ಸ್ಪೇಸ್‌ಎಕ್ಸ್ ಜೋಡಿಯಿಂದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ
x
ಜಾರೆಡ್ ಐಸಾಕ್‌ಮನ್ ಅವರು ಮೊದಲ ವಾಣಿಜ್ಯ ಬಾಹ್ಯಾಕಾಶ ನಡಿಗೆಗೆಂದು ಡ್ರ್ಯಾಗನ್ ಕ್ಯಾಪ್ಸುಲ್‌ನಿಂದ ಹೊರಬಂದರು.

ಸ್ಪೇಸ್‌ಎಕ್ಸ್ ಜೋಡಿಯಿಂದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ


ಸ್ಪೇಸ್‌ ಎಕ್ಸ್‌ ವಿನ್ಯಾಸಗೊಳಿಸಿದ, ಹಗುರವಾದ ಬಾಹ್ಯಾಕಾಶ ಸೂಟ್‌ ಧರಿಸಿದ ಇಬ್ಬರು ಗಗನಯಾತ್ರಿಗಳು ನೌಕೆ ಹೊರಗೆ ನಡೆದಾಡಿದ್ದು, ಮೊದಲ ವಾಣಿಜ್ಯ ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದ್ದಾರೆ.

ಮಿಷನ್‌ಗೆ ಹಣ ಸಹಾಯ ಮಾಡಿರುವ ಕೋಟ್ಯಧಿಪತಿ ಜಾರೆಡ್ ಐಸಾಕ್‌ಮನ್ ಮತ್ತು ಸ್ಪೇಸ್‌ಎಕ್ಸ್ ಇಂಜಿನಿಯರ್ ಸಾರಾ ಗಿಲ್ಲಿಸ್ ಬಾಹ್ಯಾಕಾಶ ನೌಕೆ ಹೊರಗೆ ಸುಮಾರು 700 ಕಿಮೀ ಎತ್ತರದಲ್ಲಿ ಸುಮಾರು ಅರ್ಧ ಗಂಟೆ ಕಳೆದರು. ಅಪೊಲೊ ಮೂನ್ ಲ್ಯಾಂಡಿಂಗ್‌ ನಂತರ ಮನುಷ್ಯರು ಭೂಮಿಯಿಂದ ಏರಿದ ಅತಿ ಹೆಚ್ಚು ಎತ್ತರ ಇದಾಗಿದೆ.

ಕಡಿಮೆ ಅವಧಿಯ ಈ ಪ್ರಯಾಣವು ವಾಣಿಜ್ಯ ಬಾಹ್ಯಾಕಾಶ ಯಾನದ ಮಹತ್ವದ ಮೈಲಿಗಲ್ಲು. ಬಾಹ್ಯಾಕಾಶ ನೌಕೆ, ಸೂಟ್‌ಗಳು ಮತ್ತು ಒಟ್ಟಾರೆ ಮಿಷನ್ ಎಲ್ಲವೂ ಸ್ಪೇಸ್‌ಎಕ್ಸ್‌ ನಿಂದ ನಿರ್ಮಾಣಗೊಂಡಿವೆ.

ಮಿಷನ್ ಏಕೆ ಆಸಕ್ತಿದಾಯಕ ?: ಪೊಲಾರಿಸ್ ಡಾನ್ ಮಿಷನ್ ಹಲವು ಕಾರಣಗಳಿಂದ ವಿಶಿಷ್ಟ. ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಕ್ಕೆ ಬಂದರೆ, ಎಕ್ಸ್ಟ್ರಾ ವೆಹಿಕ್ಯುಲರ್ ಚಟುವಟಿಕೆ (ಅಥವಾ ಇವಿಎ)ಗೆ ಹೊಸ ಸ್ಪೇಸ್‌ಸೂಟ್‌ಗಳ ಪರೀಕ್ಷೆ ಇದರ ವಿಶಿಷ್ಟತೆ ಆಗಿದೆ. ಗಗನಯಾತ್ರಿಗಳು ತಮ್ಮ ಆಕಾಶಕಾಯದಿಂದ ಹೊರಹೋಗಲು ಅನುಮತಿಸುವ ಬಾಹ್ಯಾಕಾಶ ಸೂಟ್ , ಒಂದು ಸಣ್ಣ ಬಾಹ್ಯಾಕಾಶ ನೌಕೆಯಂತಿರುತ್ತದೆ. ಮತ್ತು, ಚಂದ್ರನನ್ನು ತಲುಪಲು ನಾಸಾ ಯೋಜಿಸಿರುವ ಆರ್ಟೆಮಿಸ್ ಮಿಷನ್‌ನಂತೆ ನವೀನ, ಆಧುನಿಕ ಸೂಟ್‌ಗಳಲ್ಲಿ ಆಸಕ್ತಿ ಬೆಳೆಯುತ್ತಿದೆ.

