Operation Sindoor | ಪಾಕಿಸ್ತಾನದಿಂದ ಎರಡನೇ ದಿನವೂ ಮುಂದುವರಿದ ದಾಳಿ, 26 ಕಡೆ ಗಡಿ ದಾಟಿ ಬಂದ ಡ್ರೋನ್​ಗಳು
x

ಸಚಿವಾಲಯದಲ್ಲಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಕರ್ನಲ್ ಸೋಫಿಯಾ ಖುರೇಷಿ

Operation Sindoor | ಪಾಕಿಸ್ತಾನದಿಂದ ಎರಡನೇ ದಿನವೂ ಮುಂದುವರಿದ ದಾಳಿ, 26 ಕಡೆ ಗಡಿ ದಾಟಿ ಬಂದ ಡ್ರೋನ್​ಗಳು

ವರದಿಗಳ ಪ್ರಕಾರ, ಭಾರತೀಯ ಸೇನೆಯು ಕನಿಷ್ಠ ನಾಲ್ಕು ಕ್ಷಿಪಣಿಗಳು ಮತ್ತು ಪಾಕಿಸ್ತಾನದ F-16 ಯುದ್ಧವಿಮಾನವನ್ನು ಹೊಡೆದು ಹಾಕಿದೆ.


ಭಾರತದ ಉತ್ತರ ಮತ್ತು ಪಶ್ಚಿಮ ಭಾಗದ 15 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಸೇನೆಯು ಗುರುವಾರ ರಾತ್ರಿ (ಮೇ 08 ) ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಗಳನ್ನು ನಡೆಸಿದೆ. ಈ ಎಲ್ಲ ಯತ್ನವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ತಡೆಗಟ್ಟಿದೆ. ಇಂಟಿಗ್ರೇಟೆಡ್ ಕೌಂಟರ್ ಅನ್‌ಮ್ಯಾನ್ಡ್ ಏರ್‌ಕ್ರಾಫ್ಟ್ ಸಿಸ್ಟಮ್ (UAS) ಮತ್ತು ಏರ್ ಡಿಫೆನ್ಸ್ ಸಿಸ್ಟಮ್‌ಗಳು ಪಾಕಿಸ್ತಾನದ ಮಿಸೈಲ್​​ಗಳನ್ನು ತಟಸ್ಥಗೊಳಿಸಿವೆ. ಇದರ ಬಳಿಕ ಜಮ್ಮು, ಪಂಜಾಬ್‌ನ ಪಠಾಣ್‌ಕೋಟ್ ಮತ್ತು ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಸಿವೆ, ಜೊತೆಗೆ ತಾತ್ಕಾಲಿಕ ವಿದ್ಯುತ್ ಕಡಿತ ಮತ್ತು ಮೊಬೈಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಗುರುವಾರ ತಡರಾತ್ರಿ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪ್ರಯತ್ನಗಳ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಸರಣಿ ಪ್ರತಿದಾಳಿಗಳನ್ನು ನಡೆದಿದೆ. ಲಾಹೋರ್, ಇಸ್ಲಾಮಾಬಾದ್ ಮತ್ತು ಸಿಯಾಲ್ಕೋಟ್ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಭಾರತೀಯ ಪಡೆಗಳು ನಿಖರ ದಾಳಿಯೊಂದಿಗೆ ತ್ವರಿತವಾಗಿ ಪ್ರತೀಕಾರ ತೀರಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಕಾರ್ಯಾಚರಣೆಯ ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಾದ್ಯಂತ ಸಂಪೂರ್ಣ ಬ್ಲ್ಯಾಕೌಟ್ ಮಾಡಲಾಗಿದೆ.

