
ಲಂಚ ಸ್ವೀಕಾರ| ತುಮಕೂರು ಗ್ರಾಮಾಂತರ ಠಾಣೆ ಪಿಎಸ್ಐ ಬಂಧನ
ಹಣ ನೀಡದಿದ್ದರೆ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಪಿಎಸ್ಐ ಚೇತನ್ ಕುಮಾರ್ ವಿರುದ್ಧ ನಾಗೇಶ್ ವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸ್ ಸುಪರ್ದಿಯಲ್ಲಿದ್ದ ಕಾರು ಬಿಡುಗಡೆ ಮಾಡಲು 40 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಚೇತನ ಅವರನ್ನು ಶನಿವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಾಹನ ಬಿಡುಗಡೆ ಮಾಡಲು ನಾಗೇಶ್ ಎಂಬುವರಿಂದ 1 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಕ್ಯಾತ್ಸಂದ್ರ ಸಮೀಪದ ಹೋಟೆಲ್ ಸಿಬ್ಬಂದಿ ಮೂಲಕ ಮುಂಗಡವಾಗಿ 40 ಸಾವಿರ ರೂ. ಪಡೆಯುತ್ತಿದ್ದಾಗ ಶುಕ್ರವಾರ ರಾತ್ರಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಿಎಸ್ಐ ಚೇತನ್ ಕುಮಾರ್ ಹಣ ತೆಗೆದುಕೊಳ್ಳಲು ಹೇಳಿದ್ದರು ಎಂದು ಬಾಯಿ ಬಿಟ್ಟಿದ್ದಾರೆ. ಶನಿವಾರ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ಪಿಎಸ್ಐ ಚೇತನ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ನಾಗೇಶ್ ಎಂಬುವರು ಮೂರು ದಿನಗಳ ಹಿಂದೆ ಕೆಸರುಮಡು ಗ್ರಾಮದಲ್ಲಿ ಕಾರು ಬಿಟ್ಟು ಹೋಗಿದ್ದರು. ಕಾರು ವಶಕ್ಕೆ ಪಡೆದ ಗ್ರಾಮಾಂತರ ಠಾಣೆ ಪಿಎಸ್ಐ ಚೇತನ್ ಕುಮಾರ್ ಅವರು ಅದನ್ನು ಬಿಡುಗಡೆ ಮಾಡಲು 1 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹಣ ನೀಡದಿದ್ದರೆ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಪಿಎಸ್ಐ ಚೇತನ್ ಕುಮಾರ್ ವಿರುದ್ಧ ನಾಗೇಶ್ ವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

