ಮೂರು ದಶಕದ ಬಳಿಕ ಶಿವಣ್ಣ-ಪ್ರೇಮಾ ‘ಓಂ’ ರೀ ಕ್ರಿಯೇಷನ್
x
‘ಓಂ’ ಚಿತ್ರವನ್ನು ರೀ ಕ್ರಿಯೇಟ್ ಮಾಡುತ್ತಿದ್ದಾರೆ.

ಮೂರು ದಶಕದ ಬಳಿಕ ಶಿವಣ್ಣ-ಪ್ರೇಮಾ ‘ಓಂ’ ರೀ ಕ್ರಿಯೇಷನ್

ʼಮಧುʼ ಬಳಿ ಬರುವ ʼಸತ್ಯʼ ಪ್ರೀತಿಸು ಎಂದು ಪೀಡಿಸುತ್ತಾನೆ. ಈ ದೃಶ್ಯವನ್ನು ರೀ ಕ್ರಿಯೇಟ್ ಮಾಡಲಾಗಿದೆ.


Click the Play button to hear this message in audio format

ನಟ ಶಿವರಾಜ್​ಕುಮಾರ್ ಹಾಗೂ ಪ್ರೇಮಾ ನಟನೆಯ ‘ಓಂ’ ಸಿನಿಮಾ ಬಿಡುಗಡೆಗೊಂಡು 30 ವರ್ಷ ಪೂರ್ಣಗೊಳ್ಳುತ್ತಿದೆ. 1995ರಲ್ಲಿ ಈ ಸಿನಿಮಾ ರಿಲೀಸ್‌ ಆಗಿತ್ತು.

ಈಗ ಜೀ ಕನ್ನಡ ವೇದಿಕೆ ಮೇಲೆ ಶಿವರಾಜ್​ಕುಮಾರ್ ಮತ್ತು ನಟಿ ಪ್ರೇಮಾ ಅವರು ‘ಓಂ’ ಚಿತ್ರವನ್ನು ರೀ ಕ್ರಿಯೇಟ್ ಮಾಡುತ್ತಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ.

‘ಒಂ’ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರು. 1995ರ ಮೇ 19ರಂದು ಈ ಚಿತ್ರ ರೀಲೀಸ್ ಆಯಿತು. ಈ ಸಿನಿಮಾ ಈವರೆಗೆ 550ಕ್ಕೂ ಅಧಿಕ ಬಾರಿ ರೀ-ರಿಲೀಸ್ ಆಗಿದೆ. ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರು ಸತ್ಯ ಹೆಸರಿನ ಪಾತ್ರ ಮಾಡಿದರೆ, ಪ್ರೇಮಾ ಅವರು ಮಧು ಹೆಸರಿನ ಪಾತ್ರ ಮಾಡಿದ್ದರು.

ʼಮಧುʼ ಬಳಿ ಬರುವ ʼಸತ್ಯʼ ಪ್ರೀತಿಸು ಎಂದು ಪೀಡಿಸುತ್ತಾನೆ. ಈ ದೃಶ್ಯವನ್ನು ರೀ ಕ್ರಿಯೇಟ್ ಮಾಡಲಾಗಿದೆ. ‘ದಂತದ ಗೊಂಬೆ ತರ ಕಾಣ್ತಾ ಇದೀಯಾ, ಐ ಲವ್​ ಯೂ ಮಧು’ ಎಂದು ಶಿವಣ್ಣ ಹೇಳಿದ್ದಾರೆ. ‘ನನಗೆ ನೀನು ಇಷ್ಟ ಇಲ್ಲ ಅಂದ್ರೂ ಯಾಕೆ ನನ್ನ ಪೀಡಿಸ್ತೀಯಾ’ ಎಂದು ಪ್ರೇಮಾ ಕೇಳಿದ್ದಾರೆ. ಇಬ್ಬರ ಎನರ್ಜಿ ಅದೇ ರೀತಿ ಇದೆ. ಡೈಲಾಗ್​ ಡೆಲಿವರಿ ಆಗ ಹೇಗಿತ್ತೋ ಹಾಗೆಯೇ ಇತ್ತು.

Read More
Next Story