ವರದಿಗಳ ಪ್ರಕಾರ, ಭಾರತೀಯ ಸೇನೆಯು ಕನಿಷ್ಠ ನಾಲ್ಕು ಕ್ಷಿಪಣಿಗಳು ಮತ್ತು ಪಾಕಿಸ್ತಾನದ F-16 ಯುದ್ಧವಿಮಾನವನ್ನು ಹೊಡೆದು ಹಾಕಿದೆ. ಸ್ಥಳೀಯರು ಹಂಚಿಕೊಂಡ ವೀಡಿಯೊಗಳಲ್ಲಿ ರಾತ್ರಿಯ ಆಕಾಶದಲ್ಲಿ ಬೆಳಕಿನ ಕಿರಣಗಳು ಕಂಡ ಬಂದಿವೆ. ಇದು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯಿಂದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆಗಟ್ಟುವ ವೇಳೆ ಉಂಟಾದ ಬೆಳಕು. F-16 ವಿಮಾನ ಹೊಡೆದಿರುವ ಬಗ್ಗೆ ರಕ್ಷಣಾ ಸಚಿವಾಲಯದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ಜಮ್ಮುವಿನ ಅವಂತಿಪುರ, ಶ್ರೀನಗರ, ಮತ್ತು ಪಂಜಾಬ್‌ನ ಪಠಾಣ್‌ಕೋಟ್, ಅಮೃತಸರ, ಜಲಂಧರ, ಲುಧಿಯಾನ ಸೇರಿದಂತೆ ರಾಜಸ್ಥಾನದ ಫಲೋದಿ, ಉತ್ತರಲೈ ಮತ್ತು ಗುಜರಾತ್‌ನ ಭುಜ್‌ನಂತಹ 15 ಸ್ಥಳಗಳನ್ನು ಗುರಿಯಾಗಿಸಲು ಪಾಕಿಸ್ತಾನ ಯತ್ನಿಸಿತು. ಈ ದಾಳಿಗಳ ಭಗ್ನಾವಶೇಷಗಳನ್ನು ಈಗ ವಿವಿಧ ಸ್ಥಳಗಳಿಂದ ಸಂಗ್ರಹಿಸಲಾಗುತ್ತಿದೆ, ಇದು ಪಾಕಿಸ್ತಾನದ ದಾಳಿಗಳ ಸಾಕ್ಷಿಯಾಗಿದೆ. ಪಠಾಣ್‌ಕೋಟ್‌ನಲ್ಲಿ ಸ್ಫೋಟದ ಶಬ್ದಗಳ ಬಳಿಕ ಸೈರನ್‌ಗಳು ಮೊಳಗಿದ್ದು, ವಿದ್ಯುತ್ ಕಡಿತಗೊಂಡಿತು.

ರಕ್ಷಣಾ ಸಚಿವಾಲಯದ ಪ್ರಕಾರ, ಪಾಕಿಸ್ತಾನವು ಮೇ 7 ರ ರಾತ್ರಿ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ಥಲಾ, ಜಲಂಧರ್, ಲುಧಿಯಾನಾ, ಆದಂಪುರ್, ಭಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ 15 ಸ್ಥಳಗಳನ್ನು ಗುರಿಯಾಗಿಸಿತ್ತು. ಆದರೆ, ಭಾರತದ ಸಂಯೋಜಿತ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಈ ದಾಳಿಗಳನ್ನು ಯಶಸ್ವಿಯಾಗಿ ತಡೆಗಟ್ಟಿದವು. ಇದರ ಜೊತೆಗೆ, ಭಾರತವು ಪಾಕಿಸ್ತಾನದ ಲಾಹೋರ್‌ನಲ್ಲಿ ಇರುವ ಒಂದು ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಗುರುವಾರ ಸಂಜೆ ಮಾಧ್ಯಮಗಳಿಗೆ ವಿವರಣೆ ನೀಡಿ, "ಪಾಹಲ್ಗಾಮ್ ಭಯೋತ್ಪಾದಕ ದಾಳಿಯೊಂದಿಗೆ ಪಾಕಿಸ್ತಾನವೇ ಸಂಘರ್ಷ ಆರಂಭಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂದೂರ್ ಮೂಲಕ ಪ್ರತಿಸ್ಪಂದಿಸಿತು. ಈಗ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಆಯ್ಕೆ ಪಾಕಿಸ್ತಾನದ ಮುಂದಿದೆ" ಎಂದು ಹೇಳಿದರು. ಏಪ್ರಿಲ್ 22 ರಂದು ಪಾಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ, ಮುಖ್ಯವಾಗಿ ಪ್ರವಾಸಿಗರು, ಪ್ರಾಣ ಕಳೆದುಕೊಂಡಿದ್ದನ್ನು ಅವರು ಸ್ಮರಿಸಿದ್ದರು. .

