LIVE Operation Sindoor | ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ; ಅಮೃತಸರದಲ್ಲಿ ಹೈ ಅಲರ್ಟ್
x
ಡೊನಾಲ್ಡ್‌ ಟ್ರಂಪ್

Operation Sindoor | ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ; ಅಮೃತಸರದಲ್ಲಿ ಹೈ ಅಲರ್ಟ್

ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಬಣಗೊಂಡಿದ್ದ ಮಿಲಿಟರಿ ಸಂಘರ್ಷಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಶನಿವಾರ ಸಂಜೆ (ಮೇ 10) ಎರಡೂ ದೇಶಗಳು ಯುದ್ಧವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂಬುದಾಗಿ ವರದಿಯಾಗಿದೆ.


ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಬಣಗೊಂಡಿದ್ದ ಮಿಲಿಟರಿ ಸಂಘರ್ಷಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಶನಿವಾರ ಸಂಜೆ (ಮೇ 10) ಎರಡೂ ದೇಶಗಳು ಯುದ್ಧವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂಬುದಾಗಿ ವರದಿಯಾಗಿದೆ.

ಭಾರತದ ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಈ ಕುರಿತು ಹೇಳಿದ್ದಾರೆ. ಸಂಘರ್ಷ ವಿರಾಮ ಮೇ 12ರ ಮಧ್ಯಾಹ್ನ 12 ಗಂಟೆಯಿಂದ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಯಾವುದೇ ಸೈನಿಕ ಕಾರ್ಯಾಚರಣೆಗಳು ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದ ಘೋಷಣೆಗೂ ಕೆಲವೇ ನಿಮಿಷಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುಥ್'​ ಸಾಮಾಜಿಕ ಜಾಲತಾಣದಲ್ಲಿ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ಚರ್ಚೆಗಳ ನಂತರ ಭಾರತ ಮತ್ತು ಪಾಕಿಸ್ತಾನ "ಪೂರ್ಣ ಮತ್ತು ತಕ್ಷಣದ ಯುದ್ಧವಿರಾಮ"ಕ್ಕೆ ಒಪ್ಪಿರುವುದಾಗಿ ಹೇಳಿಕೊಂಡಿದ್ದರು. ಈ ವೇಳೆ ಅವರು, ಎರಡೂ ದೇಶಗಳ 'ಯೋಚನೆಗಳನ್ನು' ಅಭಿನಂದಿಸಿದ್ದಾರೆ.

ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಮತ್ತು ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು ಕಳೆದ 48 ಗಂಟೆಗಳಲ್ಲಿ ಉಭಯ ದೇಶಗಳ ಉನ್ನತ ನಾಯಕರೊಂದಿಗೆ (ಪ್ರಧಾನಮಂತ್ರಿಗಳು, ವಿದೇಶಾಂಗ ಸಚಿವರು, ಸೇನಾ ಮುಖ್ಯಸ್ಥ, ರಾಷ್ಟ್ರೀಯ ಭದ್ರತಾ ಸಲಹೆಗಾರರು) ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಯುದ್ಧವಿರಾಮ ಜಾರಿಯಾದ ಬಳಿಕ ಎರಡೂ ದೇಶಗಳ ಪ್ರತಿನಿಧಿಗಳು ಚರ್ಚೆಗಳನ್ನು ನಡೆಸಲಿದ್ದಾರೆ. ಈ ಚರ್ಚೆಗಳಲ್ಲಿ ಸೇನಾ ವಾಪಸಾತಿ, ಎರಡೂ ಕಡೆಯ ಷರತ್ತುಗಳು, ಇಂಡಸ್ ವಾಟರ್ ಟ್ರೀಟಿ (IWT) ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಂಬಂಧಿಸಿದಂತೆ ಮೇ7ರ ಮೊದಲಿನ ಸ್ಥಿತಿಗೆ ಮರಳಲಿದೆ.ಕದನ ವಿರಾಮದ ಬಗ್ಗೆ ದ ಫೆಡರಲ್‌ ನಡೆಸಿದ ವಿಶ್ಲೇಷಣೆಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪಾಕಿಸ್ತಾನ ಹೇಳಿಕೆಭಾರತದ ಕ್ಷಿಪಣಿ ಹಾಗೂ ಡ್ರೋಣ್ ಗಳು ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಪಾಕಿಸ್ತಾನದ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಶನಿವಾರ (ಮೇ 10) ಬೆಳಗಿನ ಜಾವ 4 ಗಂಟೆಗೆ ಇಸ್ಲಾಮಾಬಾದ್‌ನಲ್ಲಿ ಕರೆದ ತುರ್ತು ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ರಾವಲ್ಪಿಂಡಿಯ ಚಕ್ಲಾಲಾದ ನೂರ್ ಖಾನ್, ಚಕ್ವಾಲ್ ನ ಮುರಿದ್ ಹಾಗೂ ಜಾಂಗ್ ಜಿಲ್ಲೆಯ ಶೋರ್ಕೋಟ್ ಬಳಿ ಇರುವ ರಫೀಕಿ ವಾಯುನೆಲೆಗಳ ಮೇಲೆ ಭಾರತದ ಕ್ಷಿಪಣಿ ಹಾಗೂ ಡ್ರೋಣ್ ಗಳು ದಾಳಿ ನಡೆಸಿವೆ. ಭಾರತದ ದಾಳಿಯನ್ನು ಸಮರ್ಥವಾಗಿ ವಿಫಲಗೊಳಿಸಲಾಗಿದೆ. ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.

