ದೇಶದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ ಫೋನ್‌ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಆರಂಭವಾದ ದೇಶದ ಮುಂಚೂಣಿ ಡಿಜಿಟಲ್‌ ಪ್ರಕಾಶನ ಸಂಸ್ಥೆ ಇದೀಗ ದೊಡ್ಡ ಬಿಕ್ಕಟ್ಟಿಗೆ ಸಿಲುಕಿದೆ.

ಸೆಪ್ಟೆಂಬರ್ 2015 ರಲ್ಲಿ ಆರಂಭಗೊಂಡ ದೇಶದ ಪ್ರಥಮ ʻಮೊಬೈಲ್ ಫಸ್ಟ್ʼ ಪ್ರಕಾಶನ ಜಗರ್ನಾಟ್, ಭಾರತೀಯ ಪ್ರಕಾಶನ ಉದ್ಯಮದಲ್ಲಿನ ಕ್ರಾಂತಿಕಾರಿ ಪ್ರಯತ್ನ. ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ ಮಾಜಿ ಸಂಪಾದಕಿ ಚಿಕಿ ಸರ್ಕಾರ್ ಮತ್ತು ಜೊಮಾಟೋದ ಮಾಜಿ ಉಪಾಧ್ಯಕ್ಷೆ ದುರ್ಗಾ ರಘುನಾಥ್ ಜೊತೆಯಾಗಿ ಡಿಜಿಟಲ್ ಮತ್ತು ಮುದ್ರಣ ಒಳಗೊಂಡ ಈ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು.

ಇನ್ಫೋಸಿಸ್ನ ನಂದನ್ ನಿಲೇಕಣಿ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ನ ನೀರಜ್ ಅಗರ್ವಾಲ್ ಮತ್ತು ಫ್ಯಾಬ್ ಇಂಡಿಯಾ ಸಂಸ್ಥಾಪಕ ವಿಲಿಯಂ ಬಿಸ್ಸೆಲ್ ಈ ಪ್ರಯತ್ನದಲ್ಲಿ ಜೊತೆಯಾದವರು. ಆದರೆ, 17 ತಿಂಗಳೊಳಗೆ ಜಗರ್ನಾಟ್ನ ಸಿಇಒ ರಘುನಾಥ್, ಅವರು ತಮ್ಮ ಸ್ಥಾನದಿಂದ ಕೆಳಗಿಳಿದರು.

15 ಕೋಟಿ ರೂ. ಮೂಲನಿಧಿ ಹೂಡಿಕೆಯಿಂದ ಆರಂಭಗೊಂಡ ಜಗರ್ನಾಟ್, ದೇಶದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಬೆಳೆಯಲು ಪ್ರಯತ್ನಿಸಿತು. ಆಗಸ್ಟ್ 2015 ರ ಹೊತ್ತಿಗೆ ಪ್ರಕಾಶನ 159 ದಶಲಕ್ಷ ಬಳಕೆದಾರರನ್ನು ತಲುಪಿತು. ಸಾಂಪ್ರದಾಯಿಕ ಪುಸ್ತಕ ಮಾರುಕಟ್ಟೆಯನ್ನು ಮೊಬೈಲ್ನಿಂದ ಸ್ಥಳಾಂತರಿಸುವ ಗುರಿ ಹೊಂದಿತ್ತು. ಮುದ್ರಣಕ್ಕಿಂತ ಮೊಬೈಲ್ಗಳಿಗೆ ಆದ್ಯತೆ ನೀಡಿ ಭೌತಿಕ ಪುಸ್ತಕದ ಅಂಗಡಿಗಳ ಬಳಕೆ ಕಡಿಮೆ ಮಾಡುವ ಮೂಲಕ ಇ-ಪುಸ್ತಕಗಳನ್ನು ಜನಪ್ರಿಯಗೊಳಿಸುವ ಗುರಿ ಹೊಂದಿತ್ತು.

ಆರಂಭದಲ್ಲಿ ಶೇ. 7-8 ರಷ್ಟು ಆದಾಯ ಗಳಿಸುತ್ತಿದ್ದ ಜಗರ್ನಾಟ್, ಮೂರು ವರ್ಷಗಳ ನಂತರ ಹಿನ್ನಡೆ ಅನುಭವಿಸಿತು. ಪುಸ್ತಕ ಬಿಡುಗಡೆ ಮುಂದುವರಿಸಿ, ಡಿಜಿ ಟಲ್ ಪ್ಲಾಟ್ಫಾರ್ಮ್ ನ್ನು ಏಪ್ರಿಲ್ 2016 ರಲ್ಲಿ ಪ್ರಾರಂಭಿಸಲಾಯಿತು; ಕೋಡಿಂಗ್ ಮತ್ತು ಅಪ್ಗ್ರೇಡ್ ಪ್ರಕ್ರಿಯೆ ಸಮಸ್ಯೆಗಳನ್ನುಒಡ್ಡಿತು.

