ಲಾಲ್‌ಬಾಗ್‌ಗೆ ಲಗ್ಗೆ ಇಟ್ಟ ಲಂಟಾನೆಗಳ ಹಿಂಡು…

ದಿ ರಿಯಲ್ ಎಲಿಫೆಂಟ್ ಕಲೆಕ್ಟೀವ್ ವತಿಯಿಂದ ಲಂಟಾನ ಆನೆಗಳ ಪ್ರದರ್ಶನವನ್ನು ಲಾಲ್‌ಬಾಗ್‌ನಲ್ಲಿ ಹಮ್ಮಿಕೊಳ್ಳಲಾದೆ.

 &
ಲಾಲ್‌ಬಾಗ್‌ಗೆ ಲಗ್ಗೆ ಇಟ್ಟ ಲಂಟಾನೆಗಳ ಹಿಂಡು…
x
ದಿ ರಿಯಲ್ ಎಲಿಫೆಂಟ್ ಕಲೆಕ್ಟೀವ್ ವತಿಯಿಂದ ಲಂಟಾನ ಆನೆಗಳ ಪ್ರದರ್ಶನ ನಡೆಯುತ್ತಿದೆ.
Click the Play button to hear this message in audio format

ಶನಿವಾರದಂದು ಲಾಲ್ ಬಾಗ್ ಗಾಜಿನ ಮನೆಯ ಹಿಂಭಾಗದ ಹುಲ್ಲುಹಾಸಿನ ಮೇಲೆ ಆನೆಗಳ ಗುಂಪೊಂದು ಪ್ರತ್ಯೇಕ್ಷವಾಗಿದೆ. ಈ ಆನೆಗಳ ಗುಂಪುಗಳನ್ನು ಮಕ್ಕಳು, ಹಿರಿಯರೆಲ್ಲ ಅತ್ಯಂತ ಸಂತಸದಿಂದ ಕಣ್ತುಂಬಿಕೊಂಡ್ರು. ಆನೆಗಳೊಂದಿಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ರು. ಆದರೆ ಇವುಗಳು ಸ್ವಜೀವ ಆನೆಗಳಾಗಿರಲಿಲ್ಲ. ಈ ಆನೆಗಳೆಲ್ಲವು ಕಾಡಿನಲ್ಲಿ ಬೆಳೆಯುವ ಲಂಟಾನ ಕಳೆಗಳಿಂದ ಮಾಡಲ್ಪಟ್ಟಿರುವ ಆನೆಗಳು.

ದಿ ರಿಯಲ್ ಎಲಿಫೆಂಟ್ ಕಲೆಕ್ಟೀವ್ ವತಿಯಿಂದ ಈ ಆನೆಗಳ ಪ್ರದರ್ಶವನ್ನು ಹಮ್ಮಿಕೊಂಡಿದ್ದು, ಮಾನವ-ಪ್ರಾಣಿ ಸಹಬಾಳ್ವೆಗೆ ಒತ್ತು ನೀಡುವ ಉದ್ದೇಶವನ್ನು ಈ ಪ್ರದರ್ಶನ ಹೊಂದಿದೆ. ಇವುಗಳ ಕಲಾಕೃತಿಗಳನ್ನು ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಬೆಟ್ಟ ಕುರುಬ, ಪಣಿಯ ಹೀಗೆ ವಿವಿಧ ಬುಡಕಟ್ಟುಗಳ 150 ಕುಶಲಕರ್ಮಿಗಳು ತಯಾರಿಸಿದ್ದಾರೆ.

ಪ್ರಸ್ತುತ ಈ ಪ್ರದರ್ಶನದಲ್ಲಿ ಒಟ್ಟು 60 ಆನೆಗಳ ಕಲಾಕೃತಿಗಳಿದ್ದು, ಅಮ್ಮನೊಂದಿಗೆ ತೆರಳುವ ಮರಿ, ಗುಂಪಾಗಿ ಅವುಗಳು ಸಂಚಾರ ಮಾಡುವ ದೃಶ್ಯ ಸೇರಿದಂತೆ ಆನೆಗಳು ಕಾಡಿನಲ್ಲಿ ಯಾವ ರೀತಿಯ ಜೀವನಶೈಲಿಯನ್ನು ಅನುರಿಸುತ್ತವೆ ಎಂಬುವುದನ್ನು ಈ ಕಲಾಕೃತಿಗಳ ಮೂಲಕ ಅನಾವರಣಗೊಳಿಸಲಾಗಿದೆ. ಈ ಪ್ರದರ್ಶನವು ಫೆಬ್ರವರಿ 3 ರಿಂದ ಆರಂಭಗೊಂಡಿದ್ದು,ಮಾರ್ಚ್ 3ರ ಒಂದು ತಿಂಗಳ ಕಾಲ ಪ್ರದರ್ಶಿಸಲಾಗುತ್ತಿದೆ.