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸಭೆಯಲ್ಲಿ ಪಾಕಿಸ್ತಾನವು ದಿ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್‌ಎಫ್) ಭಯೋತ್ಪಾದಕ ಸಂಘಟನೆಯ ಪಾತ್ರವನ್ನು ನಿರಾಕರಿಸಿದೆ. ಆದರೆ ಈ ಸಂಘಟನೆಯು ಈಗಾಗಲೇ ಪಾಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು ಎಂದು ಮಿಸ್ರಿ ಮಾಹಿತಿ ನೀಡಿದ್ದಾರೆ.

ಇದೇ ದಿನ ನವದೆಹಲಿಯಲ್ಲಿ ಆಪರೇಷನ್ ಸಿಂದೂರ್ ಕುರಿತು ಸರ್ವಪಕ್ಷ ಸಭೆ ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದರು. ಈ ಘಟನೆಯು ಎರಡೂ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಿದ್ದು, ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.

Live Updates

  • 9 May 2025 11:15 AM IST

    ಪಾಕ್‌ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

    ಗಡಿಯಲ್ಲಿ ಪಾಕ್ ಸೇನೆ ನಡೆಸುತ್ತಿರುವ ಗುಂಡಿನ ದಾಳಿಗೆ ಭಾರತೀಯ ಸೇನೆ ತಿರುಗೇಟು ನೀಡುತ್ತಿದೆ. 

    ಭಾರತೀಯ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನಿ ಪಡೆಗಳು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದನ್ನು ಭಾರತೀಯ ಸೇನೆ ವಿಫಲಗೊಳಿಸಿದ ಕೆಲವೇ ಗಂಟೆಗಳ ಬಳಿಕ ಪ್ರತಿದಾಳಿ ನಡೆಸಿದೆ. ಆದರೆ, ಪಾಕಿಸ್ತಾನದ ಯಾವ ಸೇನಾ ನೆಲೆ ನಾಶವಾಗಿದೆ ಎಂಬುವುದು ಖಚಿತವಾಗಿಲ್ಲ. ಕದನ ವಿರಾಮ ಉಲ್ಲಂಘನೆಗಳಿಗೆ ಪರಿಣಾಮಕಾರಿ ಪ್ರತ್ಯುತ್ತರ ನೀಡಲಾಗುತ್ತಿದೆ ಎಂಬುದರ ಸಂಕೇತವಾಗಿ ಈ ವಿಡಿಯೋ ಬಿಡುಗಡೆ ಮಾಡಿದೆ.


  • 9 May 2025 10:31 AM IST

    ಹಣಕಾಸು ನೆರವಿಗೆ ಮೊರೆಯಿಟ್ಟ ಪಾಕಿಸ್ತಾನ ಸರ್ಕಾರ

    ಭಾರತ ದಾಳಿಯಿಂದ ಕಂಗಾಲಾಗಿರುವ ಪಾಕಿಸ್ತಾನ ಮತ್ತಷ್ಟು ಆರ್ಥಿಕ ಮುಗ್ಗಟ್ಟು ಅನುಭವಿಸಿದೆ. ಆರ್ಥಿಕ ನಷ್ಟದ ಕೂಪದಿಂದ ಪಾರಾಗಲು ಅಂತರರಾಷ್ಟ್ರೀಯ ಪಾಲುದಾರ ರಾಷ್ಟ್ರಗಳ ಬಳಿ ಆರ್ಥಿಕ ನೆರವಿಗೆ ಪಾಕಿಸ್ತಾನ ಸರ್ಕಾರ ಮೊರೆ ಇಟ್ಟಿದೆ.

    ಹೆಚ್ಚುತ್ತಿರುವ ಯುದ್ಧ ಮತ್ತು ದಿಢೀರ್‌ ಕುಸಿದ ಷೇರು ಮಾರುಕಟ್ಟೆಯಿಂದ ಪಾರಾಗಲು ಸಹಾಯ ಮಾಡುವಂತೆ ಪಾಲುದಾರ ರಾಷ್ಟ್ರಗಳಿಗೆ ಮನವಿ ಮಾಡಿದೆ. ಈ ಮಧ್ಯೆ, ಪಾಕಿಸ್ತಾನದಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಲು ನಿರ್ಬಂಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

