ಚಿನ್ನ ಗೆದ್ದವನೂ ನಮ್ಮ ಮಗುವೇ: ನೀರಜ್ ಚೋಪ್ರಾ ತಾಯಿ ಹೇಳಿಕೆ
x

ಚಿನ್ನ ಗೆದ್ದವನೂ ನಮ್ಮ ಮಗುವೇ: ನೀರಜ್ ಚೋಪ್ರಾ ತಾಯಿ ಹೇಳಿಕೆ


ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್ ಅವರನ್ನು ಶ್ಲಾಘಿಸಿರುವ ನೀರಜ್‌ ಚೋಪ್ರಾ ಅವರ ತಾಯಿ ಸರೋಜ್ ದೇವಿ ಹೇಳಿಕೆಯು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ನೀರಜ್ ಚೋಪ್ರಾ ಅವರ ಕ್ರೀಡಾಸ್ಪೂರ್ತಿಯ ಮೂಲ ಯಾವುದು ಎಂಬುದನ್ನು ಅವರ ತಾಯಿಯ ಹೇಳಿಕೆ ದೃಢಪಡಿಸುತ್ತದೆ. ʻನಾವು ಬೆಳ್ಳಿ ಪದಕದಿಂದ ಸಂತೋಷವಾಗಿದ್ದೇವೆ. ಚಿನ್ನ ಪಡೆದವನೂ (ಅರ್ಷದ್ ನದೀಮ್) ನಮ್ಮ ಮಗುವೇ,ʼ ಎಂದು ಒಲಿಂಪಿಕ್ಸ್‌ನಲ್ಲಿ ತನ್ನ ದೇಶದ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದ ಪಾಕಿಸ್ತಾನದ ಅಥ್ಲೀಟ್‌ ಬಗ್ಗೆ ಸರೋಜ್ ದೇವಿ ಅವರು ಹೇಳಿದ್ದಾರೆ.

ಒಲಿಂಪಿಕ್ಸ್ ಸ್ಪೂರ್ತಿ: ಸರೋಜ್ ದೇವಿಯವರ ಹೇಳಿಕೆ ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳಿಂದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ.

ಸರೋಜ್‌ ದೇವಿ ಅವರ ಮಾತುಗಳು, ʻಇನ್ನಷ್ಟು ವೇಗವಾಗಿ, ಎತ್ತರವಾಗಿ, ಬಲವಾಗಿ- ಒಟ್ಟಾಗಿ,ʼ ಎಂಬ ಒಲಿಂಪಿಕ್ಸ್‌ನ ಘನ ಧ್ಯೇಯವನ್ನು ಪ್ರತಿನಿಧಿಸುತ್ತವೆ. ಒಲಂಪಿಕ್ಸ್‌ನ ಸ್ಪೂರ್ತಿ ಗಡಿಗಳನ್ನು ಮೀರುತ್ತದೆ. ಯುದ್ಧ ಮತ್ತು ಕಲಹದ ಸಮಯದಲ್ಲೂ ಜನರನ್ನು ಒಟ್ಟುಗೂಡಿಸುತ್ತದೆ. ಸ್ಪರ್ಧಾತ್ಮಕವಾಗಿದ್ದರೂ, ಕ್ರೀಡೆ ಜನರಲ್ಲಿನ ಉತ್ತಮವಾದದ್ದನ್ನು ಹೊರತರುತ್ತದೆ.

ಭಾರತ ಮತ್ತು ಪಾಕಿಸ್ತಾನದ ಹಿನ್ನೆಲೆ ಮತ್ತು ಪರಸ್ಪರ ಹಗೆತನವನ್ನು ಗಮನಿಸಿದರೆ, ಚೋಪ್ರಾ ಮತ್ತು ನದೀಮ್ ನಡುವಿನ ಸೌಹಾರ್ದ ಮತ್ತು ಆತ್ಮೀಯತೆ ಹಾಗೂ ನೀರಜ್‌ ತಾಯಿ ವ್ಯಕ್ತಪಡಿಸಿದ ಭಾವನೆಗಳು ಗಡಿಯುದ್ದಕ್ಕೂ ಸೇತುವೆಗಳನ್ನು ನಿರ್ಮಿಸುವಲ್ಲಿ ಬಹು ದೂರ ಸಾಗುತ್ತದೆ.

ಸಾಮಾಜಿಕ ಮಾಧ್ಯಮಗಳ ಪ್ರತಿಕ್ರಿಯೆ: ಸರೋಜ್ ದೇವಿಯವರ ಮಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೃತ್ಪೂರ್ವಕ ಪ್ರತಿಕ್ರಿಯೆಗಳು ಬಂದಿವೆ ಮತ್ತು ಅನೇಕ ಬಳಕೆದಾರರು ಅವರನ್ನು ಹೊಗಳಿದ್ದಾರೆ.

ʻಗಡಿ ಮತ್ತು ಪೈಪೋಟಿಯನ್ನು ಮೀರಿದ ಕ್ಷಣದಲ್ಲಿ ನೀರಜ್ ಚೋಪ್ರಾ ಅವರ ತಾಯಿ ಸರೋಜ್ ದೇವಿ ಅವರು ಮಗನನ್ನು ಸೋಲಿಸಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಬಗ್ಗೆ ಆಡಿರುವ ಮಾತುಗಳು ಗಡಿಯುದ್ದಕ್ಕೂ ಅಭಿಮಾನಿಗಳ ಹೃದಯವನ್ನು ಗೆದ್ದಿದೆ,ʼ ಎಂದು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಬರೆದಿದ್ದಾರೆ.

ʻನೀರಜ್ ಚೋಪ್ರಾ ಅವರ ತಾಯಿಯ ಘನತೆಯ ಹೇಳಿಕೆಯಿಂದ ಜನರು ಬಹಳಷ್ಟು ಕಲಿಯಬಹುದು. ಇದು ಇಂಟರ್ನೆಟ್‌ನಲ್ಲಿರುವ ಅತ್ಯಂತ ಸುಂದರವಾದ ವಿಡಿಯೋ,ʼ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ʻ ಸುಂದರವಾದ ಸಂದೇಶಕ್ಕಾಗಿ ಧನ್ಯವಾದ ತಾಯಿ,ʼ ಎಂದು ಇನ್ನೊಬ್ಬರು ಪ್ರಶಂಸಿಸಿದ್ದಾರೆ.

Read More
Next Story