2020 ರಲ್ಲಿ ವಿಕಿಪೀಡಿಯಾ ಅಪ್ಲಿಕೇಶನ್ ಸ್ಥಗಿತಗೊಂಡಿದೆ. ವಾಸ್ತವವಾಗಿ 2018 ರಲ್ಲಿ ಆಫ್ಲೈನ್ ಆಗಿದೆ. ಪರಿಣಾಮವಾಗಿ, ಓದುಗರು ಡಿಜಿಟಲ್ ಲೈಬ್ರರಿಯನ್ನು ಬಳಸಲು ಆಗುತ್ತಿಲ್ಲ. ಆ್ಯಪ್ ಮೂಲಕ ಪುಸ್ತಕ ಖರೀದಿಸಿದವರಲ್ಲಿ ಹಿರಿಯ ಪತ್ರಕರ್ತೆ ಸುಗಂಧಿ ರವೀಂದ್ರನಾಥನ್ ಕೂಡ ಒಬ್ಬರು. 2018 ರ ಅಂತ್ಯದ ವೇಳೆಗೆ ಯಾವುದೇ ಖರೀದಿ ಇಲ್ಲವೇ ಓದು ಸಾಧ್ಯವಾಗುವುದಿಲ್ಲ ಎಂದು ಅವರು ಈಗ ಹೇಳುತ್ತಾರೆ.

ʻಶಿಯೋಮಿ ಎಂಐ ಪ್ಯಾಡ್ನಲ್ಲಿ ಜಗರ್ನಾಟ್ ಅಪ್ಲಿಕೇಶನ್ ಮೂಲಕ ಪುಸ್ತಕ ಓದುತ್ತಿದ್ದೆ. ಡಿಸೆಂಬರ್ 1, 2018 ರಿಂದ ಅಪ್ಲಿಕೇಶನ್ ತೆರೆಯಲು ಆಗುತ್ತಿಲ್ಲ. ನಾನು ಅವರಿಗೆ ಹಲವು ಇಮೇಲ್ ಕಳುಹಿಸಿದ್ದೇನೆ. ಆದರೆ, ಏನಾಗುತ್ತಿದೆ ಎಂದು ವಿವರಣೆ ನೀಡುವ ಬದಲು ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆʼ ಎಂದು ಅವರು ʻಫೆಡರಲ್ʼಗೆ ತಿಳಿಸಿದರು.

ಅವರು ಹಲವಾರು ಪುಸ್ತಕಗಳನ್ನು ಖರೀದಿಸಿ, ಕಿಂಡಲ್ ಟ್ಯಾಬ್ಲೆಟ್ ನಲ್ಲಿ ಓದುತ್ತಿದ್ದರು. ಆ್ಯಪ್ ತೆರೆಯಲು ಅಥವಾ ಅಪ್ಡೇಟ್ ಮಾಡಲು ಸಾಧ್ಯವಾಗದಿದ್ದಾಗ, ಅದನ್ನು ಅನ್ಇನ್ಸ್ಟಾಲ್ ಮಾಡಿದರು. ಆದರೆ, ಅದನ್ನು ಮರುಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಪತ್ರ ಬರೆದಾಗ, ಸ್ಪಷ್ಟವಾದ ಉತ್ತರ ನೀಡಲು ಅಥವಾ ಸಮಸ್ಯೆಯನ್ನು ಪರಿಹರಿಸಲು ವಿಫಲರಾದರು.

ಏಳು ತಿಂಗಳ ಹಿಂದೆ ಬಳಕೆದಾರರೊಬ್ಬರು, ವೆಬ್ಸೈಟ್ ನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದರು. ಹಲವಾರು ಬಳಕೆದಾರರು ತಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಅಪ್ಲಿಕೇಶನ್ ತೆರೆಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಫ್ರೀಮಿಯಮ್ ಮಾದರಿ

ಜಗರ್ ನಾಟ್ ಬುಕ್ಸ್ 50 ಸ್ವಂತ ಪುಸ್ತಕಗಳು ಹಾಗೂ ಡಕ್ಬಿಲ್ ಮತ್ತು ತುಲಿಕಾ ಬುಕ್ಸ್ನಂತಹ ಪ್ರಕಾಶಕರಿಂದ 50 ಸೇರಿದಂತೆ 100 ಶೀರ್ಷಿಕೆಗಳನ್ನು ಬಿಡುಗಡೆ ಮಾಡಿತು. ಹ್ಯಾಚೆಟ್ ಇಂಡಿಯಾದಿಂದ ವಿತರಣೆ ಮತ್ತು ಗೋದಾಮು ನಿರ್ವಹಣೆಯೊಂದಿಗೆ (ಈಗ ಹಾರ್ಪರ್ ಕಾಲಿನ್ಸ್ ಇಂಡಿಯಾ) ವರ್ಷಕ್ಕೆ 50 ಶೀರ್ಷಿಕೆಗಳನ್ನು ಪ್ರಕಟಿಸುವ ಆರಂಭಿಕ ಯೋಜನೆ ರೂಪಿಸಿದ್ದರು. ತಮ್ಮ ಅಪ್ಲಿಕೇಶನ್ನಲ್ಲಿ ಆರ್ಥರ್ ಕಾನನ್ ಡಾಯ್ಲ್ನಿಂದ ಮಾರ್ಕ್ ಟ್ವೈನ್ವರೆಗೆ ಶ್ರೇಷ್ಠ ಲೇಖಕರನ್ನು ಓದಬಹುದು ಎಂದು ಆಶ್ವಾಸನೆ ನೀಡಿದ್ದರು. ಹಣ ಪಾವತಿಗೆ ಪೇಟಿಎಂ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಬಹುದು. ಬಳಕೆದಾರರು ತಮ್ಮ ಖಾತೆಗಳಿಗೆ ಉಚಿತ ಪುಸ್ತಕಗಳನ್ನು ಕೂಡ ಸೇರಿಸಬಹುದಿತ್ತು.

