ಉದಯಪುರದ ಅರಮನೆಯಲ್ಲಿ ಹಸೆಮಣೆ ಏರಲಿದ್ದಾರೆಯೇ ಈ ಕ್ಯೂಟ್‌ ಕಪಲ್‌...
x

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಭಾರೀ ವೈರಲ್‌ ಆಗುತ್ತಿದೆ. 

ಉದಯಪುರದ ಅರಮನೆಯಲ್ಲಿ ಹಸೆಮಣೆ ಏರಲಿದ್ದಾರೆಯೇ ಈ ಕ್ಯೂಟ್‌ ಕಪಲ್‌...

ದಕ್ಷಿಣ ಭಾರತದ ಖ್ಯಾತ ಜೋಡಿ ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಫೆಬ್ರವರಿ 2 ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ ಎಂಬ ಸುದ್ದಿ ಹಬ್ಬಿತ್ತು.


Click the Play button to hear this message in audio format

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವಿಚಾರ ಈಗ ಇಡೀ ದೇಶಾದ್ಯಂತ ಸಂಚಲನ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋಗಳ ಪ್ರಕಾರ, ಇವರಿಬ್ಬರ ವಿವಾಹ ಮಹೋತ್ಸವ ಇಂದು ಅಂದರೆ ಫೆಬ್ರವರಿ 2 ರಂದು ರಾಜಸ್ಥಾನದ ಐತಿಹಾಸಿಕ ಉದಯಪುರದ ಸಿಟಿ ಪ್ಯಾಲೇಸ್‌ನಲ್ಲಿ ನಡೆಯಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಮತ್ತೊಂದು ಕಡೆಯಿಂದ ಕೇಳಿಬರುತ್ತಿರುವ ವರದಿಗಳ ಪ್ರಕಾರ ಮದುವೆಯು ಫೆಬ್ರವರಿ 26 ರಂದು ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಹೇಳಿಕೆ ಬಿಡುಗಡೆಯಾಗದ ಕಾರಣ ನಿಖರವಾದ ದಿನಾಂಕ ಇನ್ನೂ ದೃಢೀಕರಿಸಲಾಗಿಲ್ಲ.

ಅಭಿಮಾನಿಗಳು ಮದುವೆಯ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು ಕೇವಲ ಮದುವೆಯ ಸುದ್ದಿಗಷ್ಟೇ ಸೀಮಿತವಾಗದೆ, ಈ ಜೋಡಿಯ ಜೀವನಶೈಲಿ ಮತ್ತು ಆಸ್ತಿಯ ಬಗ್ಗೆಯೂ ಇಂಟರ್‌ನೆಟ್‌ನಲ್ಲಿ ಹುಡುಕಾಡುತ್ತಿದ್ದಾರೆ.

ರಶ್ಮಿಕಾ ಅವರ ನಿವ್ವಳ ಮೌಲ್ಯ ಎಷ್ಟು?

ಕೊಡಗಿನ ವಿರಾಜಪೇಟೆಯ ಹುಡುಗಿ ರಶ್ಮಿಕಾ ಮಂದಣ್ಣ ಇಂದು ಕೇವಲ ದಕ್ಷಿಣ ಭಾರತವಲ್ಲದೆ ಬಾಲಿವುಡ್‌ನಲ್ಲೂ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಫೋರ್ಬ್ಸ್ ವರದಿಗಳ ಪ್ರಕಾರ ರಶ್ಮಿಕಾ ಅವರ ನಿವ್ವಳ ಮೌಲ್ಯ ಸರಿಸುಮಾರು 66 ಕೋಟಿ ರೂಪಾಯಿಗಳಾಗಿದ್ದು, ಇವರು ಪ್ರತಿ ಸಿನಿಮಾಗೆ 4 ರಿಂದ 8 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಅಂತರಾಷ್ಟ್ರೀಯ ಆಭರಣ ಬ್ರ್ಯಾಂಡ್ ಸ್ವರೋವ್ಸ್ಕಿಯ ರಾಯಭಾರಿಯೂ ಆಗಿರುವ ರಶ್ಮಿಕಾ, ಆಸ್ತಿ ಮತ್ತು ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ವಿಜಯ್ ದೇವರಕೊಂಡ ಆದಾಯ ಎಷ್ಟು?

ಇತ್ತ ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಕೂಡ ಆಸ್ತಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಅವರ ಒಟ್ಟು ನಿವ್ವಳ ಮೌಲ್ಯ 50 ರಿಂದ 70 ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ವಿಜಯ್ ದೇವರಕೊಂಡ ಅವರು ರೇಂಜ್ ರೋವರ್, BMW 5 ಸರಣಿ ಮತ್ತು ಫೋರ್ಡ್ ಮಸ್ತಾಂಗ್‌ನಂತಹ ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ.

ವಿಜಯ್‌- ರಶ್ಮಿಕಾ ಮಂದಣ್ಣ ವಯಸ್ಸಿನ ಅಂತರ ಎಷ್ಟು?

ಈ ಜೋಡಿಯ ವಯಸ್ಸಿನ ಬಗ್ಗೆ ನೋಡುವುದಾದರೆ, 1996 ರಲ್ಲಿ ಜನಿಸಿದ ರಶ್ಮಿಕಾ ಹಾಗೂ 1989 ರಲ್ಲಿ ಜನಿಸಿದ ವಿಜಯ್ ನಡುವೆ ಸರಿಸುಮಾರು 7 ವರ್ಷಗಳ ಅಂತರವಿದೆ. ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳ ಮೂಲಕ ತೆರೆಯ ಮೇಲೆ ಅದ್ಭುತ ಕೆಮಿಸ್ಟ್ರಿ ಪ್ರದರ್ಶಿಸಿದ್ದ ಈ ಜೋಡಿ, ಈಗ ನಿಜ ಜೀವನದಲ್ಲೂ ಒಂದಾಗಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಕೇಳಿಬರುತ್ತಿದೆ.

ಸದ್ಯ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನ ಮೂರನೇ ಸಿನಿಮಾ 'ರಾಣಾ ಬಾಲಿ' ಸದ್ಯದಲ್ಲೇ ಸೆಟ್ಟೇರಲಿದೆ. ಇದರ ಜೊತೆಗೆ ವಿಜಯ್ 'ರೌಡಿ ಜನಾರ್ದನ' ಚಿತ್ರದಲ್ಲಿ ನಟಿಸುತ್ತಿದ್ದರೆ, ರಶ್ಮಿಕಾ ಮಂದಣ್ಣ ಅವರು 'ಕಾಕ್ಟೈಲ್ 2' ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ

Read More
Next Story