಸ್ಸಾಂಕಾ ಅವರ ಅರ್ಧ ಶತಕಗಳ ನೆರವಿನಿಂದ 8 ವಿಕೆಟ್‌ಗೆ 230 ರನ್ ಗಳಿಸಿತು.ಈ ಮೊತ್ತವು ನಿಧಾನಗತಿಯ ಬೌಲರ್‌ಗಳಿಗೆ ನೆರವಾಗುವ ಪಿಚ್‌ ನಲ್ಲಿ ಉತ್ತಮ ಮೊತ್ತವಾಗಿತ್ತು. ವೆಲ್ಲಲಾಗೆ 65 ಎಸೆತಗಳಲ್ಲಿ 7 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ 67 ರನ್‌ ಗಳಿಸಿ ಔಟಾಗದೆ ಉಳಿದರು. ನಿಸ್ಸಾಂಕ 75 ಎಸೆತಗಳಲ್ಲಿ 56 ರನ್ ಗಳಿಸಿದರು.

ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (10 ಓವರ್‌ಗಳಲ್ಲಿ 2/33) ಮತ್ತು ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ (10 ಓವರ್‌ಗಳಲ್ಲಿ 1/33) ಮಿತವ್ಯಯಿಗಳಾಗಿದ್ದು, ಸೀಮರ್‌ಗಳಾದ ಶಿವಂ ದುಬೆ, ಅರ್ಶ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ತಲಾ ಒಂದು ವಿಕೆಟ್ ಪಡೆದರು. ಕೊನೆಯ 20 ಓವರ್‌ಗಳಲ್ಲಿ 118 ರನ್ ಸೇರಿಸಲಾಯಿತು.

ಭಾರತದ ಪರ ಆಟ ಆರಂಭಿಸಿದ ನಾಯಕ ರೋಹಿತ್ ಶರ್ಮಾ 47 ಎಸೆತಗಳಲ್ಲಿ 58 ರನ್, ಅಕ್ಷರ್ ಪಟೇಲ್ (33) ಮತ್ತು ಕೆ.ಎಲ್. ರಾಹುಲ್ (31) ರನ್‌ ಕೊಡುಗೆ ನೀಡಿದರು. ಚರಿತ್ ಅಸಲಂಕಾ (3/30) ಮತ್ತು ವನಿಂದು ಹಸರಂಗ (3/58) ಆತಿಥೇಯರ ಪರ ಉತ್ತಮವಾಗಿ ಬೌಲ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 230 (ಪಾತುಮ್ ನಿಸ್ಸಾಂಕ 56, ದುನಿತ್ ವೆಲ್ಲಲಾಗೆ ಔಟಾಗದೆ 67, ಅಕ್ಷರ್ ಪಟೇಲ್ 2/33, ಕುಲದೀಪ್ ಯಾದವ್ 1/33).

ಭಾರತ: 47.5 ಓವರ್‌ಗಳಲ್ಲಿ 230 ಆಲೌಟ್ (ರೋಹಿತ್ ಶರ್ಮಾ 58; ಚರಿತ್ ಅಸಲಂಕಾ 3/30, ವನಿಂದು ಹಸರಂಗ 3/58).

Read More
Next Story