  • 9 May 2025 10:20 AM IST

    ಪರಿಸ್ಥಿತಿಯನ್ನು ನಿಭಾಯಿಸಲು ಪಂಜಾಬ್ ಸರ್ಕಾರ ಸಿದ್ಧತೆ: ಸಿಎಂಒ

    ಪರಿಸ್ಥಿತಿಯನ್ನು ನಿಭಾಯಿಸಲು ಪಂಜಾಬ್ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಶುಕ್ರವಾರ ಸಚಿವರು ಗಡಿ ಜಿಲ್ಲೆಗಳಲ್ಲಿನ ತುರ್ತು ಸೇವೆಗಳನ್ನು ಪರಿಶೀಲಿಸಲಿದ್ದಾರೆ. ಆಸ್ಪತ್ರೆಗಳು, ಅಗ್ನಿಶಾಮಕ ಕೇಂದ್ರಗಳನ್ನು, ಪಡಿತರ ಮತ್ತು ತುರ್ತು ಸೇವೆಗಳ ಲಭ್ಯತೆಯನ್ನು ಪರಿಶೀಲಿಸಲಿದ್ದಾರೆ. ಸಂಪುಟ ಸಚಿವರು ಗಡಿ ಜಿಲ್ಲೆಗಳನ್ನು ತಲುಪಲಿದ್ದಾರೆ, ಸಂಪುಟ ಸಭೆಯ ನಂತರ, 10 ಸಚಿವರು ಗಡಿ ಪ್ರದೇಶಗಳಿಗೆ ತೆರಳಲಿದ್ದಾರೆ. ಸಚಿವರಾದ ಲಾಲ್ ಚಂದ್ ಕಟರುಚಕ್ ಮತ್ತು ಡಾ. ರಾವ್ಜೋತ್ ಸಿಂಗ್ ಗುರುದಾಸ್ಪುರಕ್ಕೆ ತೆರಳಲಿದ್ದಾರೆ. ಸಚಿವರಾದ ಕುಲದೀಪ್ ಧಲಿವಾಲ್ ಮತ್ತು ಮೊಹಿಂದರ್ ಭಗತ್ ಅಮೃತಸರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ: ಪಂಜಾಬ್ ಸಿಎಂಒ

  • 9 May 2025 10:18 AM IST

    ಜಮ್ಮು ಮತ್ತು ಉಧಂಪುರದಿಂದ ದೆಹಲಿಗೆ 3 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧಾರ

    ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ ಜಮ್ಮು ಮತ್ತು ಉಧಂಪುರದಿಂದ ದೆಹಲಿಗೆ ಮೂರು ವಿಶೇಷ ರೈಲುಗಳನ್ನು ಓಡಿಸಲು ಯೋಜಿಸಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

  • 9 May 2025 10:14 AM IST

    ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸುವಂತೆ, ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸುವಂತೆ ಚೀನಾ ಒತ್ತಾಯ

    ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸ್ತುತ ಪರಿಸ್ಥಿತಿಯ ಕುರಿತು ನಾವು ನಿನ್ನೆ ಚೀನಾದ ನಿಲುವನ್ನು ಹಂಚಿಕೊಂಡಿದ್ದೇವೆ.  ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರರ ನೆರೆಹೊರೆಯವರು ಮತ್ತು ಯಾವಾಗಲೂ ಇರುತ್ತಾರೆ. ಅವರಿಬ್ಬರೂ ಚೀನಾದ ನೆರೆಹೊರೆಯವರು. ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಶಾಂತಿ ಮತ್ತು ಸ್ಥಿರತೆಯ ದೊಡ್ಡ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಲು, ಯುಎನ್ ಚಾರ್ಟರ್ ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಲು, ಶಾಂತವಾಗಿರಲು, ಸಂಯಮವನ್ನು ಕಾಪಾಡಿಕೊಳ್ಳಲು ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ನಾವು ಎರಡೂ ಕಡೆಯವರನ್ನು ಒತ್ತಾಯಿಸುತ್ತೇವೆ. ಪ್ರಸ್ತುತ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ರಚನಾತ್ಮಕ ಪಾತ್ರವನ್ನು ವಹಿಸುವುದನ್ನು ಮುಂದುವರಿಸಲು ನಾವು ಉಳಿದ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು  ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ತಿಳಿಸಿದ್ದಾರೆ. 

