ಆರ್​​ಸಿಬಿ ಎದೆ ಮೇಲೆ ಇನ್ಮುಂದೆ ನಥಿಂಗ್; ಚಾಂಪಿಯನ್ ತಂಡಕ್ಕೆ ಲಂಡನ್ ಮೂಲದ ಕಂಪನಿ ಸಾಥ್
x

ಆರ್​​ಸಿಬಿ ಎದೆ ಮೇಲೆ ಇನ್ಮುಂದೆ 'ನಥಿಂಗ್'

ಆರ್​​ಸಿಬಿ ಎದೆ ಮೇಲೆ ಇನ್ಮುಂದೆ 'ನಥಿಂಗ್'; ಚಾಂಪಿಯನ್ ತಂಡಕ್ಕೆ ಲಂಡನ್ ಮೂಲದ ಕಂಪನಿ ಸಾಥ್

ಆರ್‌ಸಿಬಿಯ ಈ ಹೊಸ ಒಪ್ಪಂದ ಬ್ರ್ಯಾಂಡಿಂಗ್ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ, ನೆಟ್ಟಿಗರ ಪಾಲಿಗೆ ಮಾತ್ರ ಭರ್ಜರಿ ಮನರಂಜನೆಯ ಸರಕಾಗಿದೆ.


Click the Play button to hear this message in audio format

ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ತನ್ನ ಹೊಸ 'ಟೈಟಲ್ ಜೆರ್ಸಿ ಪ್ರಾಯೋಜಕರನ್ನು' ಅಧಿಕೃತವಾಗಿ ಘೋಷಿಸಿದೆ. ಲಂಡನ್ ಮೂಲದ ಟೆಕ್ ಕಂಪನಿ 'ನಥಿಂಗ್' ಸ್ಮಾರ್ಟ್‌ಫೋನ್ ಬ್ರ್ಯಾಂಡ್, ಪ್ರತಿಷ್ಠಿತ ಕತಾರ್ ಏರ್‌ವೇಸ್ ಸ್ಥಾನ ತುಂಬಲಿದೆ.

ಕಳೆದ ವರ್ಷವಷ್ಟೇ (2025) ಬಹುದಿನಗಳ ಕನಸಾದ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದ ಆರ್‌ಸಿಬಿ, ಹೊಸ ಸೀಸನ್‌ಗೆ ಹೊಸ ಹುರುಪಿನೊಂದಿಗೆ ಸಜ್ಜಾಗುತ್ತಿದೆ. ಇದರ ಭಾಗವಾಗಿಯೇ ಈ ಮಹತ್ವದ ಬದಲಾವಣೆ ಮಾಡಲಾಗಿದೆ. ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಲ್ ಅವರು "NOTHING Smartphones" ಲೋಗೋ ಹೊಂದಿರುವ ಕಡು ನೀಲಿ (Navy Blue) ಬಣ್ಣದ ಜೆರ್ಸಿಯಲ್ಲಿ ಕಂಗೊಳಿಸುತ್ತಿರುವ ಚಿತ್ರಗಳನ್ನು ಫ್ರಾಂಚೈಸಿ ಹಂಚಿಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಆರ್‌ಸಿಬಿಯ ಈ ಹೊಸ ಒಪ್ಪಂದ ಬ್ರ್ಯಾಂಡಿಂಗ್ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ, ನೆಟ್ಟಿಗರ ಪಾಲಿಗೆ ಮಾತ್ರ ಭರ್ಜರಿ ಮನರಂಜನೆಯ ಸರಕಾಗಿದೆ. ಪ್ರಾಯೋಜಕರ ಹೆಸರಾದ 'Nothing' (ಕನ್ನಡದಲ್ಲಿ: ಏನೂ ಇಲ್ಲ) ಎಂಬ ಪದವನ್ನೇ ಹಿಡಿದುಕೊಂಡು ಕ್ರಿಕೆಟ್ ಪ್ರೇಮಿಗಳು ತಮಾಷೆಯ ಚಕಮಕಿ ನಡೆಸುತ್ತಿದ್ದಾರೆ.

"2025ಕ್ಕೂ ಮೊದಲು ಆರ್‌ಸಿಬಿ ಟ್ರೋಫಿ ಕ್ಯಾಬಿನೆಟ್‌ನಲ್ಲಿ ಏನಿತ್ತು? - ನಥಿಂಗ್!" ಎಂದು ಕೆಲವರು ಹಳೆಯ ಇತಿಹಾಸವನ್ನು ಕೆದಕಿದರೆ, ಇನ್ನು ಕೆಲವರು "ಈ ಬಾರಿಯೂ ಕಪ್ ಗೆಲ್ಲೋದು - ನಥಿಂಗ್!" ಎಂದು ಕಾಲೆಳೆಯುತ್ತಿದ್ದಾರೆ. ಆದರೆ, ಆರ್‌ಸಿಬಿ ಅಭಿಮಾನಿಗಳು ಮಾತ್ರ ಚಾಂಪಿಯನ್ ಪಟ್ಟದ ಗರ್ವದೊಂದಿಗೆ, "ಕಳೆದ ಬಾರಿ ಎಲ್ಲವನ್ನೂ ಸಾಧಿಸಿದ್ದೇವೆ, ಈ ಬಾರಿ ನಥಿಂಗ್ ಕೇವಲ ಹೆಸರಷ್ಟೇ, ಆಟದಲ್ಲಿ ಎವ್ರಿಥಿಂಗ್ ಇರುತ್ತೆ," ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

Read More
Next Story