ಸಾವಿನ ನಾಟಕವಾಡಿದ್ದ ನಟಿ ಪೂನಂ ಪಾಂಡೆ ಈಗ ಗರ್ಭಿಣಿ… ಫೋಟೋ ನೋಡಿ ಜನ ಕಂಗಾಲು!
x

ಬೇಬಿ ಬಂಪ್ ತೋರಿಸಿದ ಪೂನಂ ಪಾಂಡೆ

ಸಾವಿನ ನಾಟಕವಾಡಿದ್ದ ನಟಿ ಪೂನಂ ಪಾಂಡೆ ಈಗ ಗರ್ಭಿಣಿ… ಫೋಟೋ ನೋಡಿ ಜನ ಕಂಗಾಲು!

ಮುಂಬೈ ಮೂಲದ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.


Click the Play button to hear this message in audio format

ವಿವಾದಗಳ ರಾಣಿ ಎಂದೇ ಕರೆಸಿಕೊಳ್ಳುವ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಂಗಳವಾರ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಫೋಟೋಗಳಲ್ಲಿ ಪೂನಂ ತಮ್ಮ 'ಬೇಬಿ ಬಂಪ್' ತೋರಿಸುತ್ತಾ ನಗುತ್ತಿರುವುದನ್ನು ಕಾಣಬಹುದು.

ಪೂನಂ ಹಂಚಿಕೊಂಡಿರುವ ಎರಡು ಚಿತ್ರಗಳಲ್ಲಿ, ಮೊದಲನೆಯದರಲ್ಲಿ ಅವರು ತಮ್ಮ ಟಿ-ಶರ್ಟ್ ಅನ್ನು ಮೇಲಕ್ಕೆ ಎತ್ತಿ ಹೊಟ್ಟೆಯನ್ನು ತೋರಿಸುತ್ತಿದ್ದಾರೆ. ಎರಡನೇ ಚಿತ್ರದಲ್ಲಿ ಟಿ-ಶರ್ಟ್ ಕೆಳಕ್ಕೆ ಇಳಿಸಿ ಪೋಸ್ ನೀಡಿದ್ದಾರೆ. ಈ ಫೋಟೋಗಳಿಗೆ ಅವರು ಗರ್ಭಿಣಿ ಮಹಿಳೆ, ಹಾಲಿನ ಬಾಟಲಿ ಮತ್ತು ಮಗುವಿನ ಮುಖದ ಎಮೋಜಿಗಳನ್ನು ಕ್ಯಾಪ್ಷನ್ ಆಗಿ ನೀಡಿದ್ದಾರೆ. ಆದರೆ, ಎಲ್ಲಿಯೂ ತಾವು ಗರ್ಭಿಣಿ ಎಂದು ನೇರವಾಗಿ ಬರೆದುಕೊಂಡಿಲ್ಲ.ನೆಟ್ಟಿಗರ ಅನುಮಾನ ಮತ್ತು ಎಪ್ರಿಲ್ ಫೂಲ್ ಶಂಕೆಪೂನಂ ಅವರ ಈ ಪೋಸ್ಟ್ ಕಂಡ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ನಾಳೆ ಅಂದರೆ ಏಪ್ರಿಲ್ 1 'ಏಪ್ರಿಲ್ ಫೂಲ್' ದಿನವಾಗಿರುವುದರಿಂದ, ಇದು ಜನರನ್ನು ದಡ್ಡರನ್ನಾಗಿ ಮಾಡುವ ತಂತ್ರ ಇರಬಹುದು ಎಂದು ಅನೇಕರು ಶಂಕಿಸಿದ್ದಾರೆ. "ಇದು ಕೇವಲ ಕೃತಕವಾದ ಹೊಟ್ಟೆ ಅಷ್ಟೇ, ನಾಳೆ ಏಪ್ರಿಲ್ ಫೂಲ್ ಮಾಡಲು ಈ ಪ್ಲಾನ್ ಮಾಡಿದ್ದೀರಾ?" ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈ ಫೋಟೋಗಳು ಎಐ ಸೃಷ್ಟಿಸಿರುವ ಚಿತ್ರಗಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಳೆಯ 'ಸಾವಿನ' ನಾಟಕ ನೆನಪಿಸಿಕೊಂಡ ಜನ

ಜನರು ಪೂನಂ ಅವರನ್ನು ನಂಬಲು ಹಿಂದೇಟು ಹಾಕಲು ಮುಖ್ಯ ಕಾರಣ 2024ರಲ್ಲಿ ಅವರು ಮಾಡಿದ ಒಂದು ದೊಡ್ಡ ಸ್ಟಂಟ್. ಆಗ ಪೂನಂ ತಮಗೆ ಗರ್ಭಕಂಠದ ಕ್ಯಾನ್ಸರ್ ಇರುವುದರಿಂದ ಮೃತಪಟ್ಟಿದ್ದಾರೆ ಎಂದು ಅವರ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇಡೀ ದೇಶವೇ ಈ ಸುದ್ದಿಯಿಂದ ಅಚ್ಚರಿಗೊಂಡಿತ್ತು. ಆದರೆ ಮರುದಿನವೇ ಪ್ರತ್ಯಕ್ಷವಾದ ಪೂನಂ, ತಾವು ಜೀವಂತವಾಗಿರುವುದಾಗಿ ಮತ್ತು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಸುಳ್ಳು ಸಾವಿನ ಸುದ್ದಿ ಹಬ್ಬಿಸಿದ್ದಾಗಿ ಹೇಳಿದ್ದರು. ಈ ಘಟನೆಯಿಂದಾಗಿ ಈಗ ಅವರು ನಿಜ ಹೇಳುತ್ತಿದ್ದರೂ ಜನರಲ್ಲಿ ನಂಬಿಕೆ ಇಲ್ಲದಂತಾಗಿದೆ.