ಮಿಷನ್ ಭೂಮಿ ಸುತ್ತ ಅಧಿಕ ದೀರ್ಘ ವೃತ್ತದ ಕಕ್ಷೆಯಲ್ಲಿ ಪ್ರಯಾಣಿಸುತ್ತದೆ; ಅಂದರೆ, ಅದರ ಎತ್ತರ 192 ಕಿಮೀನಿಂದ 1,400 ಕಿಮೀ ವರೆಗೆ ಇರುತ್ತದೆ. ದಕ್ಷಿಣ ಅಟ್ಲಾಂಟಿಕ್ ನ ವೈಪರೀತ್ಯ ಸೇರಿದಂತೆ ಹೆಚ್ಚಿನ ವಿಕಿರಣದ ಪ್ರದೇಶಗಳ ಮೂಲಕ ಗಗನಯಾತ್ರಿಗಳನ್ನು ಕರೆದೊಯ್ಯುತ್ತದೆ; ಇಂಥ ವಿಪರೀತ ಪರಿಸ್ಥಿತಿಗಳಲ್ಲಿ ಹೊಸ ಸೂಟ್‌ಗಳ ಪರೀಕ್ಷೆಗೆ ಅವಕಾಶ ನೀಡಬಹುದು.

ವಿಭಿನ್ನ ಪ್ರಯೋಗ: ಪೋಲಾರಿಸ್ ಡಾನ್ 36 ವಿಭಿನ್ನ ಪ್ರಯೋಗಗಳನ್ನು ಒಳಗೊಂಡಿದೆ; ಅದರಲ್ಲಿ ಮಾನವ ದೇಹದ ಮೇಲೆ ಬಾಹ್ಯಾಕಾಶ ಹಾರಾಟದ ಪರಿಣಾಮಗಳನ್ನು ಅಧ್ಯಯನ ಮಾಡುತ್ತಾರೆ.

ಐಸಾಕ್‌ಮನ್ ಸ್ಪೇಸ್‌ಎಕ್ಸ್‌ನೊಂದಿಗೆ ಯೋಜಿಸಿರುವ ಮೂರು ಕಾರ್ಯಾಚರಣೆಗಳಲ್ಲಿ ಮೊದಲನೆಯದು- ಪೋಲಾರಿಸ್ ಡಾನ್. ಇದು ʻಬಾಹ್ಯಾಕಾಶವನ್ನು ಎಲ್ಲರಿಗೂ ಮುಕ್ತಗೊಳಿಸುವ ಮತ್ತು ಮನುಷ್ಯರನ್ನು ಬಹು ಗ್ರಹಗಳ ಜೀವಿಗಳನ್ನಾಗಿ ಮಾಡುವ ಭಾರಿ ಉದ್ದೇಶವನ್ನು ಪೂರೈಸುತ್ತದೆʼ ಎಂದು ಜಾರೆಡ್‌ ಹೇಳುತ್ತಾರೆ. ಎರಡನೆಯದು, ಹಬಲ್ ಬಾಹ್ಯಾಕಾಶ ದೂರದರ್ಶಕದ ಕಕ್ಷೆಯನ್ನು ಮತ್ತು ಅದರ ಜೀವಿತಾವಧಿಯನ್ನು ಹೆಚ್ಚಿಸುವುದು. ಮೂರನೆಯದು, ಸ್ಪೇಸ್‌ಎಕ್ಸ್‌ನ ಮರುಬಳಕೆ ಮಾಡಬಹುದಾದ ಸ್ಟಾರ್‌ಶಿಪ್ ರಾಕೆಟ್ ಬಳಕೆ (ಇದು ಪ್ರಸ್ತುತ ಪರೀಕ್ಷೆಯ ಆರಂಭಿಕ ಹಂತದಲ್ಲಿದೆ).

ಪ್ರಾಯಶಃ ಪೋಲಾರಿಸ್ ಡಾನ್ ನ ಅತ್ಯಂತ ಮಹತ್ವದ ಅಂಶವೆಂದರೆ, ಅದು ಬಾಹ್ಯಾಕಾಶ ಹಾರಾಟದ ಭವಿಷ್ಯವನ್ನು ಸೂಚಿಸುತ್ತದೆ. ವಾಣಿಜ್ಯ ಉದ್ದೇಶ ಹೊಂದಿದ್ದು, ಸ್ಪೇಸ್‌ ಎಕ್ಸ್‌ ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳ ಒಳಗೊಳ್ಳುವಿಕೆ ಇಲ್ಲದೆ ತನ್ನದೇ ತಂತ್ರಜ್ಞಾನ ಬಳಸಿಕೊಂಡು ನಿರ್ವಹಿಸುತ್ತದೆ.

ಬಾಹ್ಯಾಕಾಶ ಪ್ರವಾಸೋದ್ಯಮವಲ್ಲ: ಇದು ಶ್ರೀಮಂತರನ್ನು ಹಾರಾಟಕ್ಕೆ ಕಳಿಸುವ ʻಬಾಹ್ಯಾಕಾಶ ಪ್ರವಾಸೋದ್ಯಮʼವಲ್ಲ. ಸ್ಪೇಸ್‌ಎಕ್ಸ್ ಮಿಷನ್ ಖಾಸಗಿ ಸಂಪತ್ತನ್ನು ಆಧರಿಸಿದ್ದರೂ, ವೈಜ್ಞಾನಿಕ ಜ್ಞಾನ ಮತ್ತು ಬಾಹ್ಯಾಕಾಶ ಯಾನದ ಭವಿಷ್ಯಕ್ಕೆ ಕೊಡುಗೆ ನೀಡುತ್ತಿದೆ.

