Union Budget-2026| ಹಣಕಾಸು ಆಯೋಗದಡಿ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ. ಅನುದಾನ ಘೋಷಣೆ
x
ಕೇಂದ್ರ ಬಜೆಟ್‌ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್‌

Union Budget-2026| ಹಣಕಾಸು ಆಯೋಗದಡಿ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ. ಅನುದಾನ ಘೋಷಣೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟ್‌ನ ಪ್ರಮುಖ ಅಂಶಗಳು, ಆದಾಯ ತೆರಿಗೆ ಬದಲಾವಣೆಗಳು ಮತ್ತು ಆರ್ಥಿಕ ಸುಧಾರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸತತ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಏಪ್ರಿಲ್ 2026 ರಿಂದ ಮಾರ್ಚ್ 2027 ರ ಹಣಕಾಸು ವರ್ಷದ ಈ ಬಜೆಟ್, ಆರ್ಥಿಕ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವುದು ಮತ್ತು ವಿತ್ತೀಯ ಶಿಸ್ತನ್ನು ಕಾಪಾಡುವುದರ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ವಿಶೇಷವಾಗಿ, ಅಮೆರಿಕದ ಸುಂಕಗಳು ಸೇರಿದಂತೆ ಜಾಗತಿಕ ವ್ಯಾಪಾರ ಸಂಘರ್ಷಗಳಿಂದ ಭಾರತದ ಆರ್ಥಿಕತೆಯನ್ನು ರಕ್ಷಿಸುವ ಸುಧಾರಣಾ ಕ್ರಮಗಳನ್ನು ಈ ಬಜೆಟ್ ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.

Live Updates

  • 1 Feb 2026 1:52 PM IST

    ಬಜೆಟ್ 2026 | 'ಬಯೋಫಾರ್ಮಾ ಶಕ್ತಿ' ಯೋಜನೆಗೆ 10,000 ಕೋಟಿ ರೂ. ಘೋಷಣೆ

    ಕೇವಲ ಜೆನೆರಿಕ್ ಔಷಧಗಳ ಉತ್ಪಾದಕ ದೇಶವಾಗಿ ಉಳಿಯುವ ಬದಲು, ಭಾರತವನ್ನು ಬಯೋಫಾರ್ಮಾ ಸೂಪರ್ ಪವರ್ ಆಗಿ ರೂಪಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2026 ರಲ್ಲಿ 'ಬಯೋಫಾರ್ಮಾ ಶಕ್ತಿ' ಎಂಬ ಮಾಸ್ಟರ್‌ಸ್ಟ್ರೋಕ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಗಾಗಿ ಐದು ವರ್ಷಗಳ ಅವಧಿಗೆ 10,000 ಕೋಟಿ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ. ಭಾರತದಲ್ಲಿರುವ 101 ಮಿಲಿಯನ್ ಮಧುಮೇಹ ಪ್ರಕರಣಗಳು, ವಾರ್ಷಿಕವಾಗಿ ಪತ್ತೆಯಾಗುವ 1.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು ವಿವಿಧ ಆಟೋ ಇಮ್ಯೂನ್ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರವು ಬಜೆಟ್‌ನಲ್ಲಿ ಹಣವನ್ನು ವಿನಿಯೋಗಿಸುತ್ತಿದೆ. ಏಕೆಂದರೆ ಈ ವಿಷಯವು ರಾಷ್ಟ್ರೀಯ ಭದ್ರತೆಯ ಅಗತ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ಸ್ಟೆರಿಸ್ ಹೆಲ್ತ್‌ಕೇರ್ ಅಧ್ಯಕ್ಷ ಜೀವನ್ ಕಸಾರಾ ತಿಳಿಸಿದ್ದಾರೆ.

  • ಕೃಷಿಗೆ ಅನುದಾನ ಕಡಿತ, ರಕ್ಷಣೆ-ಗೃಹ ಇಲಾಖೆಗೆ ಹೆಚ್ಚಳ
    1 Feb 2026 1:47 PM IST

    ಕೃಷಿಗೆ ಅನುದಾನ ಕಡಿತ, ರಕ್ಷಣೆ-ಗೃಹ ಇಲಾಖೆಗೆ ಹೆಚ್ಚಳ

    ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಕೃಷಿ ಇಲಾಖೆಗೆ ಕಳೆದ ವರ್ಷ 1.71 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಈ ವರ್ಷ 1.62 ಲಕ್ಷ ಕೋಟಿ ರೂ. ನೀಡಲಾಗಿದ್ದು, ಅನುದಾನ ಕಡಿಮೆ ಮಾಡಲಾಗಿದೆ. 