ನಟಿ ಪೂನಂ ಪಾಂಡೆ ತಮ್ಮ ವೃತ್ತಿಜೀವನದುದ್ದಕ್ಕೂ ನಟನೆಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾದವರು. ಸದಾ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುವ ಉದ್ದೇಶದಿಂದಲೇ ಅವರು ಮಾಡುತ್ತಿದ್ದ ಕೆಲವು ಕಾರ್ಯಗಳು ಸಾರ್ವಜನಿಕವಾಗಿ ಭಾರಿ ಟೀಕೆಗೆ ಗುರಿಯಾಗಿವೆ. ಅವರ ಪ್ರಮುಖ ವಿವಾದಗಳ ವಿವರ ಇಲ್ಲಿದೆ.

2011ರ ವಿಶ್ವಕಪ್ ಬೆತ್ತಲೆ ಘೋಷಣೆ

ಪೂನಂ ಪಾಂಡೆ ಮೊದಲ ಬಾರಿಗೆ ದೇಶಾದ್ಯಂತ ಚರ್ಚೆಗೆ ಬಂದಿದ್ದು 2011ರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ. ಒಂದು ವೇಳೆ ಭಾರತ ತಂಡ ವಿಶ್ವಕಪ್ ಗೆದ್ದರೆ ನಾನು ಮೈದಾನದಲ್ಲಿ ಬೆತ್ತಲೆಯಾಗಿ ಓಡುತ್ತೇನೆ ಎಂದು ಅವರು ಘೋಷಿಸಿದ್ದರು. ಭಾರತ ಜಯಗಳಿಸಿದ ನಂತರ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ. ಈ ಬಗ್ಗೆ ಕೇಳಿದಾಗ ಬಿಸಿಸಿಐ ತಮಗೆ ಅನುಮತಿ ನೀಡಲಿಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದರು. ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ತಂತ್ರ ಎಂದು ಜನರು ಆಗಲೇ ಟೀಕಿಸಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ

2020ರಲ್ಲಿ ಗೋವಾದ ದಕ್ಷಿಣ ಭಾಗದಲ್ಲಿರುವ ಸರ್ಕಾರಿ ಆಸ್ತಿಗೆ ಸೇರಿದ ಸ್ಥಳವೊಂದರಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಗೋವಾ ಪೊಲೀಸರು ಪೂನಂ ಪಾಂಡೆ ಮತ್ತು ಅವರ ಆಗಿನ ಪತಿ ಸ್ಯಾಮ್ ಬಾಂಬೆ ಅವರನ್ನು ಬಂಧಿಸಿದ್ದರು. ಗೋವಾದ ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯರು ಇವರ ವಿರುದ್ಧ ದೂರು ನೀಡಿದ್ದರು. ಈ ಘಟನೆ ಆಗ ದೊಡ್ಡ ಸುದ್ದಿಯಾಗಿತ್ತು.

ಪತಿ ವಿರುದ್ಧ ಕಿರುಕುಳದ ದೂರು

ತಮ್ಮ ಮದುವೆಯಾದ ಕೆಲವೇ ದಿನಗಳಲ್ಲಿ ಪೂನಂ ಪಾಂಡೆ ತಮ್ಮ ಪತಿ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಮತ್ತು ಕಿರುಕುಳದ ಆರೋಪ ಹೊರಿಸಿದ್ದರು. ಮದುವೆಯ ಹನಿಮೂನ್‌ಗಾಗಿ ಗೋವಾಕ್ಕೆ ಹೋಗಿದ್ದಾಗ ಪತಿ ತಮಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದರ ನಂತರ ಸ್ಯಾಮ್ ಬಾಂಬೆ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರೂ ಮತ್ತೆ ಒಂದಾಗಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ಅಶ್ಲೀಲ ಅಪ್ಲಿಕೇಶನ್ ಮತ್ತು ವಿಡಿಯೋಗಳು

ಪೂನಂ ಪಾಂಡೆ ತಮ್ಮದೇ ಆದ ಆ್ಯಪ್ (App) ಒಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಅತ್ಯಂತ ಅಶ್ಲೀಲವಾದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಕಾರಣಕ್ಕೆ ಗೂಗಲ್ ಪ್ಲೇ ಸ್ಟೋರ್ ಇವರ ಆ್ಯಪ್ ಅನ್ನು ನಿಷೇಧಿಸಿತ್ತು. ಅಲ್ಲದೆ ರಾಜಕುಂದ್ರಾ ಅವರ ಅಶ್ಲೀಲ ಚಿತ್ರದ ದಂಧೆಯ ಪ್ರಕರಣದಲ್ಲೂ ಪೂನಂ ಹೆಸರು ಕೇಳಿಬಂದಿತ್ತು.

Read More
Next Story