ಈ ಆನೆಗಳ ವಿಶೇಷತೆ ಏನು?

ಈ ಆನೆಗಳ ಮುಖ್ಯ ವಿಶೇಷತೆ ಏನಂದ್ರೆ ಇವುಗಳನ್ನು ಕಾಡಿನಲ್ಲಿ ಬೆಳೆಯುವ ಲಂಟಾನ ಅಥವಾ ರೋಜುವಾರು ಗಿಡದ ಕಾಂಡದಿಂದ ತಯಾರಿಸಲಾಗುತ್ತದೆ. ಲಂಟಾನ ಗಿಡಗಳು ಹೆಚ್ಚಾಗಿ ಕಾಡು ಮತ್ತು ಸಾಗುವಳಿ ಪ್ರದೇಶದಲ್ಲಿ ಬೆಳೆಯುವ ಒಂದು ಕಳೆ ಗಿಡವಾಗಿದ್ದು, ಇದು ಬಹಳ ಅಪಾಯಕಾರಿಯೂ ಆಗಿದೆ. ಇದನ್ನು ನಿರ್ಮೂಲನೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಅರಣ್ಯ ಇಲಾಖೆ ಮಾಡಲಾಗುತ್ತಿದೆ. ಆದರೆ ಏನಕ್ಕೂ ಬಾರದ ಈ ಕಳೆ ಗಿಡಗಳನ್ನು ಈ ಬುಡಗಟ್ಟು ಜನಾಂಗದವರು ಒಂದು ಅದ್ಭುತ ಪರಿಕಲ್ಪನೆಯನ್ನು ಇಟ್ಟುಕೊಂಡು ಕಸದಿಂದ ರಸ ಎಂಬಂತೆ ಸುಂದರವಾದ ಕಲಾಕೃತಿಗಳನ್ನು ಹೊರತಂದಿದ್ದಾರೆ. ಇವರ ಈ ಪ್ರಯತ್ನವನ್ನು ರಿಯಲ್ ಕಮ್ಯೂನಿಟಿ ಬೆಳಕಿಗೆ ತಂದಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ಅವರು ದ. ಫೆಡರಲ್ ಕರ್ನಾಟಕ್ಕೆ ಮಾಹಿತಿ ನೀಡಿದ್ದಾರೆ.

ಲಂಟಾನ ಆನೆಗಳ ತಯಾರಿ ಹೇಗೆ?

ಈ ಲಂಟಾನದ ಆನೆಗಳನ್ನು ತಯಾರಿಸಲು ಬುಡಗಟ್ಟು ಜನಾಂಗದವರು ಅರಣ್ಯಕ್ಕೆ ತೆರಳಿ ಈ ಗಿಡಗಳನ್ನು ಕತ್ತರಿಸಿ ಸಂಗ್ರಹಿಸಿ ಇಡುತ್ತಾರೆ. ಇವುಗಳನ್ನು ದೊಡ್ಡ ಕಡಾಯಿಗಳಲ್ಲಿ ಹಾಕಿ ಬರೋಬ್ಬರಿ ಐದು ಗಂಟೆಗಳ ಕಾಲ ಬಿಸಿನೀರಿನಲ್ಲಿ ಬೇಯಿಸುತ್ತಾರೆ. ಲಂಟಾಟನದ ಸಿಪ್ಪೆಯನ್ನು ಬಿಡಿಸಿ ಇವುಗಳನ್ನು ಹದ ಮಾಡಿ ಇಟ್ಟುಕೊಳ್ಳುತ್ತಾರೆ. ಆನೆಯ ಆಕೃತಿಗೆ ಬೇಕಾಗುವ ಉದ್ದ ಅಗಲ ಸೇರಿದಂತೆ ಕಲಾಕೃತಿಯ ಚೌಕಟ್ಟನ್ನು ಕಬ್ಬಿಣದಿಂದ ತಯಾರಿಸಿ, ಹೊರಭಾಗದಲ್ಲಿ ಲಂಟಾನವನ್ನು ಬಳಸಿ ಸುಂದರವಾದ ಕಲಾಕೃತಿಗಳನ್ನು ತಯಾರಿಸುತ್ತಾರೆ. ಇನ್ನೊಂದು ವಿಶೇಷವೆಂದರೆ ಇವುಗಳಿಗೆ ಯಾವುದೇ ರೀತಿಯ ರಾಸಾಯನಿಕವನ್ನು ಬಳಸಲಾಗುವುದಿಲ್ಲ.

