ಸೌತ್‌ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ ಬಾಲಿವುಡ್‌ ಸುಂದರಿ: ಫಸ್ಟ್‌ ಲುಕ್‌ ಬಿಡುಗಡೆ
x

ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಅವರ ಪುತ್ರಿ ರಾಶಾ ತಂದಾನಿ, ಅಜಯ್ ಭೂಪತಿ ನಿರ್ದೇಶನದ ‘ಶ್ರೀನಿವಾಸ ಮಂಗಪುರಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸೌತ್‌ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ ಬಾಲಿವುಡ್‌ ಸುಂದರಿ: ಫಸ್ಟ್‌ ಲುಕ್‌ ಬಿಡುಗಡೆ

ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ರಾಶಾ ಅವರು ಮಾಂಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಸಾಂಪ್ರದಾಯಿಕ ಮತ್ತು ಸ್ಟೈಲಿಶ್ ಹೀಗೆ ಎರಡು ವಿಭಿನ್ನ ಅವತಾರಗಳಲ್ಲಿ ನಟಿಸುತ್ತಿದ್ದಾರೆ.


Click the Play button to hear this message in audio format

ಬಾಲಿವುಡ್ ತಾರೆ ರವೀನಾ ಟಂಡನ್ ಅವರ ಪುತ್ರಿ, ಯುವ ನಟಿ ರಾಶಾ ತಂಡಾನಿ ಈಗ ತಮ್ಮ ಮೊದಲ ದಕ್ಷಿಣ ಭಾರತದ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಸೋದರಳಿಯ ಜಯಕೃಷ್ಣ ಘಟ್ಟಮನೇನಿ ನಾಯಕರಾಗಿ ನಟಿಸುತ್ತಿರುವ ʻಶ್ರೀನಿವಾಸ ಮಂಗಪುರಂ' ಎಂಬ ಸಿನಿಮಾದ ಮೂಲಕ ರಾಶಾ ತೆಲುಗು ತೆರೆಗೆ ಬರಲಿದ್ದಾರೆ. ಅಜಯ್ ಭೂಪತಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರತಂಡವು ಈಗ ಹೊಸ ಪೋಸ್ಟರ್ ಮೂಲಕ ರಾಶಾ ಅವರ ಪಾತ್ರದ ವಿವರಗಳನ್ನು ಬಹಿರಂಗಪಡಿಸಿದೆ.

ಸಿನಿಮಾತಂಡ ಇತ್ತೀಚೆಗೆ ಬಿಡುಗಡೆ ಮಾಡಿದ ಪೋಸ್ಟ್‌ರ್‌ನಲ್ಲಿ ರಾಶಾ ತಂದಾನಿ ಅವರನ್ನು 'ಮಂಗಾ' ಎಂಬ ಪಾತ್ರದ ಮೂಲಕ ಪರಿಚಯಿಸಿದೆ. ಈ ಪೋಸ್ಟರ್‌ನಲ್ಲಿ ರಾಶಾ ನೇರಳೆ ಬಣ್ಣದ ಕುರ್ತಿ ಧರಿಸಿ, ಹಸಿರು ಮತ್ತು ಹೂವುಗಳ ಮಧ್ಯೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಹಂಚಿಕೊಂಡಿರುವ ತಂಡವು "ಒಂದು ಸುಂದರ ಆರಂಭವನ್ನು ಗುರುತಿಸುತ್ತಿದ್ದೇವೆ. ಶ್ರೀನಿವಾಸ ಮಂಗಪುರಂ ಚಿತ್ರದ ಮೂಲಕ ರಾಶಾ ತಂದಾನಿ ಅವರನ್ನು 'ಮಾಂಗಾ' ಪಾತ್ರದಲ್ಲಿ ತೆಲುಗು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ. ಶೀಘ್ರದಲ್ಲೇ ಬೆಳ್ಳಿತೆರೆಯ ಮೇಲೆ ಅವರ ಅದ್ಭುತ ನಟನೆಯನ್ನು ನೋಡಲು ಸಿದ್ಧರಾಗಿ" ಎಂದು ಬರೆದುಕೊಂಡಿದೆ.

ಮತ್ತೊಂದು ಪೋಸ್ಟರ್‌ನಲ್ಲಿ ರಾಶಾ ಸಂಪೂರ್ಣವಾಗಿ ಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿ ಬೈಕ್ ಮೇಲೆ ಕುಳಿತಿರುವ ಅವರ ಈ ಸ್ಟೈಲಿಶ್ ನೋಟವು, ಚಿತ್ರದಲ್ಲಿ ಅವರ ಪಾತ್ರವು ಕೇವಲ ಮೃದು ಸ್ವಭಾವದ್ದಲ್ಲದೆ ವಿವಿಧ ಆಯಾಮಗಳನ್ನು ಹೊಂದಿದೆ ಎಂಬ ಸುಳಿವು ನೀಡುತ್ತಿದೆ.

'ಶ್ರೀನಿವಾಸ ಮಂಗಪುರಂ' ಚಿತ್ರವು ಮಹೇಶ್ ಬಾಬು ಅವರ ಸೋದರಳಿಯ ಜಯಕೃಷ್ಣ ಘಟ್ಟಮನೇನಿ ಅವರಿಗೂ ಚೊಚ್ಚಲ ಚಿತ್ರವಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಅವರ ಫಸ್ಟ್‌ಲುಕ್‌ನಲ್ಲಿ ಜಯಕೃಷ್ಣ ರೊಮ್ಯಾಂಟಿಕ್‌ ಲುಕ್‌ನಲ್ಲಿ ಬೈಕ್‌ ಓಡಿಸುವ ಪೋಸ್ಟ್‌ ಹಂಚಿಕೊಂಡಿದ್ದರು. ಇದು ಚಿತ್ರವು ಭಾವನಾತ್ಮಕ ಪ್ರೇಮಕಥೆಯಾಗಿರಲಿದೆ ಎಂದು ಸೂಚಿಸಿತ್ತು. 'ಆರ್‌ಎಕ್ಸ್‌ 100' ಮತ್ತು 'ಮಂಗಳವಾರಂ' ನಂತಹ ಪ್ರಭಾವಶಾಲಿ ಚಿತ್ರಗಳನ್ನು ನೀಡಿದ ಅಜಯ್ ಭೂಪತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಈ ಸಿನಿಮಾಕ್ಕಿದೆ.

ತಮ್ಮ ತೆಲುಗು ಪದಾರ್ಪಣೆಗೂ ಮುನ್ನ ರಾಶಾ ತಂಡಾನಿ 2025ರ ಹಿಂದಿ ಚಿತ್ರ 'ಆಜಾದ್' ಮೂಲಕ ನಟನೆಗೆ ಕಾಲಿಟ್ಟಿದ್ದರು. ಅಜಯ್ ದೇವಗನ್ ನಟಿಸಿದ್ದ ಆ ಚಿತ್ರದಲ್ಲಿ ಅಮನ್ ದೇವಗನ್ ಕೂಡ ನಟಿಸಿದ್ದರು. ಈಗ 'ಶ್ರೀನಿವಾಸ ಮಂಗಪುರಂ' ಮೂಲಕ ರಾಶಾ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read More
Next Story