ಭಾರತದ ಕೆಟ್ಟ ಕೃತ್ಯ: ಪಾಕ್‌ ಆರೋಪ

ಭಾರತವು ತನ್ನ ಜೆಟ್‌ಗಳ ಮೂಲಕ ಕ್ಷಿಪಣಿಗಳನ್ನು ಹಾರಿಸಿರುವುದು ಕೆಟ್ಟ ಕೃತ್ಯ. ಭಾರತದ ಈ ದಾಳಿಯನ್ನು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯಿಂದ ತಡೆಹಿಡಿಯಲಾಗಿದೆ. ಭಾರತದ ಈ ಕೃತ್ಯ ಮಾರಕ ಯುದ್ಧಕ್ಕೆ ತಳ್ಳುವಂತಿದೆ. ಭಾರತದ ಈ ಆಕ್ರಮಣಕ್ಕೆ ಪಾಕಿಸ್ತಾನ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದರು.

ಭಾರತದದೊಂದಿಗಿನ ಸಂಘರ್ಷದ ಕುರಿತು ಪ್ರಶ್ನೆಗಳಿಗೆ ಚೌಧರಿ ಅವರು ಯಾವುದೇ ಉತ್ತರ ನೀಡದೇ ಮಾಧ್ಯಮಗೋಷ್ಠಿ ಮುಕ್ತಾಯಗೊಳಿಸಿ ಹೊರ ನಡೆದರು.

ವಾಯುಪ್ರದೇಶ ಸ್ಥಗಿತ

ಎಲ್ಲಾ ರೀತಿಯ ವಿಮಾನ ಪ್ರಯಾಣಗಳಿಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಸ್ಥಗಿತಗೊಳಿಸಿದೆ. ಈ ಕುರಿತು ಪಾಕಿಸ್ತಾನ ಏರ್‌ಪೋರ್ಟ್ ಅಥಾರಿಟಿ (ಪಿಎಎ) ಅಧಿಸೂಚನೆ ಹೊರಡಿಸಿದ್ದು, ವಾಯುಪ್ರದೇಶವನ್ನು ಶನಿವಾರ (ಮೇ 10) ಮುಂಜಾನೆ 3.15 ರಿಂದ ಮಧ್ಯಾಹ್ನ 12 ರವರೆಗೆ ಮುಚ್ಚಲಾಗಿದೆ ಎಂದು ತಿಳಿಸಿದೆ. ಮಧ್ಯಾಹ್ನ 12 ರ ಬಳಿಕ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಪಿಎಎ ಹೇಳಿದೆ.

ಏಪ್ರಿಲ್ 22 ರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನಾ ಪಡೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) 9 ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದೆ.

