
ಪ್ರಗತಿಪರ ರೈತ ಶಶಿಧರ ಬಿರಾದರ
60 ದಿನಗಳಲ್ಲಿ 15 ಲಕ್ಷ ಗಳಿಕೆ: ಕಲ್ಲಂಗಡಿ ಬೆಳೆದು ಯಶಸ್ಸು ಕಂಡ ವಿಜಯಪುರದ ರೈತ!
ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡ ಸತೀಶ್ ಬಿರಾದಾರ್ ಅವರು, ಅತಿ ಕಡಿಮೆ ಅವಧಿಯಲ್ಲಿ ಸುಮಾರು 70 ಟನ್ ಕಲ್ಲಂಗಡಿ ಇಳುವರಿ ಪಡೆದಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ನಿರಂತರ ಪ್ರಯೋಗ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ವಿಜಯಪುರ ಜಿಲ್ಲೆಯ ರೈತರೊಬ್ಬರು ಮಾದರಿಯಾಗಿದ್ದಾರೆ. ಬಬಲೇಶ್ವರ ಮತಕ್ಷೇತ್ರದ ಕಾಖಂಡಕಿ ಗ್ರಾಮದ ಪ್ರಗತಿಪರ ರೈತ ಸತೀಶ್ ಮ. ಬಿರಾದಾರ್ ಅವರು, ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೇವಲ 60 ದಿನಗಳಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ಆದಾಯ ಗಳಿಸಿ ಗಮನ ಸೆಳೆದಿದ್ದಾರೆ.
ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡ ಸತೀಶ್ ಬಿರಾದಾರ್ ಅವರು, ಅತಿ ಕಡಿಮೆ ಅವಧಿಯಲ್ಲಿ ಸುಮಾರು 70 ಟನ್ ಕಲ್ಲಂಗಡಿ ಇಳುವರಿ ಪಡೆದಿದ್ದಾರೆ. ಈ ಹಣ್ಣುಗಳನ್ನು ಕೆಜಿಗೆ ಸರಿಸುಮಾರು 25 ರೂಪಾಯಿಯಂತೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸಿದ್ದಾರೆ. ಅವರ ಈ ಸಾಧನೆ ಸುತ್ತಮುತ್ತಲಿನ ರೈತರಿಗೆ ಸ್ಪ.
ಎರಡು ಲಕ್ಷ ಬಂಡವಾಳ 17 ಲಕ್ಷ ಆದಾಯ
ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲು ಸುಮಾರು ಎರಡು ಲಕ್ಷ ರೂ. ಬಂಡವಾಳ ಹಾಕಿದ್ದು, 120 ಟನ್ ಕಲ್ಲಂಗಡಿ ಹಣ್ಣು ಫಸಲು ಸಿಗಬೇಕಿತ್ತು. ಆದರೆ ಈ ಬಾರಿಯ ಮಳೆಯಿಂದಾಗಿ ಫಸಲು ಕಡಿಮೆ ಪ್ರಮಾಣದಲ್ಲಿ ದೊರೆತಿದ್ದು ಸುಮಾರು 70 ಟನ್ ಹಣ್ಣು ದೊರೆತಿದೆ. ಇಳುವರಿ ಕಡಿಮೆಯಾದ ಕಾರಣ ಕಳೆದ ವರ್ಷ ಕೆ.ಜಿ. ಹಣ್ಣಿಗೆ 19 ರೂ. ಗೆ ಮಾರಾಟವಾಗುತ್ತಿದ್ದ ಹಣ್ಣು ಈ ಬಾರಿ ಕೆ.ಜಿ.ಗೆ 25 ರೂ. ಗೆ ಮಾರಾಟವಾಗುತ್ತಿದ್ದು ಸುಮಾರು 17ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದೇನೆ. ರಾಸಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಕಡಿಮೆ ಬಳಸಿದ್ದು, ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ. ಪ್ರಾರಂಭದಲ್ಲಿ ಒಂದು ಹಣ್ಣು 3ರಿಂದ 7ಕೆ.ಜಿ. ತೂಕವನ್ನು ಹೊಂದಿದ್ದು, ಸಂತಸ ಹೆಚ್ಚಿಸಿದೆ. 16 ಎಕರೆ ಜಮೀನಿನಲ್ಲಿ ಕಲ್ಲಂಗಡಿ, ದ್ರಾಕ್ಷಿ, ಕಬ್ಬು ಹಾಗೂ ತರಕಾರಿಯನ್ನು ಬೆಳೆಯುತ್ತಿದ್ದು ಮನೆಯ ಸದಸ್ಯರೇ ಹೆಚ್ಚಾಗಿ ಕೆಲಸ ಮಾಡುವುದರಿಂದ ಕೂಲಿಯೂ ಉಳಿತಾಯವಾಗುತ್ತಿದೆ ಎಂದು ಕಾಖಂಡಕಿ ಗ್ರಾಮದ ಪ್ರಗತಿಪರ ರೈತ ಶಶಿಧರ ಬಿರಾದಾರ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಸಂತಸ ಹಂಚಿಕೊಂಡರು.
