
ಮಾರ್ಚ್ 27 ರಂದು ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅವರ ಪಾತ್ರಗಳ ಲುಕ್ ಅನಾವರಣಗೊಳ್ಳಲಿದೆ.
ರಾಮ ನವಮಿಯಂದು 'ರಾಮಾಯಣ' ಪಾತ್ರಧಾರಿಗಳ ಫಸ್ಟ್ಲುಕ್ ಬಿಡುಗಡೆ
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಫಸ್ಟ್ ಲುಕ್ ಮಾರ್ಚ್ 27 ರಂದು ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅವರ ಪಾತ್ರಗಳ ಲುಕ್ ಅನಾವರಣಗೊಳ್ಳಲಿದೆ
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದೃಶ್ಯ ವೈಭವ ಎಂದು ಬಿಂಬಿತವಾಗಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದ ಅಧಿಕೃತ ಫಸ್ಟ್ ಲುಕ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಮಾರ್ಚ್ 27 ರಂದು ರಾಮ ನವಮಿಯಂದು ಮುಂಬೈಯ ಐತಿಹಾಸಿಕ ಗೇಟ್ವೇ ಆಫ್ ಇಂಡಿಯಾದಲ್ಲಿ ಅದ್ದೂರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ಅಲ್ಲಿ ಈ ಸಿನಿಮಾದ ಪಾತ್ರಗಳು ಅನಾವರಣಗೊಳ್ಳಲಿದೆ ಎಂದು ತಿಳಿದುಬಂದಿದೆ.
ಈ ಸಿನಿಮಾಮದ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಈಗಾಗಲೇ ಈ ಸಮಾರಂಭಕ್ಕಾಗಿ ದೇಶದ ಪ್ರಮುಖ ಗಣ್ಯರಿಗೆ ಆಹ್ವಾನ ಕಳುಹಿಸಲು ಆರಂಭಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಭಾವಿ ನಾಯಕರು, ಕ್ರೀಡಾ ತಾರೆಗಳು ಹಾಗೂ ಬಾಲಿವುಡ್ ದಿಗ್ಗಜರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ವಿಶೇಷವೆಂದರೆ, ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ ತಮ್ಮ ಕುಟುಂಬದ ಆಪ್ತರು ಹಾಗೂ ಚಿತ್ರರಂಗದ ಸ್ನೇಹಿತರಿಗೆ ಸ್ವತಃ ಆಹ್ವಾನ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಹನುಮಂತನ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಮಿಂಚಲಿದ್ದು, ರವಿ ದುಬೆ ಲಕ್ಷ್ಮಣನಾಗಿ ತೆರೆಯ ಮೇಲೆ ಬರಲಿದ್ದಾರೆ.
ಹಾಲಿಯವುಡ್ ಗುಣಮಟ್ಟದ ತಾಂತ್ರಿಕತೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು ಈ ವರ್ಷದ ದೀಪಾವಳಿಗೆ ಹಾಗೂ ಎರಡನೇ ಭಾಗವು 2027 ರ ದೀಪಾವಳಿಗೆ ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ವರದಿಯಾಗಿದೆ. ಸದ್ಯ ಮುಂಬೈನಲ್ಲಿ ಬೃಹತ್ ಸೆಟ್ಗಳಲ್ಲಿ ಚಿತ್ರೀಕರಣ ಪ್ರಗತಿಯಲ್ಲಿದ್ದು, ರಾಮ ನವಮಿಯಂದು ಸಿಗಲಿರುವ ಮೊದಲ ಅಧಿಕೃತ ಅಪ್ಡೇಟ್ಗಾಗಿ ಸಿನಿ ರಸಿಕರು ಕಾತರದಿಂದ ಕಾಯುತ್ತಿದ್ದಾರೆ.