ವರದಿ ಪ್ರಕಾರ, 2016 ರ ಅಂತ್ಯದ ವೇಳೆಗೆ ಅಪ್ಲಿಕೇಶನ್ 5,60,000 ಬಳಕೆದಾರರನ್ನು ಹೊಂದಿತ್ತು ಮತ್ತು 1,80,000 ಪುಸ್ತಕಗಳು ಡೌನ್ಲೋಡ್ ಆಗಿದ್ದವು. ಪ್ರಕಾಶನದ ಸ್ಟಾರ್ ಲೇಖಕರಲ್ಲಿ ವಿಲಿಯಂ ಡಾಲ್ರಿಂಪಲ್, ಸನ್ನಿ ಲಿಯೋನ್, ಪ್ರವೀಣ್ ಸ್ವಾಮಿ, ರಾಜದೀಪ್ ಸರ್ದೇಸಾಯಿ ಮತ್ತು ಕನ್ಹಯ್ಯಾ ಕುಮಾರ್ ಸೇರಿದ್ದಾರೆ. ಹೆಚ್ಚು ಮಾರಾಟವಾದ ಆರು ಪುಸ್ತಕಗಳಲ್ಲಿ ಟ್ವಿಂಕಲ್ ಖನ್ನಾ ಅವರ ಚೊಚ್ಚಲ ಕಾದಂಬರಿ, ʻಪೈಜಾಮಾಸ್ ಆರ್ ಫಾರ್ಗಿವಿಂಗ್ʼ ಕೂಡ ಸೇರಿದೆ.

ಗ್ರಾಹಕರು ಡಿಜಿಟಲ್ ಪ್ರತಿಗಳನ್ನು ಖರೀದಿಸುವುದನ್ನು ಪ್ರೋತ್ಸಾಹಿಸಲು ಕಂಪನಿ ಪ್ರೀಮಿಯಂ ಪ್ರಕಟಣೆಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಉಪಕ್ರಮವನ್ನು ಸಲಹಾ ಮಂಡಳಿಯ ಪ್ರಮುಖ ಸದಸ್ಯರಾದ ಎಬಿಪಿ ಗ್ರೂಪ್ನ ಅವಿಕ್ ಸರ್ಕಾರ್, ಪೇಟಿಎಂನ ವಿಜಯ್ ಶೇಖರ್ ಶರ್ಮಾ ಮತ್ತು ಹಿಂದುಸ್ತಾನ್ ಯುನಿಲಿವರ್ನ ಮಾಜಿ ಸಿಎಫ್ ಒ ಡಿ.ಸುಂದರಂ ಬೆಂಬಲಿಸಿದ್ದಾರೆ. ಕಂಪನಿಯು ಅಪ್ಲಿಕೇಶನ್ ಅನ್ನು ಜಗರ್ ನಾಟ್ ಇ-ಬುಕ್ ಎಂದು ಮರುಬ್ರಾಂಡ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ಇದು ಓದುಗರು ಮತ್ತು ಚಂದಾದಾರರಿಗೆ ಗೊತ್ತಾಗಿಲ್ಲ.

ಈ ಬಗ್ಗೆ ʼಫೆಡರಲ್ʼಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕಂಪನಿ; “ದೋಷಗಳ ನಿವಾರಣೆಗೆ ಅಪ್ಲಿಕೇಶನ್ ನ ಮರುಕೋಡಿಂಗ್ ಮತ್ತು ಅಪ್ಗ್ರೇಡ್ ಮಾಡಲಾಗುತ್ತಿದೆ. ಇದಕ್ಕೆ ಸಮಯ ಬೇಕಿದೆ” ಎಂದು ಸಮಜಾಯಿಷಿ ನೀಡಿದೆ.

ಒಟ್ಟಾರೆ, ಜಗರ್ನಾಟ್ ಪ್ರಕರಣವು ʻಮೊಬೈಲ್ ಫಸ್ಟ್ʼ ಪ್ರಕಾಶನದ ಸಾಧ್ಯತೆಗಳ ಬಗ್ಗೆ ಮತ್ತು ಸಾಂಪ್ರದಾಯಿಕ ಪ್ರಕಟಣೆ ವಿಧಾನಗಳನ್ನು ಮರುವಿನ್ಯಾಸಗೊಳಿಸುವ ಪ್ರಯತ್ನಗಳು ಎದುರಿಸುವ ಸವಾಲುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ.

Next Story