  • 9 May 2025 10:08 AM IST

    ಉತ್ತರಾಖಂಡದ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ

  • 9 May 2025 10:07 AM IST

    ಚಂಡೀಗಢದಲ್ಲಿ ಸಂಭವನೀಯ ವಾಯುದಾಳಿಯ ಬಗ್ಗೆ ಸೈರನ್‌ಗಳು ಮೊಳಗುತ್ತಿವೆ

    ವಾಯುಪಡೆಯ ನಿಲ್ದಾಣದಿಂದ ಸಂಭವನೀಯ ದಾಳಿಯ ಬಗ್ಗೆ ವಾಯು ಎಚ್ಚರಿಕೆ ಬಂದಿದೆ. ಸೈರನ್‌ಗಳು ಮೊಳಗುತ್ತಿವೆ. ಎಲ್ಲರೂ ಒಳಾಂಗಣದಲ್ಲಿಯೇ ಇರುವಂತೆ ಮತ್ತು ಬಾಲ್ಕನಿಗಳಿಂದ ದೂರವಿರುವಂತೆ ಸೂಚಿಸಲಾಗಿದೆ ಎಂದು ಚಂಡೀಗಢದ ಡಿಸಿ ತಿಳಿಸಿದ್ದಾರೆ.

  • 9 May 2025 10:03 AM IST

    ಎಲ್‌ಒಸಿ ಬಳಿ ಪಾಕಿಸ್ತಾನಿ ಪಡೆಗಳ ಶೆಲ್ ದಾಳಿ, ಮಹಿಳೆ ಸಾವು

    ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿಯ ಪ್ರದೇಶಗಳಲ್ಲಿ ಪಾಕಿಸ್ತಾನಿ ಪಡೆಗಳು ಭಾರೀ ಶೆಲ್ ದಾಳಿ ನಡೆಸಿದ್ದು, ಒಬ್ಬ ಮಹಿಳೆ ಮೃತಪಟ್ಟಿದ್ದು, ಅವರ ಕುಟುಂಬದ ಇಬ್ಬರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

    ಪಾಕಿಸ್ತಾನಿ ಪಡೆಗಳು ಎಲ್‌ಒಸಿ ಉದ್ದಕ್ಕೂ ಕದನ ವಿರಾಮವನ್ನು ಉಲ್ಲಂಘಿಸಿ ಗುರುವಾರ ರಾತ್ರಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿರುವ ನಾಗರಿಕ ಪ್ರದೇಶಗಳಲ್ಲಿ ಭಾರೀ ಶೆಲ್ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನವು ಸಿಲಿಕೋಟ್, ಬೋನಿಯಾರ್, ಕಮಲ್‌ಕೋಟ್, ಮೊಹ್ರಾ ಮತ್ತು ಜಿಂಗಲ್ ಸೇರಿದಂತೆ ಉರಿಯ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ. ಈ ಭಾರೀ ಶೆಲ್ ದಾಳಿಯು ಹಲವಾರು ಕಟ್ಟಡಗಳಿಗೆ ಹಾನಿಯನ್ನುಂಟುಮಾಡಿತು. ಇದರಿಂದ ಜನರು ದಿಕ್ಕಾಪಾಲಾಗಿ ಓಡಿದರು. 

    ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಮೊಹ್ರಾ ಬಳಿ ಶೆಲ್ ಅವರ ಕಾರಿಗೆ ಡಿಕ್ಕಿ ಹೊಡೆದು ಒಂದು ಕುಟುಂಬದ ಮೂವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

    ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ನರ್ಗಿಸ್ ಬೇಗಂ ಎಂದು ಗುರುತಿಸಲಾದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

  • 9 May 2025 9:16 AM IST

    ದಾಳಿಯನ್ನು ವಿಫಲಗೊಳಿಸಿದ ಭಾರರತ ಸೇನೆ

    ಪಾಕಿಸ್ತಾನ ಸಶಸ್ತ್ರ ಪಡೆಗಳು ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆಗಳನ್ನು (CFV) ನಡೆಸಿದ್ದವು. ಈ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಯಿತು ಮತ್ತು CFV ಗಳಿಗೆ ಸೂಕ್ತ ಉತ್ತರವನ್ನು ನೀಡಲಾಯಿತು.ದ

  • 9 May 2025 9:13 AM IST

    ರಕ್ಷಣಾ ಸಚಿವಾಲಯದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆಗಾಗಿ ತ್ರಿ-ಸೇನಾಪಡೆ ಮುಖ್ಯಸ್ಥರು

Read More
Next Story