ಧುರಂಧರ್ 2| ರಣವೀರ್ ಸಿಂಗ್ ನಟನೆಗೆ ಫಿದಾ, ರಿವೆಂಜ್ ಅಂದ್ರೆ ಹೀಗಿರಬೇಕು ಎಂದ ಪ್ರೀತಿ ಜಿಂಟಾ
x

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ

ಧುರಂಧರ್ 2| ರಣವೀರ್ ಸಿಂಗ್ ನಟನೆಗೆ ಫಿದಾ, ರಿವೆಂಜ್ ಅಂದ್ರೆ ಹೀಗಿರಬೇಕು ಎಂದ ಪ್ರೀತಿ ಜಿಂಟಾ

ಧುರಂಧರ್ 2 ಸಿನಿಮಾ ಇಂದು ಬಿಡುಗಡೆಗೊಂಡಿದ್ದು, ರಣವೀರ್ ಸಿಂಗ್ ಅವರ ಹಮ್ಜಾ ಪಾತ್ರ ಮತ್ತು ಅದ್ಭುತ ಆಕ್ಷನ್ ಸನ್ನಿವೇಶಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.


Click the Play button to hear this message in audio format

ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ 'ಧುರಂಧರ್ 2' ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಚಿತ್ರದ ಟ್ರೈಲರ್ ಸೃಷ್ಟಿಸಿದ್ದ ನಿರೀಕ್ಷೆಯನ್ನು ಸಿನಿಮಾ ಹುಸಿಗೊಳಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಮೊದಲ ಭಾಗಕ್ಕಿಂತಲೂ ಈ ಬಾರಿ ಹೆಚ್ಚಿನ ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನು ಪ್ರೇಕ್ಷಕರು ಅನುಭವಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ರಣವೀರ್ ಸಿಂಗ್ ಅವರ ಅಭಿನಯ ಮತ್ತು ಚಿತ್ರದ ಹಾಡುಗಳಿಗೆ ಜನರು ಫಿದಾ ಆಗಿದ್ದಾರೆ. ದೇಶಾದ್ಯಂತ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬುಕ್ ಮೈ ಶೋನಲ್ಲಿ ಪ್ರತಿ ಗಂಟೆಗೆ 70 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗುತ್ತಿರುವುದು ಚಿತ್ರದ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಟ್ರೇಡ್ ಅನಾಲಿಟಿಕಲ್ ತಜ್ಞರ ಪ್ರಕಾರ, 'ಧುರಂಧರ್ 2' ಹಳೆಯ ಎಲ್ಲಾ ದಾಖಲೆಗಳನ್ನು ಮುರಿಯುವ ಮುನ್ಸೂಚನೆ ನೀಡಿದೆ. ಮೊದಲ ದಿನವೇ ಈ ಸಿನಿಮಾ ವಿಶ್ವಾದ್ಯಂತ 200 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡುವ ಅಂದಾಜಿದೆ.

ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯ ಖ್ಯಾತ ತಾರೆಯರಾದ ಅಲ್ಲು ಅರ್ಜುನ್, ಆರ್ ಮಾಧವನ್, ಶಿಲ್ಪಾ ಶೆಟ್ಟಿ ಮತ್ತು ವಿಜಯ್ ದೇವರಕೊಂಡ ಅವರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲು ಅರ್ಜುನ್ ಅವರ ಪ್ರಶಂಸೆಗೆ ಮಾಧವನ್ ಕೃತಜ್ಞತೆ ಸಲ್ಲಿಸಿದ್ದು, ಚಿತ್ರದ ಮೇಕಿಂಗ್ ಮತ್ತು ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಚಿತ್ರಕ್ಕೆ ವಿಮರ್ಶಕ ತರಣ್ ಆದರ್ಶ್ ಅವರು 4.5 ರೇಟಿಂಗ್ ನೀಡುವ ಮೂಲಕ ಇದೊಂದು ಮಾಸ್ಟರ್‌ಪೀಸ್ ಎಂದು ಬಣ್ಣಿಸಿದ್ದಾರೆ.

ಈ ಸೀಕ್ವೆಲ್‌ನಲ್ಲಿ 'ಬಡೆ ಸಾಹಬ್' ಪಾತ್ರದ ಕುರಿತಾದ ಕುತೂಹಲಕ್ಕೂ ತೆರೆ ಬಿದ್ದಿದ್ದು, ಈ ಪಾತ್ರವು ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಅವರನ್ನು ಆಧರಿಸಿದೆ ಎಂಬುದು ದೃಢಪಟ್ಟಿದೆ. ಚಿತ್ರಕ್ಕಾಗಿ ರಣವೀರ್ ಸಿಂಗ್ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರೆ, ಸಂಜಯ್ ದತ್ 10 ಕೋಟಿ ಮತ್ತು ಸಾರಾ ಅರ್ಜುನ್ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ದುಬೈನಿಂದ ಟೆಕ್ನಿಕಲ್ ಗುರೂಜಿ ಗೌರವ್ ಚೌಧರಿ ಅವರಂತಹ ಪ್ರಮುಖ ವ್ಯಕ್ತಿಗಳು ಕೇವಲ ಈ ಸಿನಿಮಾ ನೋಡಲೆಂದೇ ಭಾರತಕ್ಕೆ ಆಗಮಿಸಿದ್ದಾರೆ.

ಒಂದೆಡೆ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದರೆ, ಮತ್ತೊಂದೆಡೆ ನೋಯ್ಡಾದ ಡಿಎಲ್‌ಎಫ್ ಐಮ್ಯಾಕ್ಸ್ ಚಿತ್ರಮಂದಿರದಲ್ಲಿ ತಾಂತ್ರಿಕ ಕಾರಣಗಳಿಂದ ಶೋ ರದ್ದಾದಾಗ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಒಟ್ಟಾರೆಯಾಗಿ, 'ಧುರಂಧರ್: ದಿ ರಿವೆಂಜ್' ಪ್ರೇಕ್ಷಕರಿಗೆ ರಕ್ತಪಾತ ಮತ್ತು ತೀವ್ರ ಆಕ್ಷನ್ ಸನ್ನಿವೇಶಗಳ ರಸದೌತಣ ನೀಡುತ್ತಿದ್ದು, ವಾರಾಂತ್ಯದ ವೇಳೆಗೆ 500 ಕೋಟಿ ಹಾಗೂ ಒಟ್ಟಾರೆಯಾಗಿ 1000 ಕೋಟಿ ರೂಪಾಯಿಗಳ ಗಡಿ ದಾಟುವ ನಿರೀಕ್ಷೆಯಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲೆಯಾಳಂ ಭಾಷೆಗಳಲ್ಲಿ ತೆರೆಕಂಡಿರುವ ಈ ಸಿನಿಮಾ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರೀಮಿಯರ್ ಶೋಗಳಿಂದ ಸಿನಿಮಾ 52 ಕೋಟಿ ರೂ. ಗಳಿಸಿದೆ.

Read More
Next Story