ಪತಿಯ ಸಾವಿನ ಆಘಾತದಿಂದ ಪತ್ನಿ ಆತ್ಮಹತ್ಯೆ
x

ಪತಿಯ ಸಾವಿನ ಆಘಾತದಿಂದ ಪತ್ನಿ ಆತ್ಮಹತ್ಯೆ

25 ವರ್ಷದ ಯುವಕನ ದುರಂತ ಸಾವು ಹೃದಯಾಘಾತಕ್ಕೆ ಬಲಿಯಾಗುವ ಯುವ ವಯಸ್ಕರ ಸಂಖ್ಯೆಯಲ್ಲಿ ಆತಂಕಕಾರಿ ಹೆಚ್ಚಳದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ.


Click the Play button to hear this message in audio format

ತನ್ನ ನವವಿವಾಹಿತ ಪತ್ನಿಯೊಂದಿಗೆ ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ 25 ವರ್ಷದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಪತಿಯ ಹಠಾತ್ ನಿಧನದ ಆಘಾತವನ್ನು ಸಹಿಸಲಾಗದೆ, ಅವರ ಪತ್ನಿ ಗಾಜಿಯಾಬಾದ್‌ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಗಾರಿ ಘಟನೆ ನಡೆದಿದೆ.

ಪ್ರಾಪರ್ಟಿ ಡೀಲರ್‌ ಆಗಿರುವ ಅಭಿಷೇಕ್ ಅಹ್ಲುವಾಲಿಯಾ ಮತ್ತು ಅವರ ಪತ್ನಿ ಅಂಜಲಿ (22ವ) ಕಳೆದ ವರ್ಷ ನವೆಂಬರ್ 30 ರಂದು ವಿವಾಹವಾಗಿದ್ದರು. ಇವರು ಸೋಮವಾರ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಹ್ಲುವಾಲಿಯಾ ಅವರಿಗೆ ಹೃದಯಘಾತವಾಗಿತ್ತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮೃಗಾಲಯವನ್ನು ತಲುಪುತ್ತಿದ್ದಂತೆ ಅಭಿಷೇಕ್ ಎದೆನೋವು ಎಂದು ಹೇಳಿದ್ದರು. ಪತ್ನಿ ಅಂಜಲಿ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಕರೆ ಮಾಡಿದರು. ಅವರನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿಂದ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಆತನನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಅಹ್ಲುವಾಲಿಯಾ ಅವರ ದೇಹವನ್ನು ಮನೆಗೆ ತಂದ ಬಳಿಕ ಪತ್ನಿ ಅಂಜಲಿ ಮೃತದೇಹದ ಪಕ್ಕದಲ್ಲಿ ಕುಳಿತು ಅಳಲು ಆರಂಭಿಸಿದರು. ಬಳಿಕ ಅವರು ಗಾಜಿಯಾಬಾದ್‌ನ ವೈಶಾಲಿ, ಸೆಕ್ಟರ್ 3 ನಲ್ಲಿರುವ ಎಲ್ಕಾನ್ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಜಿಗಿದಿದ್ದಾರೆ. ಅವರನ್ನು AIIMS ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.

“ದೇಹವನ್ನು ಮನೆಗೆ ತಂದ ಬಳಿಕ ಅಂಜಲಿ ಅದರ ಪಕ್ಕದಲ್ಲಿ ಕುಳಿತು ಅಳುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿಯತ್ತ ಓಡಿದಳು. ಅವಳು ಜಿಗಿಯುತ್ತಾಳೆ ಎಂದು ನಾನು ಭಾವಿಸಿ ನಾನು ಅವಳ ಹಿಂದೆ ಓಡಿದೆ. ಆದರೆ ನಾನು ಅವಳನ್ನು ತಡೆಯುವ ಮೊದಲು ಅವಳು ಜಿಗಿದಿದ್ದಳು ಎಂದು ಅಭಿಷೇಕ್ ಅವರ ಸಂಬಂಧಿ ಬಬಿತಾ ಅವರು ಹೇಳಿದ್ದಾರೆ.

25 ವರ್ಷದ ಯುವಕನ ದುರಂತ ಸಾವು ಹೃದಯಾಘಾತಕ್ಕೆ ಬಲಿಯಾಗುವ ಯುವ ವಯಸ್ಕರ ಸಂಖ್ಯೆಯಲ್ಲಿ ಆತಂಕಕಾರಿ ಹೆಚ್ಚಳದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ಗರ್ಭಾ ಕಾರ್ಯಕ್ರಮಗಳಿಂದ ಹಿಡಿದು ಮದುವೆಯ ಮೆರವಣಿಗೆಗಳಲ್ಲಿ, ಜಿಮ್‌ಗಳಲ್ಲಿ ಯುವಕರು ಕುಸಿದು ಬಿದ್ದು, ನಂತರ ಹೃದಯಾಘಾತದಿಂದ ಸಾವನ್ನಪ್ಪುವ ಹಲವಾರು ಘಟನೆಗಳು ಕಳೆದ ಎರಡು ವರ್ಷಗಳಿಂದ ವರದಿಯಾಗಿವೆ.

(ಆತ್ಮಹತ್ಯೆಗಳನ್ನು ತಡೆಯಬಹುದು. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯವಾಣಿಗಳಿಗೆ ಕರೆ ಮಾಡಿ: ನೇಹಾ ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ - 044-24640050; ಆತ್ಮಹತ್ಯೆ ತಡೆಗಟ್ಟುವಿಕೆ, ಭಾವನಾತ್ಮಕ ಬೆಂಬಲ ಮತ್ತು ಆಘಾತದ ಸಹಾಯಕ್ಕಾಗಿ ಆಸರಾ ಸಹಾಯವಾಣಿ - +91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ - 5900000 0019, ದಿಶಾ 0471- 2552056, ಮೈತ್ರಿ 0484 2540530, ಮತ್ತು ಸ್ನೇಹಾಳ ಆತ್ಮಹತ್ಯೆ ತಡೆ ಸಹಾಯವಾಣಿ 044-24640050.)

Read More
Next Story