ಸಚಿವರಿಂದ ಶ್ಲಾಘನೆ
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ರೈತನ ಈ 'ಯಶೋಗಾಥೆ'ಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸತೀಶ್ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕೇವಲ 60 ದಿನಗಳ ಅಲ್ಪಾವಧಿಯಲ್ಲಿ ಬರೋಬ್ಬರಿ 70 ಟನ್ ಕಲ್ಲಂಗಡಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸುಮಾರು 25 ರೂಪಾಯಿ ದರ ಸಿಕ್ಕಿದ್ದು, ಒಟ್ಟು 15 ಲಕ್ಷ ರೂಪಾಯಿ ಆದಾಯ ಗಳಿಸಿರುವುದು ವಿಶೇಷವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ 8 ಸಾವಿರ ಹೆಕ್ಟರ್ನಲ್ಲಿ ಬೆಳೆ
ರಾಜ್ಯದಲ್ಲಿ ಕಲ್ಲಂಗಡಿ ಬೆಳೆಯನ್ನು ಸಾಮಾನ್ಯವಾಗಿ ಸುಮಾರು 7 ರಿಂದ 8 ಸಾವಿರ ಹೆಕ್ಟೇರ್ಗಳ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ. 2023-24ರ ಅವಧಿಯಲ್ಲಿ 177.874 ಸಾವಿರ ಟನ್ಗಳಷ್ಟು ಕಲ್ಲಂಗಡಿ ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಉಡುಪಿ, ಕೊಪ್ಪಳ, ಚಿತ್ರದುರ್ಗ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ.
ಹೊರ ರಾಜ್ಯಗಳಿಗೆ ರಫ್ತು
ವಿಜಯಪುರದಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣುಗಳನ್ನು ಮುಂಬೈ ಸೇರಿದಂತೆ ದೊಡ್ಡ ನಗರಗಳಿಗೆ ಪೂರೈಕೆ ಮಾಡಲಾಗುತ್ತದೆ. ಉಡುಪಿಯಲ್ಲಿ ಬೆಳೆದ ಗುಣಮಟ್ಟದ ಕಲ್ಲಂಗಡಿಯನ್ನು ಕೇರಳದ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.
ಲಾಭದಾಯಕ ಬೆಳೆ- ಕಲ್ಲಂಗಡಿ!
ಕಲ್ಲಂಗಡಿ ಕೃಷಿಯು ರಾಜ್ಯದಲ್ಲಿ ಲಾಭದಾಯಕ ಬೆಳೆಯಾಗಿದೆ. ಸುಧಾರಿತ ತಳಿಗಳು ಮತ್ತು ಉತ್ತಮ ಕೃಷಿ ಪದ್ಧತಿಗಳೊಂದಿಗೆ ರೈತರು ಪ್ರತಿ ಹೆಕ್ಟೇರ್ಗೆ ಸುಮಾರು 25 ರಿಂದ 70 ಟನ್ಗಳವರೆಗೆ ಇಳುವರಿ ಪಡೆಯಬಹುದು. ಅರ್ಕಾಜ್ಯೋತಿ ಎಂಬ ಕಲ್ಲಂಗಡಿ ತಳಿಯಿಂದ ಪ್ರತಿ ಹೆಕ್ಟೇರ್ಗೆ ಸುಮಾರು 70 ಟನ್ ಇಳುವರಿ ನಿರೀಕ್ಷಿಸಬಹುದು.ಕೆಲವು ರೈತರು ಕೇವಲ ಒಂದೂವರೆ ಎಕರೆ ಜಮೀನಿನಲ್ಲಿ 52 ಟನ್ಗಳಷ್ಟು ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಗಳಿಸಿರುವ ಸಾಕಷ್ಟು ಉದಾಹರಣೆಗಳೂ ಇವೆ. ಕಲ್ಲಂಗಡಿ ಬೇಸಿಗೆ ಕಾಲದ ಪ್ರಮುಖ ಬೆಳೆಯಾಗಿದ್ದು, ಇದನ್ನು ಸಾಮಾನ್ಯವಾಗಿ ನವೆಂಬರ್ನಿಂದ ಫೆಬ್ರವರಿ ತಿಂಗಳಲ್ಲಿ ಬಿತ್ತನೆ ಮಾಡಿ ಬೇಸಿಗೆಯಲ್ಲಿ ಕಟಾವು ಮಾಡುತ್ತಾರೆ.
ಇನ್ನಷ್ಟು ಕೆಲಸಕ್ಕೆ ಪ್ರೇರಣೆ
ಈ ಕುರಿತು ಟ್ವೀಟ್ (X) ಮಾಡಿರುವ ಎಂಬಿ ಪಾಟೀಲ್, "ಇಂತಹ ಯಶೋಗಾಥೆಗಳು ನೀರಾವರಿ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಲು ನಮಗೆ ಪ್ರೇರಣೆ ನೀಡುತ್ತವೆ. ನಮ್ಮ ರೈತರು ಇಂತಹ ನೂತನ ಪ್ರಯೋಗಗಳನ್ನು ಅಳವಡಿಸಿಕೊಂಡು ಹೆಚ್ಚು ಅಭಿವೃದ್ಧಿ ಸಾಧಿಸಲಿ ಎಂಬುದೇ ನನ್ನ ಹಾರೈಕೆ," ಎಂದು ಶುಭ ಹಾರೈಸಿದ್ದಾರೆ.

