ಫೆಬ್ರವರಿ 2ಕ್ಕೆ ಉದಯಪುರ ಸಿಟಿ ಪ್ಯಾಲೇಸ್‌ನಲ್ಲಿ ರಶ್ಮಿಕಾ-ವಿಜಯ್ ಮದುವೆ?
x

ನಾಳೆಯೇ ವಿಜಯದೇವರಕೊಂಡ ರಶ್ಮಿಕಾ ಮಂದಣ್ಣ ಮದುವೆ

ಫೆಬ್ರವರಿ 2ಕ್ಕೆ ಉದಯಪುರ ಸಿಟಿ ಪ್ಯಾಲೇಸ್‌ನಲ್ಲಿ ರಶ್ಮಿಕಾ-ವಿಜಯ್ ಮದುವೆ?

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 2 ರಂದು ವಿವಾಹವಾಗಲಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.


Click the Play button to hear this message in audio format

ಟಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 2 ರಂದು ವಿವಾಹವಾಗಲಿದ್ದಾರೆ ಎಂದು ಹೇಳಿಕೊಳ್ಳುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅವರ ವಿವಾಹ ಮಹೋತ್ಸವಕ್ಕೆ ರಾಜಸ್ಥಾನದ ಉದಯಪುರ ಸಜ್ಜಾಗುತ್ತಿದೆ ಎನ್ನುವುದಕ್ಕೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಪ್ಯಾಲೇಸ್‌ನಲ್ಲಿ ಭರ್ಜರಿ ತಯಾರಿ

ಉದಯಪುರದಲ್ಲಿ ಪ್ರವಾಸದಲ್ಲಿರುವ ಕಂಟೆಂಟ್ ಕ್ರಿಯೇಟರ್ ತನ್ಯಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಭಾರೀ ವೈರಲ್‌ ಆಗಿದೆ. ಉದಯಪುರದ ಐತಿಹಾಸಿಕ 'ಸಿಟಿ ಪ್ಯಾಲೇಸ್'ನಲ್ಲಿ ಅದ್ಧೂರಿ ಅಲಂಕಾರಗಳು ನಡೆಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಇಲ್ಲಿ ಯಾರೋ ದೊಡ್ಡ ವ್ಯಕ್ತಿಗಳ ಮದುವೆ ನಡೆಯುತ್ತಿದೆ, ಅವರು ಬೇರೆ ಯಾರೂ ಅಲ್ಲ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಫೆಬ್ರವರಿ 2ರಂದು ಇವರ ಮದುವೆ ನಡೆಯಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಪ್ಯಾಲೇಸ್ ಆವರಣದಲ್ಲಿ ಹೂವಿನ ಅಲಂಕಾರ ಹಾಗೂ ವೇದಿಕೆ ಸಿದ್ಧತೆಗಳು ನಡೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.ವೈರಲ್‌ ಆಗಿರುವ ವಿಡಿಯೋ

ಈ ಜೋಡಿಯು 2025ರ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ವರದಿಗಳಿದ್ದವು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ರಶ್ಮಿಕಾ, ಕಳೆದ ನಾಲ್ಕು ವರ್ಷಗಳಿಂದ ಈ ಸುದ್ದಿಗಳು ಕೇಳಿಬರುತ್ತಲೇ ಇವೆ. ಸಮಯ ಬಂದಾಗ ನಾನೇ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಆಪ್ತ ಮೂಲಗಳ ಪ್ರಕಾರ ಫೆಬ್ರವರಿ ತಿಂಗಳಲ್ಲೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸದ್ಯ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನ ಮೂರನೇ ಸಿನಿಮಾ 'ರಾಣಾ ಬಾಲಿ' ಸದ್ಯದಲ್ಲೇ ಸೆಟ್ಟೇರಲಿದೆ. ಇದರ ಜೊತೆಗೆ ವಿಜಯ್ 'ರೌಡಿ ಜನಾರ್ದನ' ಚಿತ್ರದಲ್ಲಿ ನಟಿಸುತ್ತಿದ್ದರೆ, ರಶ್ಮಿಕಾ ಮಂದಣ್ಣ ಅವರು 'ಕಾಕ್ಟೈಲ್ 2' ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

Read More
Next Story