ಮುಂದುವರಿದ ಡ್ರೋಣ್ ದಾಳಿ

ಜಮ್ಮು ಕಾಶ್ಮೀರದಿಂದ ಗುಜರಾತ್‌ವರೆಗಿನ ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸತತ ಎರಡನೇ ದಿನವಾದ ಶುಕ್ರವಾರ ರಾತ್ರಿ ಕೂಡ ಡ್ರೋಣ್ ದಾಳಿ ನಡೆಸಿತು. ವಿಮಾನ ನಿಲ್ದಾಣ ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

Live Updates

  • 10 May 2025 11:09 PM IST

    ಪಾಕಿಸ್ತಾನದ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲು ಸೇನೆಗೆ ಸರ್ಕಾರ ಸೂಚನೆ

    ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಕದನ ವಿರಾಮ ಜಾರಿಗೆ ಒಮ್ಮತ ವ್ಯಕ್ತವಾದ ಬಳಿಕವೂ ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಡ್ರೋನ್‌ ದಾಳಿ ಮುಂದುವರಿಸಿದೆ.

    ಶನಿವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದನ್ನು ಖಂಡಿಸಿದರು. ಅಲ್ಲದೇ ಪಾಕಿಸ್ತಾನದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆ ಸೇನೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

  • 10 May 2025 6:19 PM IST

    ಭಾರತ-ಪಾಕ್ ನಡುವೆ ತಕ್ಷಣದ ಕದನ ವಿರಾಮಕ್ಕಾಗಿ ಅಮೆರಿಕ ಮಧ್ಯಸ್ಥಿಕೆ ವಹಿಸಿ ರಾತ್ರಿಯಿಡೀ ಮಾತುಕತೆ ನಡೆಸಿತು: ಡೊನಾಲ್ಡ್ ಟ್ರಂಪ್

  • 10 May 2025 4:32 PM IST

    ಜಮ್ಮುವಿನಲ್ಲಿ ಪಾಕ್‌ನಲ್ಲಿ ಅಡ್ಡಾಡುತ್ತಿದ್ದ ಮದ್ದುಗುಂಡುಗಳನ್ನು ಬಾಂಬ್ ನಿಷ್ಕ್ರಿಯಗೊಳಿಸಿದ ದಳ

  • 10 May 2025 4:30 PM IST

    ಉರಿಯ ಎಲ್‌ಒಸಿ ಉದ್ದಕ್ಕೂ ಭಾರೀ ಫಿರಂಗಿ ಗುಂಡಿನ ಚಕಮಕಿ

    ಉತ್ತರ ಕಾಶ್ಮೀರದ ಉರಿಯ ಎಲ್‌ಒಸಿ ಉದ್ದಕ್ಕೂ ನಿರಂತರ ಭಾರೀ ಫಿರಂಗಿ ಗುಂಡಿನ ಚಕಮಕಿ ನಡೆದಿದೆ ಸ್ಥಳೀಯ ವರದಿಗಾರರು 150 ಕ್ಕೂ ಹೆಚ್ಚು ವಸತಿ ರಚನೆಗಳಿಗೆ ಹಾನಿಯನ್ನು ದೃಢಪಡಿಸಿದ್ದಾರೆ. ಬಾರಾಮುಲ್ಲಾ ಮತ್ತು ಶ್ರೀನಗರದ ಕಡೆಗೆ ಉರಿ ನಿವಾಸಿಗಳ ದೊಡ್ಡ ಪ್ರಮಾಣದ ವಲಸೆ ಮಾಡುತ್ತಿದ್ದಾರೆ. 

  • 10 May 2025 3:46 PM IST

    ಜಮ್ಮುವಿನಲ್ಲಿ ಪಾಕ್ ಶೆಲ್ ದಾಳಿಯಲ್ಲಿ ಎಂಟು ಬಿಎಸ್ಎಫ್ ಸಿಬ್ಬಂದಿಗೆ ಗಾಯ

    ಜಮ್ಮು ಪ್ರದೇಶದ ಆರ್ ಎಸ್ ಪುರದಲ್ಲಿ ಪಾಕ್ ಶೆಲ್ ದಾಳಿಯಲ್ಲಿ ಎಂಟು ಬಿಎಸ್ಎಫ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

  • 10 May 2025 3:34 PM IST

    ಭಾರತೀಯ ಸೇನೆಗೆ ಸಂಪೂರ್ಣ ಬೆಂಬಲ: ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ

    ಪಾಕಿಸ್ತಾನದೊಂದಿಗಿನ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೆಗೆದುಕೊಂಡ ಕ್ರಮಗಳನ್ನು ಕಾಂಗ್ರೆಸ್‌ನ ದಿಗ್ಗಜ ಎ.ಕೆ. ಆಂಟನಿ ಶನಿವಾರ ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುವುದನ್ನು ಸಶಸ್ತ್ರ ಪಡೆಗಳಿಗೆ ಬಿಟ್ಟಿದೆ ಮತ್ತು ಅವರು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಅವರು ತೆಗೆದುಕೊಂಡ ಕ್ರಮದ ಬಗ್ಗೆ ನಾನು ಚರ್ಚಿಸಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು. 

  • 10 May 2025 3:00 PM IST

    ಕಾರ್ಯಕ್ರಮಗಳಲ್ಲಿ ವಾಯುದಾಳಿಯ ಸೈರನ್‌ಗಳನ್ನು ಬಳಸಬೇಡಿ: ಸುದ್ದಿಗಳಿಗೆ ಸಲಹೆ ನೀಡಿದ ಸರ್ಕಾರ

    ಸಮುದಾಯ ಜಾಗೃತಿ ಅಭಿಯಾನವನ್ನು ಹೊರತುಪಡಿಸಿ ಇತರ ಕಾರ್ಯಕ್ರಮಗಳಲ್ಲಿ ನಾಗರಿಕ ರಕ್ಷಣಾ ವಾಯುದಾಳಿಯ ಸೈರನ್‌ಗಳ ಶಬ್ದಗಳನ್ನು ಬಳಸದಂತೆ  ಸರ್ಕಾರ ಶನಿವಾರ ಎಲ್ಲಾ ಮಾಧ್ಯಮ ವಾಹಿನಿಗಳಿಗೆ ಆದೇಶಿಸಿದೆ. 

    1968 ರ ನಾಗರಿಕ ರಕ್ಷಣಾ ಕಾಯ್ದೆಯ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಿ, ಎಲ್ಲಾ ಮಾಧ್ಯಮ ವಾಹಿನಿಗಳು ಸಮುದಾಯಕ್ಕೆ ಶಿಕ್ಷಣ ನೀಡುವುದನ್ನು ಹೊರತುಪಡಿಸಿ ತಮ್ಮ ಕಾರ್ಯಕ್ರಮಗಳಲ್ಲಿ ನಾಗರಿಕ ರಕ್ಷಣಾ ವಾಯುದಾಳಿಯ ಸೈರನ್‌ಗಳ ಶಬ್ದಗಳನ್ನು ಬಳಸದಂತೆ ವಿನಂತಿಸಲಾಗಿದೆ ಎಂದು ನಿರ್ದೇಶನಾಲಯದ ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳ ಪ್ರಕಟನೆಯಲ್ಲಿ ತಿಳಿಸಿದೆ. 

    ಸೈರನ್‌ಗಳ ನಿಯಮಿತ ಬಳಕೆಯು ವಾಯುದಾಳಿಯ ಸೈರನ್‌ಗಳಿಂದಾಗಿ ನಾಗರಿಕರು ಅದನ್ನು ನಿಜವಾದ ವಾಯುದಾಳಿಯ ಸಮಯದಲ್ಲಿ ಮಾಧ್ಯಮ ವಾಹಿನಿಗಳು ಬಳಸುವ ದಿನನಿತ್ಯದ ವಿಷಯವೆಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ಅದು ಹೇಳಿದೆ.

  • 10 May 2025 2:50 PM IST

    ಅಂಬಾಲಾ ದೇಶೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ

  • 10 May 2025 2:26 PM IST

    ಆಪರೇಷನ್ ಸಿಂಧೂರ್: ಪಂಜಾಬ್ ಸರ್ಕಾರ ಇಂದು ಸರ್ವಪಕ್ಷ ಸಭೆ ನಡೆಸಲಿದೆ.

  • 10 May 2025 2:15 PM IST

    ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಸರಕು ಸಾಗಣೆ ಮೇಲ್ವಿಚಾರಣೆಯನ್ನು ಸಿಐಎಸ್‌ಎಫ್ ಪುನರಾರಂಭಿಸಿದೆ.



Read More
Next Story