Paris Olympics| ವಿನೇಶ್ ಫೋಗಟ್ ಮನವಿ: ಸಿಎಎಸ್ ನಿರ್ಧಾರ ಇಂದು ರಾತ್ರಿ 9:30 ಕ್ಕೆ
x

Paris Olympics| ವಿನೇಶ್ ಫೋಗಟ್ ಮನವಿ: ಸಿಎಎಸ್ ನಿರ್ಧಾರ ಇಂದು ರಾತ್ರಿ 9:30 ಕ್ಕೆ


ಪ್ಯಾರಿಸ್: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಒಲಿಂಪಿಕ್ ಫೈನಲ್‌ನಿಂದ ಅನರ್ಹಗೊಳಿಸುವುದರ ವಿರುದ್ಧ ಸಲ್ಲಿಸಿದ ಮೇಲ್ಮನವಿ ಕುರಿತು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ಶನಿವಾರ ಸ್ಥಳೀಯ ಕಾಲಮಾನ ಸಂಜೆ 6 ಗಂಟೆ (ರಾತ್ರಿ 9.30 ಐಎಸ್‌ಟಿ) ತನ್ನ ನಿರ್ಧಾರ ಪ್ರಕಟಿಸಲಿದೆ.

ಚಿನ್ನದ ವಿಜೇತೆ ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ನಡೆಯಬೇಕಿದ್ದ ಫೈನಲ್‌ನ ಬೆಳಗ್ಗೆ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ವಿನೇಶ್ ಅವರನ್ನು ಉಚ್ಚಾಟನೆ ಮಾಡಲಾಯಿತು. ವಿನೇಶ ಅವರ ಮನವಿಯ ವಿಚಾರಣೆಯು ಶುಕ್ರವಾರ ಇಲ್ಲಿ ಮುಕ್ತಾಯವಾಯಿತು.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ʻಸಕಾರಾತ್ಮಕ ನಿರ್ಣಯʼದ ಭರವಸೆ ಇದೆ ಎಂದು ಹೇಳಿದೆ. ಒಲಿಂಪಿಕ್ಸ್ ಸಮಯದಲ್ಲಿ ವಿವಾದ ಪರಿಹಾರಕ್ಕೆ ವಿಶೇಷವಾಗಿ ಸ್ಥಾಪಿಸಿದ ತಾತ್ಕಾಲಿಕ ವಿಭಾಗವು ಪ್ಯಾರಿಸ್ ಕ್ರೀಡಾಕೂಟದ ಅಂತ್ಯದ ಮೊದಲು ನಿರ್ಧಾರವನ್ನು ನಿರೀಕ್ಷಿಸಬಹುದು ಎಂದು ಹೇಳಿತ್ತು.

ವಿನೇಶ್ ಬದಲು ಸ್ಥಾನ ಗಳಿಸಿದ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರು ಮಂಗಳವಾರ ಸೆಮಿಫೈನಲ್‌ನಲ್ಲಿ ಸೋತರು. ಮಂಗಳವಾರದ ಪಂದ್ಯದಲ್ಲಿ ನಿಗದಿತ ತೂಕದ ಮಿತಿಯಲ್ಲಿದ್ದರಿಂದ, ತನಗೆ ಜಂಟಿ ಬೆಳ್ಳಿಯನ್ನು ನೀಡಬೇಕೆಂದು ವಿನೇ‌ಶ್‌ ಮನವಿಯಲ್ಲಿ ಕೋರಿದ್ದಾರೆ.

ವಿನೇಶ್ ಪರ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ವಾದ ಮಂಡಿಸಿದ್ದರು.

Read More
Next Story