    ರಕ್ಷಣೆಗೆ ಕಳೆದ ಬಜೆಟ್‌ನಲ್ಲಿ 4.91 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದು ಪ್ರಸ್ತುತ 5.94 ಲಕ್ಷ ಕೋಟಿ ರೂ. ಮೀಸಲಿರಿಸಲಾಗಿದೆ. ಗೃಹ ಇಲಾಖೆಗೂ ಅನುದಾನ ಹೆಚ್ಚಳ ಮಾಡಲಾಗಿದ್ದು, 2025ರಲ್ಲಿ 2.33 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಬಜೆಟ್‌ನಲ್ಲಿ 2.55 ಲಕ್ಷ ಕೋಟಿ ರೂ. ಮೀಸಲಿರಿಸಿದೆ.   

  • 1 Feb 2026 1:33 PM IST

    ಹೊಸ ಆದಾಯ ತೆರಿಗೆ ಕಾಯ್ದೆ ಘೋಷಣೆ

    ಬಜೆಟ್ 2026 ರ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಕಾಯ್ದೆ ಬಗ್ಗೆ  ಮಾತನಾಡಿದ ಅವರು, ಸರಳೀಕೃತ ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳನ್ನು ಶೀಘ್ರದಲ್ಲೇ ಅಧಿಸೂಚಿಸಲಾಗುವುದು ಎಂದು ಘೋಷಿಸಿದರು.

  • ಹೈನೋದ್ಯಮಿಗಳಿಗೆ ಸಾಲ ಸೌಲಭ್ಯ ಹೆಚ್ಚಳ
    1 Feb 2026 1:30 PM IST

    ಹೈನೋದ್ಯಮಿಗಳಿಗೆ ಸಾಲ ಸೌಲಭ್ಯ ಹೆಚ್ಚಳ

    ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರೈತರಿಗೆ ಸಿಹಿ ಸುದ್ದಿ ನೀಡಿದ್ದು ಹೈನೋದ್ಯಮಿಗಳಿಗೆ ಸಾಲ ಸೌಲಭ್ಯ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.  ಮೀನುಗಾರಿಕೆ, ಕೋಳಿ ಸಾಗಾಣಿಕೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ. 

     

  • 1 Feb 2026 1:23 PM IST

    ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಎಫ್‌ ಅಂಡ್‌ ಓ (Futures & Options) ವಹಿವಾಟಿನ ಮೇಲಿನ ಎಸ್‌ಟಿಟಿ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭೂಕಂಪನ ಉಂಟಾಗಿದೆ. ಸೆನ್ಸೆಕ್ಸ್ ಸುಮಾರು 2,300 ಪಾಯಿಂಟ್ಸ್‌ಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ನಿಫ್ಟಿ 50 24,700 ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ. 

  • Budget 2026| ಯಾವ ವಸ್ತುಗಳು ಅಗ್ಗವಾಗಬಹುದು?
    1 Feb 2026 1:20 PM IST

    Budget 2026| ಯಾವ ವಸ್ತುಗಳು ಅಗ್ಗವಾಗಬಹುದು?

    2026ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ವಸ್ತುಗಳ ಮೇಲಿನ ತೆರಿಗೆ ಮತ್ತು ಸುಂಕಗಳನ್ನು ಕಡಿತಗೊಳಿಸಿದ್ದಾರೆ. ಇದರಿಂದಾಗಿ ಅಗ್ಗವಾಗಲಿರುವ ಪ್ರಮುಖ ವಸ್ತುಗಳ ಪಟ್ಟಿ ಇಲ್ಲಿದೆ. 

    ವಿದೇಶಿ ಪ್ರವಾಸ ಪ್ಯಾಕೇಜ್‌ಗಳು: ವಿದೇಶಿ ಪ್ರವಾಸಗಳ ಮೇಲಿನ ಟಿಸಿಎಸ್ ದರವನ್ನು ಶೇ. 5-20 ರಿಂದ ಶೇ. 2ಕ್ಕೆ ಇಳಿಸಲಾಗಿದೆ.

    ವಿದೇಶಿ ಶಿಕ್ಷಣ: ಎಲ್‌ಆರ್‌ಎಸ್  ಅಡಿಯಲ್ಲಿ ವಿದೇಶಿ ಶಿಕ್ಷಣಕ್ಕೆ ಸಂಬಂಧಿಸಿದ ವೆಚ್ಚಗಳ ಮೇಲೆ ಕಡಿಮೆ ಟಿಡಿಎಸ್  ಅನ್ವಯವಾಗಲಿದೆ.

    ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳ ಔಷಧಿಗಳು: ಈ ಔಷಧಿಗಳ ಮೇಲಿನ ಮೂಲ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

    ಮೈಕ್ರೋವೇವ್ ಓವನ್‌ಗಳು: ಇವುಗಳ ಮೇಲಿನ ಮೂಲ ಸುಂಕವನ್ನು ರದ್ದುಗೊಳಿಸಿರುವುದರಿಂದ ಬೆಲೆ ಕಡಿಮೆಯಾಗಲಿದೆ.

    ಸೌರಶಕ್ತಿ ಮತ್ತು ಇಂಧನ ಉಪಕರಣಗಳು: ಸೋಲಾರ್‌ ಗ್ಲಾಸ್‌ ಮತ್ತು ಇಂಧನ ಪರಿವರ್ತನಾ ಉಪಕರಣಗಳ ತಯಾರಿಕೆಗೆ ಬಳಸುವ ವಸ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಾಗಿದೆ.

    ವೈಯಕ್ತಿಕ ಬಳಕೆಯ ಆಮದು ವಸ್ತುಗಳು: ವೈಯಕ್ತಿಕವಾಗಿ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕವನ್ನು ಶೇ. 20 ರಿಂದ ಶೇ. 10ಕ್ಕೆ ಇಳಿಸಲಾಗಿದೆ.

    ನಾಗರಿಕ ವಿಮಾನಯಾನ ಬಿಡಿಭಾಗಗಳು: ವಿಮಾನಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳು ಮತ್ತು ಘಟಕಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಮನ್ನಾ ಮಾಡಲಾಗಿದೆ.

    ಖನಿಜಗಳು ಮತ್ತು ಸ್ಕ್ರ್ಯಾಪ್: ಆಯ್ದ ಖನಿಜಗಳು ಮತ್ತು ಆಲ್ಕೋಹಾಲ್ ಲಿಕ್ಕರ್ ಸ್ಕ್ರ್ಯಾಪ್ ಮೇಲಿನ ಸುಂಕವನ್ನು ಶೇ. 5 ರಿಂದ ಶೇ. 2ಕ್ಕೆ ಇಳಿಸಲಾಗಿದೆ.

    ಮೀನುಗಾರಿಕೆ: ಭಾರತೀಯ ಮೀನುಗಾರರು ಭಾರತೀಯ ಜಲಪ್ರದೇಶದಲ್ಲಿ ಹಿಡಿದ ಮೀನುಗಳ ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ.

    ಪರಮಾಣು ವಿದ್ಯುತ್ ಯೋಜನೆಗಳು: ಪರಮಾಣು ವಿದ್ಯುತ್ ಸ್ಥಾವರಗಳಿಗಾಗಿ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕವನ್ನು ಮನ್ನಾ ಮಾಡಲಾಗಿದೆ.

    ಪಾದರಕ್ಷೆ ರಫ್ತು: ಶೂಗಳ ಮೇಲ್ಭಾಗದ ರಫ್ತಿಗಾಗಿ ಬಿಡಿಭಾಗಗಳನ್ನು ಸುಂಕವಿಲ್ಲದೆ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

  • 1 Feb 2026 1:07 PM IST

    ಸೌರ ಗಾಜು ಉತ್ಪಾದನೆಗೆ ಬೂಸ್ಟ್: ಸೋಡಿಯಂ ಆಂಟಿಮೊನೇಟ್ ಮೇಲಿನ ಆಮದು ಸುಂಕ ರದ್ದು

    ಸೋಲಾರ್‌ ಗ್ಲಾಸ್‌ನ ಉತ್ಪಾದನೆಯನ್ನು ಉತ್ತೇಜಿಸಲು ಸೌರ ಗಾಜಿನ ತಯಾರಿಕೆಯಲ್ಲಿ ಬಳಸುವ ಸೋಡಿಯಂ ಆಂಟಿಮೊನೇಟ್ ಆಮದಿನ ಮೇಲೆ ಸುಂಕವನ್ನು ರದ್ದುಗೊಳಿಸಲು ನಿರ್ಮಲಾ ಸೀತಾರಾಮನ್‌ ಪ್ರಸ್ತಾಪನೆ ಮಂಡಿಸಿದ್ದಾರೆ. 

