
ಈಗ ನಾವು ಮೂವರಾದೆವು ಎಂದು ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
Rashmika Mandanna| ಈಗ ನಾವು ಮೂವರಾದೆವು: ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಈಗ ನಾವು ಮೂವರಾದೆವು ಎಂದು ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ. ರಾಷ್ಟ್ರೀಯ ಕ್ರಶ್ ಮನೆಯಲ್ಲಿನ ಹೊಸ ಅತಿಥಿ ಯಾರು? ಆರಾ ಜೊತೆ ಸೇರಿದ ಹೊಸ ಸದಸ್ಯ ಕೃತಿ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.
ಟಾಲಿವುಡ್ನ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಭ್ರಮ ಇನ್ನೂ ಮಾಸಿಲ್ಲ. ಮದುವೆಯ ನಂತರ ಈ ಜೋಡಿ ಗೆಳೆಯರೊಂದಿಗೆ 'ಬಡ್ಡೀಮೂನ್' ಎಂಜಾಯ್ ಮಾಡಿ ಸದಾ ಸುದ್ದಿಯಲ್ಲಿದ್ದಾರೆ. ಆದರೆ, ಈಗ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಅಭಿಮಾನಿಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ರಶ್ಮಿಕಾ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಪುಟ್ಟ ಅನಿಮೇಷನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ "ಈಗ ನಾವು ಮೂವರಾಗಿದ್ದೇವೆ" ಎಂಬ ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋದಲ್ಲಿ ವಿಜಯ್ ಮತ್ತು ರಶ್ಮಿಕಾ ಜೊತೆಗೆ ಒಂದು ಪುಟ್ಟ ಸೂರ್ಯಕಾಂತಿ ಹೂವು ಕುಣಿಯುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ರಶ್ಮಿಕಾ ಧರಿಸಿರುವ ಟೀ ಶರ್ಟ್ ಮೇಲೆ ಮೊಟ್ಟೆಯ ಚಿತ್ರ ಕೂಡ ಇದೆ.
ಇದನ್ನು ನೋಡಿ ರಶ್ಮಿಕಾ ತಾಯಿಯಾಗುತ್ತಿದ್ದಾರಾ? ಮದುವೆಯಾದ ಒಂದು ತಿಂಗಳಲ್ಲೇ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಶುಭ ಕೋರಲು ಶುರು ಮಾಡಿದ್ದಾರೆ.
ಆದರೆ ಅಸಲಿ ವಿಷಯವೇನೆಂದರೆ, ರಶ್ಮಿಕಾ ಆ ಸೂರ್ಯಕಾಂತಿ ಹೂವನ್ನು ತನ್ನ ಆಪ್ತ ಗೆಳೆಯ ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ ಇನ್ಸ್ಟಾಗ್ರಾಮ್ನಲ್ಲಿ 'Rashmikaru' ಹೆಸರಿನಲ್ಲಿ ವಿಶೇಷ ಖಾತೆಯನ್ನು ಕೂಡ ತೆರೆದಿದ್ದಾರೆ. ಅದರಲ್ಲಿ ಆ ಹೂವಿನೊಂದಿಗೆ ನಡೆಸುವ ಸಂಭಾಷಣೆಗಳನ್ನು ಅನಿಮೇಟೆಡ್ ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಈಗ ಈ ಅನಿಮೇಷನ್ ಪ್ರಪಂಚಕ್ಕೆ ವಿಜಯ್ ಅವರನ್ನೂ ಸ್ವಾಗತಿಸುತ್ತಾ ಈ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದೆ.
ಕಳೆದ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ವಿವಾಹವಾಗಿದ್ದರು. ಅಂದಿನಿಂದ ಈ ಜೋಡಿಯ ಪ್ರತಿ ನಡೆಯೂ ಸದಾ ಸುದ್ದಿಯಲ್ಲಿರುತ್ತದೆ. ಈಗ 'ರಶ್ಮಿಕಾ ಮತ್ತು ರೂ' ಐಪಿಯ ಭಾಗವಾಗಿ ವಿಜಯ್ ಕಾಣಿಸಿಕೊಳ್ಳುತ್ತಿರುವುದು, ಈ ಅನಿಮೇಟೆಡ್ ಸರಣಿಗೆ ಮತ್ತಷ್ಟು ಸ್ಟಾರ್ ಪವರ್ ಹಾಗೂ ಭಾವನಾತ್ಮಕ ಮೆರುಗು ನೀಡಿದೆ.

