ಫಾಕ್ಸ್‌ಕಾನ್‌ಗೆ ರಿಲೀಫ್: ವಿಶೇಷ ಹೂಡಿಕೆ ವಲಯ ಘೋಷಣೆ; ಗ್ರಾ.ಪಂ. ತೆರಿಗೆ ನೋಟಿಸ್ ರದ್ದು
x

ಫಾಕ್ಸ್‌ಕಾನ್‌ಗೆ ರಿಲೀಫ್: 'ವಿಶೇಷ ಹೂಡಿಕೆ ವಲಯ' ಘೋಷಣೆ; ಗ್ರಾ.ಪಂ. ತೆರಿಗೆ ನೋಟಿಸ್ ರದ್ದು

ಜನವರಿ 29ರಂದು ರಾಜ್ಯ ಸರ್ಕಾರವು ಫಾಕ್ಸ್‌ಕಾನ್ ಕಂಪನಿಗೆ ಮಂಜೂರಾಗಿರುವ ಪ್ರದೇಶವನ್ನು 'ವಿಶೇಷ ಹೂಡಿಕೆ ವಲಯ' (SIR) ಎಂದು ಅಧಿಕೃತವಾಗಿ ಘೋಷಿಸಿದೆ.


Click the Play button to hear this message in audio format

ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ 'ಫಾಕ್ಸ್‌ಕಾನ್' ಕಂಪನಿಗೆ ನೀಡಲಾಗಿದ್ದ ತೆರಿಗೆ ನೋಟಿಸ್‌ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ರದ್ದುಗೊಳಿಸಿದೆ. ಕಂಪನಿಗೆ ನೀಡಲಾದ ಜಮೀನನ್ನು 'ವಿಶೇಷ ಹೂಡಿಕೆ ವಲಯ' ಎಂದು ಘೋಷಿಸಿರುವುದರಿಂದ, ಇನ್ನು ಮುಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆರಿಗೆ ಅನ್ವಯಿಸುವುದಿಲ್ಲ ಎಂದು ಸಿಇಒ ಕೆ.ಎನ್. ಅನುರಾಧ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಮತ್ತು ಕೊಯಿರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫಾಕ್ಸ್‌ಕಾನ್ ಕಂಪನಿಗೆ 300 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಜಮೀನು ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ಕಾರಣ, ತೆರಿಗೆ ಪಾವತಿಸುವಂತೆ ಸೂಚಿಸಿ ಕಂಪನಿಗೆ ಈ ಹಿಂದೆ ಎಂಟು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಕಂಪನಿಯಿಂದ ಯಾವುದೇ ಉತ್ತರ ಬಂದಿರಲಿಲ್ಲ.

ನೋಟಿಸ್ ರದ್ದಾಗಿದ್ದು ಏಕೆ?

ಜನವರಿ 29ರಂದು ರಾಜ್ಯ ಸರ್ಕಾರವು ಫಾಕ್ಸ್‌ಕಾನ್ ಕಂಪನಿಗೆ ಮಂಜೂರಾಗಿರುವ ಪ್ರದೇಶವನ್ನು 'ವಿಶೇಷ ಹೂಡಿಕೆ ವಲಯ' (SIR) ಎಂದು ಅಧಿಕೃತವಾಗಿ ಘೋಷಿಸಿದೆ. ಈ ಘೋಷಣೆಯ ನಂತರ, ಸದರಿ ಪ್ರದೇಶವು ಗ್ರಾಮ ಪಂಚಾಯತ್ ಆಡಳಿತ ವ್ಯಾಪ್ತಿಯಿಂದ ಹೊರಗುಳಿಯುತ್ತದೆ.

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಜಿ.ಪಂ. ಸಿಇಒ ಅನುರಾಧ ಅವರು, "ಈ ಪ್ರದೇಶವು ಈಗ ಎಸ್‌ಐಆರ್ ಅಡಿಯಲ್ಲಿ ಬರುವುದರಿಂದ, ಗ್ರಾಮ ಪಂಚಾಯತ್‌ಗಳು ತೆರಿಗೆ ನೋಟಿಸ್ ನೀಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹೀಗಾಗಿ, ಈ ಹಿಂದೆ ನೀಡಲಾಗಿದ್ದ ನೋಟಿಸ್‌ಗಳನ್ನು ರದ್ದುಪಡಿಸಲಾಗಿದೆ," ಎಂದು ತಿಳಿಸಿದ್ದಾರೆ.

Read More
Next Story