ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಎರಡನೇ ಬಾರಿ ಅಧ್ಯಕ್ಷ ಗದ್ದುಗೆಗೇರಿದ ಜಯಮಾಲಾ
x

ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಎರಡನೇ ಬಾರಿ ಅಧ್ಯಕ್ಷ ಗದ್ದುಗೆಗೇರಿದ ಜಯಮಾಲಾ

ಅಧ್ಯಕ್ಷ ಸ್ಥಾನಕ್ಕೆ ಒಟ್ಟು 846 ಮತಗಳು ಚಲಾವಣೆ ಆಗಿದ್ದು, ಇದರಲ್ಲಿ ಜಯಮಾಲ 512 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಭಾಮಾ ಹರೀಶ್ 334 ಮತಗಳನ್ನು ಪಡೆದುಕೊಂಡಿದ್ದಾರೆ.


Click the Play button to hear this message in audio format

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2025-26ನೇ ಸಾಲಿನ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಹಿರಿಯ ನಟಿ, ನಿರ್ಮಾಪಕಿ ಡಾ. ಜಯಮಾಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಯಮಾಲಾ ಒಟ್ಟು 512 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಬಾ.ಮಾ. ಹರೀಶ್ ಅವರನ್ನು ಸೋಲಿಸಿ ಅಧ್ಯಕ್ಷ ಗಾದಿಗೇರಿದ್ದಾರೆ. ಈ ಮೂಲಕ ಅವರು ಎರಡನೇ ಬಾರಿಗೆ ವಾಣಿಜ್ಯ ಮಂಡಳಿಯ ಸಾರಥ್ಯ ವಹಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಒಟ್ಟು 846 ಮತಗಳು ಚಲಾವಣೆ ಆಗಿದ್ದು, ಇದರಲ್ಲಿ ಜಯಮಾಲ 512 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಭಾಮಾ ಹರೀಶ್ 334 ಮತಗಳನ್ನು ಪಡೆದುಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಭಾಮಾ ಹರೀಶ್ ಮತ್ತು ಜಯಮಾಲಾ ನಡುವೆ ಭಾರೀ ಪೈಪೋಟಿ ಉಂಟಾಗಿದ್ದು, ಜಯಮಾಲಾ ಎರಡನೇ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿದ್ದಾರೆ. 2008ರಲ್ಲಿ ಹಿರಿಯ ನಟಿ ಜಯಮಾಲ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ ಉಪಾಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ, ಗೌರವ ಕಾರ್ಯದರ್ಶಿ ಮತ್ತು ಸ್ಥಾನಗಳಿಗೂ ಚುನಾವಣೆ ನಡೆಯಿತು. ಕಚೇರಿಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆಯಿತು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಪರ್ಧಿಗಳ ನಡುವೆ ವಾಗ್ವಾದ ನಡೆಯಿತು.

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಸುಂದರ್ ರಾಜನ್ ಎಂ. ಕೆ. ವಿತರಕರ ವಲಯದಿಂದ ಕೆ. ಮಂಜು ಮತ್ತು ಪ್ರದರ್ಶಕರ ವಲಯದಿಂದ ಕಿಶೋರ್ ಕುಮಾರ್ ಎಂ. ಎನ್. ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿಗಳಾಗಿ ನಿರ್ಮಾಪಕ ಗಣೇಶ್ ಎ., ವಿರತಕ ರಮೇಶ್ ಬಾಬು ಎಂ. ಆರ್. ಮತ್ತು ಪ್ರದರ್ಶಕ ವಲಯದಿಂದ ಅಶೋಕ್ ಕೆ. ಸಿ. ಜಯಭೇರಿ ಬಾರಿಸಿದ್ದಾರೆ. ಗೌರವ ಖಜಾಂಚಿಯಾಗಿ ಜಯಸಿಂಹ ಮುಸೂರಿ ಬಿ. ಕೆ. ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಮೋಹನ್ ಕುಮಾರ್ ಎಸ್. ಕೆ., ಅವಿನಾಶ್ ಯು. ಶೆಟ್ಟಿ, ಕೇಶವ್ ಎ., ವೆಂಕಟೇಶ್ ಕೆ. ವಿ., ಮತ್ತು ಹಿರಿಯ ನಟ ಜೋ ಸೈಮನ್ ಸೇರಿದಂತೆ 12 ಮಂದಿ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಭಾಷಾ ನಿರ್ಮಾಪಕರ ಪರವಾಗಿ ರಾಜೇಶ್ ಬ್ರಹ್ಮಾವರ್ ಹಾಗೂ ರೆಕಾರ್ಡಿಂಗ್ ಸ್ಟುಡಿಯೋ ವಿಭಾಗದಿಂದ ಸುಬ್ರಮಣಿ ವಿ. ಜಯಶೀಲರಾಗಿದ್ದಾರೆ.

ಕೆಲವು ಸ್ಥಾನಗಳಿಗೆ ಯಾವುದೇ ಪೈಪೋಟಿ ಇಲ್ಲದೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಟುಡಿಯೋ ಮತ್ತು ಲ್ಯಾಬ್ ವಿಭಾಗದಿಂದ ರಾಮಸ್ವಾಮಿ ಗೌಡ, ಬೆಂಗಳೂರು ನಗರ ಪ್ರದರ್ಶಕರ ವಲಯದಿಂದ ಕುಶಾಲ್ ಎಲ್. ಸಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More
Next Story