
ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ
Alia Bhatt-Ranbir|ಮಗಳ ಕೈ ಹಿಡಿದು ಪಾರ್ಕ್‌ನಲ್ಲಿ ಸುತ್ತಾಡಿದ ರಣಬೀರ್-ಆಲಿಯಾ: ರಾಹಾ ಕ್ಯೂಟ್ ವಿಡಿಯೋ ವೈರಲ್
ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನವನ್ನು ಆಚರಿಸಲು ಅವರು ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಜೊತೆಗೆ ಹಾಂಗ್ ಕಾಂಗ್‌ಗೆ ಪ್ರವಾಸ ಕೈಗೊಂಡಿದ್ದಾರೆ.
ಹಾಂಗ್ ಕಾಂಗ್‌ನಲ್ಲಿ ಮಗಳು ರಾಹಾ ಮತ್ತು ಪತಿ ರಣಬೀರ್ ಕಪೂರ್ ಅವರೊಂದಿಗೆ ಆಲಿಯಾ ಭಟ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಮಾರ್ಚ್ 15 ರಂದು ಆಲಿಯಾ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ತಾರಾ ಜೋಡಿ ತಮ್ಮ ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಪುಟ್ಟ ಕಂದಮ್ಮನೊಂದಿಗೆ ಸಮಯ ಕಳೆಯಲು ವಿದೇಶಕ್ಕೆ ಹಾರಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಫೋಟೋಗಳಲ್ಲಿ, ರಣಬೀರ್ ಮತ್ತು ಆಲಿಯಾ ಹಾಂಗ್ ಕಾಂಗ್‌ನ ಮಕ್ಕಳ ಉದ್ಯಾನವನವೊಂದರಲ್ಲಿ ರಾಹಾ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿರುವುದು ಕಂಡುಬಂದಿದೆ. ಆಲಿಯಾ ಹೂಡಿ ಮತ್ತು ವಿಂಟರ್ ಜಾಕೆಟ್ ಧರಿಸಿ ಸರಳವಾಗಿ ಕಾಣಿಸಿಕೊಂಡರೆ, ರಣಬೀರ್ ಡೆನಿಮ್ ಉಡುಪಿನಲ್ಲಿ ಮಿಂಚಿದ್ದಾರೆ. ಇನ್ನು ಎಲ್ಲರ ಗಮನ ಸೆಳೆದಿದ್ದು ಪುಟಾಣಿ ರಾಹಾ; ಕೆಂಪು ಬಣ್ಣದ ಟ್ರ್ಯಾಕ್‌ಸೂಟ್ ಧರಿಸಿದ್ದ ರಾಹಾ, ಪೋಷಕರಿಬ್ಬರ ಕೈ ಹಿಡಿದುಹೆಜ್ಜೆ ಹಾಕುತ್ತಿದ್ದ ದೃಶ್ಯ ಅಭಿಮಾನಿಗಳ ಮನ ಗೆದ್ದಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ಈ ದಂಪತಿ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ 'ಲವ್ ಅಂಡ್ ವಾರ್' ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸುತ್ತಿದ್ದಾರೆ. ಇದರ ಜೊತೆಗೆ ರಣಬೀರ್ 'ರಾಮಾಯಣ ' ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ, ಆಲಿಯಾ ಅಭಿನಯದ ಸ್ಪೈ ಆಕ್ಷನ್ ಡ್ರಾಮಾ 'ಆಲ್ಫಾ' ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚಿತ್ರವು ಜುಲೈ 10ರಂದು ತೆರೆಗೆ ಬರಲಿದೆ.
ಯಶ್ ರಾಜ್ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ 'ಸ್ಪೈ ಯೂನಿವರ್ಸ್'ನ ಮೊದಲ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ 'ಆಲ್ಫಾ'. ಈ ಚಿತ್ರದಲ್ಲಿ ಆಲಿಯಾ ಅವರೊಂದಿಗೆ ಶರ್ವರಿ ವಘ್ ಪ್ರಮುಖ ಪಾತ್ರದಲ್ಲಿದ್ದು, ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಆಲಿಯಾ ಅವರ ರಗಡ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕಳೆದ ವರ್ಷವಷ್ಟೇ ಆಲಿಯಾ ನಟನೆಯ 'ಜಿಗ್ರಾ' ಸಿನಿಮಾ ತೆರೆಕಂಡು ಪ್ರಶಂಸೆ ಗಳಿಸಿತ್ತು. ಇವುಗಳ ಜೊತೆಗೆ ಫರ್ಹಾನ್ ಅಖ್ತರ್ ಅವರ ಮಹಿಳಾ ಪ್ರಧಾನ ರೋಡ್ ಟ್ರಿಪ್ ಸಿನಿಮಾ 'ಜೀ ಲೇ ಜರಾ' ಹಾಗೂ ಬಹುನಿರೀಕ್ಷಿತ 'ಬ್ರಹ್ಮಾಸ್ತ್ರ ಪಾರ್ಟ್ 2' ಚಿತ್ರಗಳಲ್ಲೂ ಆಲಿಯಾ ಕಾಣಿಸಿಕೊಳ್ಳಲಿದ್ದು, ಈ ಚಿತ್ರಗಳ ಅಧಿಕೃತ ಬಿಡುಗಡೆ ದಿನಾಂಕ ಚಿತ್ರತಂಡದಿಂದ ಇನ್ನಷ್ಟೇ ಘೋಷಣೆಯಾಗಬೇಕಿದೆ.