ಸರ್ಕಾರಿ ಬಾಹ್ಯಾಕಾಶ ಕಾರ್ಯಕ್ರಮಗಳ ವೈಶಿಷ್ಟ್ಯವೆಂದರೆ, ಗಗನಯಾತ್ರಿಗಳಿಗೆ ಕಠಿಣ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ; ಬಾಹ್ಯಾಕಾಶಕ್ಕೆ ಹೋಗುವವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ಸ್ಪೇಸ್‌ಎಕ್ಸ್ ಇಂಥ ವೃತ್ತಿಪರತೆಯನ್ನು ಇನ್ನಷ್ಟು ಮುಂದುವರಿಸುತ್ತಿದೆ; ಪೋಲಾರಿಸ್ ಡಾನ್‌ನಲ್ಲಿ ನಾಲ್ವರು ಉತ್ತಮ ಅರ್ಹತೆ ಮತ್ತು ಸನ್ನದ್ಧ ಗಗನಯಾತ್ರಿಗಳು ಭಾಗವಹಿಸುತ್ತಿದ್ದಾರೆ.

ಯುಎಸ್ ಬಾಹ್ಯಾಕಾಶ ಸಂಸ್ಥೆಗಾಗಿ ಬೋಯಿಂಗ್ ನಿರ್ಮಿಸಿದ ಸ್ಟಾರ್‌ ಲೈನರ್ ಬಾಹ್ಯಾಕಾಶ ವಾಹನದಲ್ಲಿನ ಸಮಸ್ಯೆಗಳಿಂದ ಇಬ್ಬರು ನಾಸಾ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಇವರನ್ನು ಮುಂದಿನ ಫೆಬ್ರವರಿಯಲ್ಲಿ ಸ್ಪೇಸ್‌ ಎಕ್ಸ್‌ (ಬೋಯಿಂಗ್‌ಗಿಂತ ಕಡಿಮೆ ಹಣದಲ್ಲಿ ಅಭಿವೃದ್ಧಿಪಡಿಸಲಾಗಿದೆ) ವಾಹನದ ಮೂಲಕ ರಕ್ಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಮನುಕುಲಕ್ಕೆ ಉಪಯುಕ್ತವೇ?: ಸರ್ಕಾರೇತರ ಬಾಹ್ಯಾಕಾಶ ಹಾರಾಟದ ಹೆಚ್ಚಳವನ್ನು ಟೀಕಿಸುವವರೂ ಇದ್ದಾರೆ; ವಾಣಿಜ್ಯ ಅಗತ್ಯ ಮತ್ತು ಖಾಸಗಿ ನಿಯಂತ್ರಣಕ್ಕೆ ವೈಜ್ಞಾನಿಕ ಪ್ರಯತ್ನದಲ್ಲಿ ತಾವಿಲ್ಲ ಎಂದು ಟೀಕಾಕಾರರು ಹೇಳುತ್ತಾರೆ. ಸ್ಪೇಸ್‌ಎಕ್ಸ್ ಕಂಪನಿ(ಮಾಲೀಕ ಎಲೋನ್ ಮಸ್ಕ್‌) ಪರಿಸರ ಸಂರಕ್ಷಣೆ ಮತ್ತು ಸಿಬ್ಬಂದಿ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಟೀಕೆ ಎದುರಿಸಿದೆ.

ಆದರೆ, ಬಾಹ್ಯಾಕಾಶ ಕ್ಷೇತ್ರದಲ್ಲಿನ ಸುಧಾರಣೆ ಮತ್ತು ವೆಚ್ಚ ಕಡಿತದಿಂದ ಭವಿಷ್ಯದಲ್ಲಿ ಮನುಷ್ಯರು ಚಂದ್ರನಲ್ಲಿ ನೆಲೆಸಲು ಮತ್ತು ಮಂಗಳ ಮತ್ತು ಅದರಾಚೆಗೆ ಪ್ರಯಾಣಿಸಿದರೆ, ಖಾಸಗಿ ಕಂಪನಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಪೋಲಾರಿಸ್ ಡಾನ್ ಯೋಜನೆಯು ಐಸಾಕ್‌ಮನ್‌ ಅವರ ಪ್ರತಿಷ್ಟೆಯ ಯೋಜನೆ ಅಲ್ಲ; ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನಿಜವಾದ ಉಪಯುಕ್ತತೆ ಒಳಗೊಂಡಿದೆ. ಬಾಹ್ಯಾಕಾಶ ಮತ್ತು ಭೂಮಿ ಮೇಲಿನ ಭವಿಷ್ಯದ ಮಾನವ ಪ್ರಯತ್ನಗಳಿಗೆ ಒಳ್ಳೆಯ ಸುದ್ದಿಯಾಗಿದೆ.

Read More
Next Story