  • 1 Feb 2026 1:00 PM IST

    ಮದ್ಯ, ಸಿಗರೇಟ್‌ ದುಬಾರಿ: ಸಿಎನ್‌ಜಿ, ಚರ್ಮ ಉತ್ಪನ್ನ ಅಗ್ಗ

    ಕೇಂದ್ರ ಬಜೆಟ್‌ನಲ್ಲಿ ಮದ್ಯ ಹಾಗೂ ಸಿಗರೇಟ್‌ ಉತ್ಪನ್ನಗಳ ದರ ಹೆಚ್ಚಳ ಮಾಡಲಾಗಿದ್ದು, ಸೋಲರ್‌ ಬಿಡಿ ಭಾಗಗಳು, ಸಿಎನ್‌ಜಿ, ವಿಮಾನದ ಬಿಡಿ ಭಾಗಗಳು, ಬೀಡಿ ದಾರ, ಸೆಣಬು, ಬಯೋಗ್ಯಾಸ್‌, ವಿದೇಶಿ ಯಾತ್ರೆ, ಕ್ಯಾನ್ಸರ್‌ ಹಾಗೂ ಶುಗರ್‌  ಸೇರಿದಂತೆ 36 ಕಾಯಿಲೆಗಳ ಔಷಧ ಹಾಗೂ ಚರ್ಮದ ಉತ್ಪನ್ನಗಳ ದರ ಕಡಿಮೆ ಮಾಡಲಾಗಿದೆ. 

  • 1 Feb 2026 12:43 PM IST

    ಎಫ್&ಒ ಮೇಲಿನ ಭದ್ರತಾ ವಹಿವಾಟು ತೆರಿಗೆಯನ್ನು ಹೆಚ್ಚಿಸಲು ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫ್ಯೂಚರ್ಸ್ ಮತ್ತು ಆಪ್ಷನ್ಸ್  ಮೇಲಿನ ಭದ್ರತಾ ವಹಿವಾಟು ತೆರಿಗೆ ( STT) ಯನ್ನು ಹೆಚ್ಚಿಸಲು ಪ್ರಸ್ತಾಪಿಸಿದರು. ಅಧಿಕೃತ ಪ್ರಕಟಣೆಯ ಪ್ರಕಾರ, ಫ್ಯೂಚರ್ಸ್ ಮೇಲಿನ ಎಸ್‌ಟಿಟಿಯನ್ನು 0.02% ರಿಂದ 0.05% ಕ್ಕೆ ಹೆಚ್ಚಿಸಲು ಕೇಂದ್ರವು ಪ್ರಸ್ತಾಪಿಸಿದೆ.

  • 1 Feb 2026 12:36 PM IST

    ಸಮುದ್ರ ಆಹಾರ ರಫ್ತಿಗೆ ಬೂಸ್ಟ್: ಆಮದು ತೆರಿಗೆ ವಿನಾಯಿತಿ ಮಿತಿ ಶೇ.3ಕ್ಕೆ ಏರಿಕೆ

    ರಫ್ತಿಗಾಗಿ ಸಮುದ್ರ ಆಹಾರವನ್ನು ಸಂಸ್ಕರಿಸಲು ಬಳಸುವ ಆಯ್ದ ಪರಿಕರಗಳ  ಮೇಲಿನ ತೆರಿಗೆ ರಹಿತ ಆಮದು ಮಿತಿಯನ್ನು, ಹಿಂದಿನ ವರ್ಷದ ರಫ್ತು ವಹಿವಾಟಿನ ಶೇ.1 ರಿಂದ ಶೇ.3 ಕ್ಕೆ ಹೆಚ್ಚಿಸಲು ವಿತ್ತಸಚಿವೆ ಬಜೆಟ್‌ನಲ್ಲಿ ಪ್ರಸ್ತಾಪನೆ ಮಾಡಿದ್ದಾರೆ. ಪ್ರಸ್ತುತ ಚರ್ಮ ಅಥವಾ ಸಂಶ್ಲೇಷಿತ ಪಾದರಕ್ಷೆಗಳ ರಫ್ತಿಗೆ ಲಭ್ಯವಿರುವ ಆಯ್ದ ಪರಿಕರಗಳ ಮೇಲಿನ ತೆರಿಗೆ ರಹಿತ ಆಮದು ಸೌಲಭ್ಯವನ್ನು, ಇನ್ನು ಮುಂದೆ ಶೂ ಅಪ್ಪರ್ಸ್‌ಗಳ ರಫ್ತಿನ ವಿಸ್ತರಣೆಗೂ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪಿಸಿದ್ದಾರೆ. 

Read More
Next Story