Hema report fallout| ಮಲಯಾಳಂ ಹೊಸ ಚಲನಚಿತ್ರ ಸಂಘ ಆರಂಭ
x
ರಿಮಾ ಕಲ್ಲಿಂಗಲ್, ನಿರ್ದೇಶಕ ಆಶಿಕ್ ಅಬು ಮತ್ತು ಅಂಜಲಿ ಮೆನನ್ ಸಂಘದ ನೇತೃತ್ವ ವಹಿಸಿದ್ದಾರೆ.

Hema report fallout| ಮಲಯಾಳಂ ಹೊಸ ಚಲನಚಿತ್ರ ಸಂಘ ಆರಂಭ

ಪ್ರೋಗ್ರೆಸ್ಸಿವ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್ ಎಂಬ ಹೆಸರಿನ ಸಂಘವು ಬದಲಾವಣೆ, ಒಳಗೊಳ್ಳುವಿಕೆಯನ್ನು ಗುರಿಯಾಗಿಟ್ಟುಕೊಂಡಿದೆ. ಮಲಯಾಳಂ ಚಲನಚಿತ್ರೋದ್ಯಮದ ಆಧುನೀಕರಣ ಮತ್ತು ಸುಧಾರಣೆಗೆ ಗಮನ ನೀಡಲಿದೆ.


ಮಲಯಾಳಂ ಚಿತ್ರರಂಗದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಮುಖ ಚಲನಚಿತ್ರ ನಿರ್ಮಾಪಕರು, ನಟರು ಮತ್ತು ತಂತ್ರಜ್ಞರ ಗುಂಪು ಹೊಸ ಸಂಘವನ್ನು ಸ್ಥಾಪಿಸಲು ಮುಂದಾಗಿದೆ.

ʻಪ್ರೋಗ್ರೆಸ್ಸಿವ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್ʼ ನ್ಯಾಯಸಮ್ಮತ ಮತ್ತು ಸಮಾನ ಕೆಲಸದ ಸ್ಥಳ-ವೇತನ, ಉದ್ಯೋಗಿಗಳ ಸಬಲೀಕರಣ, ಕಾರ್ಮಿಕರ ಹಕ್ಕುಗಳನ್ನು ಒತ್ತಾಯಿಸಲಿದೆ. ಮಲಯಾಳಂ ಚಲನಚಿತ್ರೋದ್ಯಮದ ಆಧುನೀಕರಣ ಮತ್ತು ಸುಧಾರಣೆಗೆ ಸಂಘ ಗಮನಹರಿಸುತ್ತದೆ.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಎಎಂಎಂಎ), ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಇಎಫ್‌ಕೆಎ), ವಿತರಕರ ಸಂಘ ಮತ್ತು ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ ಮತ್ತಿತರ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಲಿದೆ.

ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ನಟಿ ರಿಮಾ ಕಲ್ಲಿಂಗಲ್, ನಿರ್ದೇಶಕರಾದ ಅಂಜಲಿ ಮೆನನ್ ಮತ್ತು ಆಶಿಕ್ ಅಬು ಅವರೊಟ್ಟಿಗೆ ಪ್ರಶಸ್ತಿ ವಿಜೇತ 'ಜಲ್ಲಿಕಟ್ಟು' ನಿರ್ದೇಶಕ ಲಿಜೋ ಪೆಲ್ಲಿಸ್ಸೆರಿ, ಸಿನೆಟೋಗ್ರಾಫರ್ ರಾಜೀವ್ ರವಿ ಮತ್ತು ನಿರ್ಮಾಪಕ ಬಿನೀಷ್ ಚಂದ್ರನ್ ಇದ್ದಾರೆ.

ನಟಿ ರಿಮಾ ಕಲ್ಲಿಂಗಲ್ ಹಂಚಿಕೊಂಡ ಮುನ್ನೋಟ ಹೇಳಿಕೆ ಪ್ರಕಾರ, ಮಲಯಾಳಂ ಚಲನಚಿತ್ರೋದ್ಯಮದ ಕಾರ್ಯಶೈಲಿಯ ಕೂಲಂಕಷ ಪರಿಶೀಲನೆ ಅಗತ್ಯವಿದೆ. ಸಂಘ ನೈತಿಕ ಜವಾಬ್ದಾರಿ ತೆಗೆದುಕೊಳ್ಳುತ್ತದೆ, ಆಧುನೀಕರಣ, ಉದ್ಯೋಗಿಗಳ ಸಬಲೀಕರಣವಲ್ಲದೆ, ನ್ಯಾಯಯುತ ಮತ್ತು ಸಮಾನ ಕೆಲಸದ ಸ್ಥಳಗಳನ್ನು ಉತ್ತೇಜಿಸಲಿದೆ.

ಮಲಯಾಳಂ ಚಲನಚಿತ್ರೋದ್ಯಮಕ್ಕೆ ಆಧುನಿಕ ವ್ಯವಸ್ಥೆ, ಕಾನೂನು ಚೌಕಟ್ಟು ಮತ್ತು ಸಾಮುದಾಯಿಕ ಜವಾಬ್ದಾರಿಯ ಪ್ರಜ್ಞೆ ಅಗತ್ಯವಿದೆ. ನಾವು ಉದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ಕಾರ್ಮಿಕರ ಹಕ್ಕುಗಳ ರಕ್ಷಣೆ, ಲಿಂಗ ಸಮಾನತೆ, ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ಸಮಸ್ಯೆಗಳನ್ನು ಪರಿಹರಿಸಲು ಸಂಘ ಯೋಜಿಸಿದೆ. ಹೊಸ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಗುರಿ ಇರಿಸಿಕೊಂಡಿದೆ.

ಸಂಘ ಈಗಾಗಲೇ ಹಲವು ನಿರ್ಮಾಪಕರು ಮತ್ತು ನಟರು ಬೆಂಬಲ ವ್ಯಕ್ತಪಡಿಸಿದ್ದಾರೆ.

Read More
Next Story