ರಶ್ಮಿಕಾ– ವಿಜಯ್ ದೇವರಕೊಂಡ ಮದುವೆ; ಸಪ್ತಪದಿ ತುಳಿಯಲಿರುವ ಜೋಡಿಗೆ ಹೈ ಸೆಕ್ಯೂರಿಟಿ
x

ತಮ್ಮ ಮದುವೆಯ ಪ್ರತಿ ಕ್ಷಣವೂ ಅತ್ಯಂತ ಖಾಸಗಿಯಾಗಿರಲಿ ಎಂದು ಬಯಸಿರುವ ರಶ್ಮಿಕಾ ಮತ್ತು ವಿಜಯ್, ಈ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. 

ರಶ್ಮಿಕಾ– ವಿಜಯ್ ದೇವರಕೊಂಡ ಮದುವೆ; ಸಪ್ತಪದಿ ತುಳಿಯಲಿರುವ ಜೋಡಿಗೆ ಹೈ ಸೆಕ್ಯೂರಿಟಿ

ತಮ್ಮ ಮದುವೆಯ ಪ್ರತಿ ಕ್ಷಣವೂ ಅತ್ಯಂತ ಖಾಸಗಿಯಾಗಿರಲಿ ಎಂದು ಬಯಸಿರುವ ರಶ್ಮಿಕಾ ಮತ್ತು ವಿಜಯ್, ಈ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.


Click the Play button to hear this message in audio format

‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅವರ ಮದುವೆಯ ಕುರಿತಾದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದ್ದು, ಫೆಬ್ರವರಿ 26 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಪಕ್ಕಾ ಆಗಿದೆ. ಹಲವು ವರದಿಗಳ ಪ್ರಕಾರ, ರಾಜಸ್ಥಾನದ ಐತಿಹಾಸಿಕ ನಗರಿ ಉದಯಪುರದಲ್ಲಿ ಈ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದ್ದು, ಮದುವೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಅಂತಾರಾಷ್ಟ್ರೀಯ ಭದ್ರತಾ ಏಜೆನ್ಸಿಯನ್ನು ನೇಮಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಅಂತಾರಾಷ್ಟ್ರೀಯ ಭದ್ರತಾ ಏಜೆನ್ಸಿಯ ಕಣ್ಗಾವಲು

ತಮ್ಮ ಮದುವೆಯ ಪ್ರತಿ ಕ್ಷಣವೂ ಅತ್ಯಂತ ಖಾಸಗಿಯಾಗಿರಲಿ ಎಂದು ಬಯಸಿರುವ ರಶ್ಮಿಕಾ ಮತ್ತು ವಿಜಯ್, ಈ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಉದಯಪುರದ ವಿಸ್ತಾರವಾದ ವಿವಾಹದ ಸ್ಥಳದಲ್ಲಿ ಯಾರೂ ಅತಿಕ್ರಮ ಪ್ರವೇಶ ಮಾಡದಂತೆ ನೋಡಿಕೊಳ್ಳಲು ವಿದೇಶಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಈ ಮೂಲಕ ಪಾಪರಾಜಿಗಳು ಮತ್ತು ಅನಗತ್ಯ ಕ್ಯಾಮರಾ ಕಣ್ಣುಗಳಿಂದ ದೂರವಿರಲು ಈ ಜೋಡಿ ನಿರ್ಧರಿಸಿದ್ದು, ಮದುವೆಯಲ್ಲಿ ಕಟ್ಟುನಿಟ್ಟಾದ ‘ನೋ-ಮೀಡಿಯಾ’ ಪಾಲಿಸಿಯನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗುತ್ತಿದೆ.

ಮೂರು ದಿನಗಳ ಕಾರ್ಯಕ್ರಮ

ಮೂಲಗಳ ಪ್ರಕಾರ, ಈ ವಿವಾಹ ಮಹೋತ್ಸವವು ಫೆಬ್ರವರಿ 24 ರಿಂದಲೇ ಆರಂಭವಾಗಲಿದೆ. ಮೊದಲ ಎರಡು ದಿನ ಹಳದಿ, ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಫೆಬ್ರವರಿ 26 ರಂದು ಕುಟುಂಬಸ್ಥರು ಹಾಗೂ ಆಪ್ತೇಷ್ಟರ ಸಮ್ಮುಖದಲ್ಲಿ ವಿಜಯ್ ಮತ್ತು ರಶ್ಮಿಕಾ ಹಸೆಮಣೆ ಏರಲಿದ್ದಾರೆ. ಈ ಸಮಾರಂಭವು ಅತ್ಯಂತ ಆಪ್ತ ವಲಯಕ್ಕೆ ಮಾತ್ರ ಸೀಮಿತವಾಗಿದ್ದು, ಮದುವೆಯ ಸಕಲ ಸಿದ್ಧತೆಗಳನ್ನು ಅತ್ಯಂತ ಗೌಪ್ಯವಾಗಿ ಮಾಡಲಾಗಿದೆ. ಮದುವೆಯ ಕೆಲಸಗಾರರು ಮತ್ತು ವೆಂಡರ್ಗಳಿಗೆ ಯಾವುದೇ ಮಾಹಿತಿ ಲೀಕ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ವೈರಲ್ ಆದ ವೆಡ್ಡಿಂಗ್ ಕಾರ್ಡ್

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಸಹಿ ಇರುವ ವಿವಾಹದ ಆಮಂತ್ರಣ ಪತ್ರಿಕೆಯೊಂದು ಭಾರಿ ಸದ್ದು ಮಾಡಿತ್ತು. "ನಮ್ಮ ಕುಟುಂಬದ ಪ್ರೀತಿ ಮತ್ತು ಹಾರೈಕೆಯೊಂದಿಗೆ ನಾನು ಮತ್ತು ರಶ್ಮಿಕಾ ಫೆಬ್ರವರಿ 26 ರಂದು ಸರಳ ವಿವಾಹವಾಗುತ್ತಿದ್ದೇವೆ" ಎಂದು ವಿಜಯ್ ಹೆಸರಿನಲ್ಲಿ ಬರೆಯಲಾಗಿದ್ದ ಪತ್ರವು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಉದಯಪುರದಲ್ಲಿ ಮದುವೆ ಮುಗಿದ ನಂತರ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಭರ್ಜರಿ ಆರತಕ್ಷತೆ ನಡೆಯಲಿದ್ದು, ಅಲ್ಲಿ ಚಲನಚಿತ್ರ ರಂಗದ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬರದಿದ್ದರೂ, ಮದುವೆಯ ನಂತರ ದಂಪತಿಗಳು ಮಾಧ್ಯಮಗಳ ಮುಂದೆ ಬಂದು ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯಿದೆ.

Read More
Next Story