ಟೇಕಾಫ್‌ ಆಗದ ಇಂಡಿಗೋ ವಿಮಾನ; ರಾಜ್ಯದ ಸಚಿವರು, ಶಾಸಕರು ದಿಲ್ಲಿಯಲ್ಲೇ ಲಾಕ್‌
x
ವಿಮಾನದಲ್ಲಿ ಲಾಕ್‌ ಆದ ಸಚಿವರು

ಟೇಕಾಫ್‌ ಆಗದ ಇಂಡಿಗೋ ವಿಮಾನ; ರಾಜ್ಯದ ಸಚಿವರು, ಶಾಸಕರು ದಿಲ್ಲಿಯಲ್ಲೇ ಲಾಕ್‌

ದೆಹಲಿಯಿಂದ ಬೆಳಗಾವಿಗೆ ಬರಬೇಕಿದ್ದ ಇಂಡಿಗೋ ವಿಮಾನ ದಟ್ಟ ಮಂಜಿನ ಕಾರಣದಿಂದ ವಿಳಂಬಗೊಂಡಿದೆ. ಇದರಿಂದಾಗಿ ಸಚಿವರು, ಶಾಸಕರು ಪರದಾಡುವಂತಾಗಿದೆ.


Click the Play button to hear this message in audio format

ಇಂಡಿಗೋ ಬಿಕ್ಕಟ್ಟು ರಾಜ್ಯದ ಸಚಿವರು, ಶಾಸಕರಿಗೂ ತಟ್ಟಿದೆ. ನಿನ್ನೆ ದೆಹಲಿಯಲ್ಲಿ ಕೆಂದ್ರ ಸರ್ಕಾರದ ವಿರುದ್ಧ ನಡೆದಿದ್ದ ವೋಟ್‌ ಚೋರಿ ಪ್ರತಿಭಟನೆಗೆ ತೆರಳಿದ್ದ ಸಚಿವರು ಸೇರಿದಂತೆ ನೂರಕ್ಕೂ ಹೆಚ್ಚು ಶಾಸಕರಲ್ಲಿ 20 ಜನ ಇದೀಗ ಅಲ್ಲಿಂದ ವಾಪಸಾಗಲು ಸಾಧ್ಯವಾಗದೇ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ.

ದೆಹಲಿಯಿಂದ ಬೆಳಗಾವಿಗೆ ಬರಬೇಕಿದ್ದ ವಿಮಾನ ಗೆ ದಟ್ಟ ಮಂಜಿನ ಕಾರಣದಿಂದ ಬೆಳಗ್ಗೆ 5:40ಕ್ಕೆ ಟೇಕಾಪ್ ಆಗಬೇಕಿದ್ದ ಇಂಡಿಗೋ ವಿಮಾನ ಹಾರಾಟ ವಿಳಂಬ ಆಗಿದೆ. ಇದು ಹಲವು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಈ ಶಾಸಕರು ಆಗಮಿಸಬೇಕಾಗಿತ್ತು. ಆದರೆ 8 ಗಂಟೆಯಾದರೂ ವಿಮಾನ ಟೇಕಾಫ್‌ ಆಗಿಯೇ ಇಲ್ಲ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಸಚಿವರು ದೆಹಲಿಯಲ್ಲೇ ಲಾಕ್‌

ಇಂದು ಬೆಳಗ್ಗೆ ದೆಹಲಿ ಏರ್ ಪೋರ್ಟ್‌ನಲ್ಲಿ ಇಂಡಿಗೊ ವಿಮಾನ ಟೇಕಾಪ್ ವಿಳಂಬಗೊಂಡಿದೆ. ವಿಮಾನದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿಹೆಬ್ಬಾಳ್ಕರ್,ಎಚ್‌.ಕೆ.‌ಪಾಟೀಲ್, ಎಂ.ಬಿ ಪಾಟೀಲ್‌, ಈಶ್ವರ ಖಂಡ್ರೆ ಹಾಗು ಇತರ ಶಾಸಕರು ಟೇಕಾಫ್‌ ವಿಳಂಬದಿಂದ ವಿಮಾನದಲ್ಲಿ ಕಾಯುವಂತಾಯಿತು. ಇನ್ನು ಸಚಿವರಾದ ಜಾರಕಿಹೊಳಿ ಎಂ.ಬಿ ಪಾಟೀಲ್‌, ಕೆ.ಜೆ. ಜಾರ್ಜ್‌ ಬದಲಿ ವಿಮಾನದಲ್ಲಿ ಬೆಳಗಾವಿಗೆ ಬಂದಿಳಿದಿದ್ದಾರೆ ಎನ್ನಲಾಗಿದೆ.

ವಿಮಾನದಲ್ಲಿರುವ ಸಚಿವರು, ಶಾಸಕರು ಯಾರು?

ಕೋನರೆಡ್ಡಿ

ಬಸನಗೌಡ ಬಾದರ್ಲಿ

ಆನಂದ್ ಗಡ್ಡದೇವರಮಠ

ಎಚ್ ಕೆ ಪಾಟೀಲ್

ಲಕ್ಷ್ಮೀ ಹೆಬಾಳ್ಕರ್

ಶರಣು ಪ್ರಕಾಶ್ ಪಾಟೀಲ್

ರಾಜು ಗೌಡ

ಸಲೀಂ ಅಹಮದ್

ತನ್ವೀರ್ ಸೇಠ್

ಜಿ ಎಸ್ ಪಾಟೀಲ್

ಸುಭಾಷ್ ಗುತ್ತೇದಾರ

ಎಚ್ ಡಿ ರೇವಣ್ಣ

ಈಶ್ವರ್ ಖಂಡ್ರೆ

ಜೆ ಟಿ ಪಾಟೀಲ್

ತಿಪ್ಪಣ್ಣ ಕಾಮಕನೂರ್

ನಾಗೇಂದ್ರ

ಅಲ್ಲಮಪ್ರಭು ಪಾಟೀಲ್

ರೆಹಮಾನ್ ಖಾನ್

ನಿನ್ನೆ ದೆಹಲಿಯಲ್ಲಿ ಬೃಹತ್‌ ವೋಟ್‌ ಚೋರಿ ಪ್ರತಿಭಟನೆ

ವೋಟ್ ಚೋರಿ ವಿರುದ್ಧವಾಗಿ ನಿನ್ನೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಆಳಂದ ಕ್ಷೇತ್ರದ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲದೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಸಚಿವರು, ಶಾಸಕರು ಭಾಗಿಯಾಗಿದ್ದರು.

Read More
Next Story