ಕೋಲ್ಕತ್ತಾದಲ್ಲಿ ಸ್ಫೋಟ: ವ್ಯಕ್ತಿಗೆ ಗಾಯ
x

ಕೋಲ್ಕತ್ತಾದಲ್ಲಿ ಸ್ಫೋಟ: ವ್ಯಕ್ತಿಗೆ ಗಾಯ


ಕೋಲ್ಕತ್ತಾದಲ್ಲಿ ಶನಿವಾರ ಮಧ್ಯಾಹ್ನ (ಸೆಪ್ಟೆಂಬರ್ 14) ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಂದಿ ಆಯುವ ವ್ಯಕ್ತಿ(58) ವಸ್ತುವನ್ನು ಎತ್ತಿಕೊಂಡಾಗ ಅದು ಸ್ಪೋಟಗೊಂಡು, ಬಲ ಮಣಿಕಟ್ಟಿನಲ್ಲಿ ಗಾಯಗಳಾಗಿವೆ.

ʻಬ್ಲಾಚ್‌ಮನ್ ಸ್ಟ್ರೀಟ್ ಮತ್ತು ಎಸ್.ಎನ್. ಬ್ಯಾನರ್ಜಿ ರಸ್ತೆಯ ವಿಭಜಕದಲ್ಲಿ ಘಟನೆ ಸಂಭವಿಸಿದೆ ಮತ್ತು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಮಧ್ಯಾಹ್ನ 1.45ರಲ್ಲಿ ಮಾಹಿತಿ ಬಂದಿತು,ʼ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆಜನರ ಪ್ರವೇಶವನ್ನು ನಿರ್ಬಂಧಿಸಿ, ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (ಬಿಡಿಡಿಎಸ್) ಕರೆಸಲಾಯಿತು. ಬಿಡಿಡಿಎಸ್ ಸಿಬ್ಬಂದಿ ಬ್ಯಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಪರಿಶೀಲನೆ ನಡೆಸಿದರು. ಆನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿ,ʼ ಸ್ಪೋಟ ಸಂಭವಿಸಿದಾಗ ಹತ್ತಿರದಲ್ಲೇ ನಿಂತಿದ್ದೆವು. ಸ್ಥಳಕ್ಕೆ ಓಡಿ ನೋಡಿದಾಗ ಚಿಂದಿ ಆಯುವ ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ನೋಡಿದೆವು. ಆತನ ಬಲಮಣಿಕಟ್ಟಿಗೆ ಗಾಯವಾಗಿತ್ತು. ಸ್ಫೋಟದ ಸದ್ದು ಜೋರಾಗಿತ್ತು.ಪೊಲೀಸರು ತಕ್ಷಣ ಆಗಮಿಸಿ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು,ʼ ಎಂದು ಹೇಳಿದ್ದಾರೆ.

Read More
Next Story