ಅಪಾಯಕಾರಿ ಸಸ್ಯ ಲಂಟಾನ

ಲಂಟಾನ ಗಿಡಗಳು ವರ್ಭಿನೇಶಿಯ ಪ್ರಭೇದಕ್ಕೆ ಸೇರಿದವುಗಳಾಗಿವೆ. ಇದು ಭಾರತದ ಅರಣ್ಯ ಪ್ರದೇಶಗಳಲ್ಲಿ, ಸಾಗುವಳಿ ಪ್ರದೇಶಗಲ್ಲಿ ಹೆಚ್ಚು ಬೆಳೆಯುವ ಸಸ್ಯಗಳಾಗಿವೆ. ಇದು ಬೆಳೆಯುವ ಜಾಗದಲ್ಲಿ ಹುಲ್ಲು, ಬಿದಿರಿನ ಬೆಳವಣಿಗೆ ಕುಂಟಿತವಾಗಿ ಆನೆ, ಜಿಂಕೆಗಳಂತಹ ಸಸ್ಯಹಾರಿ ಪ್ರಾಣಿಗಳಿಗೆ ಆಹಾರಕ್ಕೂ ಧಕ್ಕೆ ಉಂಟಾಗುತ್ತದೆ.

250ಕ್ಕೂ ಹೆಚ್ಚು ಪ್ರತಿರೂಪ

ಕಾಡಿಗೆ ಕಂಟಕವಾಗಿರುವ ಲಂಟಾನ ಗಿಡಗಳನ್ನು ಆದಿವಾಸಿಗಳು ತಮ್ಮ ಕರ ಕುಶಲತೆಯ ಮೂಲಕ ಇದುವರೆಗೆ 250 ಆನೆಗಳ ಕಲಾಕೃತಿಗಳನ್ನು ಕೆತ್ತಿದ್ದಾರೆ. ಈ ಪ್ರತಿರೂಪಗಳ ಪೈಕಿ 100 ಆನೆಗಳ ಪ್ರತಿರೂಪವನ್ನು ಲಂಡನ್ನ ಬಂಕಿಂಗ್ ಹ್ಯಾಮ್ ಅರಮನೆಗೆ ನೀಡಿರುವುದು ಈ ಬಡಗಟ್ಟು ಜನಾಂಗದ ಕರಕುಶಲತೆಗೆ ಹೆಮ್ಮೆಯಾಗಿದೆ. ಇನ್ನೋಂದು ವಿಶೇಷತೆ ಅಂದ್ರೆ ಈ ಲಂಟಾನ ಸಸ್ಯ ಯುರೂಪಿಯನ್ನರು ವಿಶ್ವದಾದ್ಯಂತ ವಸಾಹತು ಸ್ಥಾಪಿಸುವಾಗ ಬ್ರಿಟಿಷ್ ಮಹಿಳೆಯೊಬ್ಬರ ಮೂಲಕ ಭಾರತಕ್ಕೆ ಪ್ರವೇಶಿಸಿತು ಎನ್ನಲಾಗಿದೆ. ಇದೀಗ ಇದೇ ಗಿಡದಿಂದ ತಯಾರಿಸಿದ ಆನೆಗಳನ್ನು ಬ್ರಿಟಿಷರಿಗೆ ಮಾರಾಟ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಇಂಥಹ ಅರಣ್ಯಕ್ಕೆ ಮಾರಿಯಾಗಿರುವ ಲಂಟಾನ ಗಿಡಗಳಿಂದ ತಯಾರಿಸಿದ, ಆನೆಗಳಪ್ರದರ್ಶನವನ್ನು ಕೈಗೊಳ್ಳುವ ಮೂಲಕ ಆನೆ ಮತ್ತು ಅರಣ್ಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದ್ದೆ. ಇನ್ನೂ ಬೆಳ್ಳಂ ಬೆಳ್ಳಗೆ ಲಾಲ್‌ಬಾಗ್‌ಗೆ ವಾಕಿಂಗ್ ಬರುವ ಮಂದಿ, ಪ್ರವಾಸಿಗರು, ಅಷ್ಟೆ ಅಲ್ಲದೆ ವೀಕೆಂಡ್‌ನಲ್ಲಿ ತಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಬಂದು ಲಾಂಟಾನಾ ಆನೆಗಳನ್ನು ಕಂಡು ಇದು ಇಲ್ಲೇ ಇದ್ದರೆ ಚಂದಾ ಎಂದು ಹೇಳುತ್ತಿದ್ದಾರೆ.

Next Story