
ಸಾಂದರ್ಭಿಕ ಚಿತ್ರ
Gold price today | ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ, 10 ಗ್ರಾಂಗೆ 1 ಸಾವಿರ ರೂ. ಹೆಚ್ಚಳ
ಹಳದಿ ಲೋಹ ಮಾತ್ರವಲ್ಲದೆ ಬೆಳ್ಳಿ ದರದಲ್ಲಿಯೂ ಇಂದು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ದಾಖಲಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 5 ರೂ. ಹೆಚ್ಚಳವಾಗಿದ್ದು, 245 ರೂಪಾಯಿಗೆ ತಲುಪಿದೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮಂಗಳವಾರ (ಮಾರ್ಚ್ 31ರಂದು) ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಮಾರುಕಟ್ಟೆ ವರದಿಗಳ ಪ್ರಕಾರ, 24 ಕ್ಯಾರಟ್ನ ಒಂದು ಗ್ರಾಂ ಆಭರಣ ಚಿನ್ನದ ದರದಲ್ಲಿ ಇಂದು 103 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,49,280 ರೂಪಾಯಿಗೆ ತಲುಪಿದೆ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,36,850 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 13,68,500 ರೂ. ಪಾವತಿ ಮಾಡಬೇಕಾಗುತ್ತದೆ. ಇದರ ಜತೆಗೆ 18 ಕ್ಯಾರಟ್ ಚಿನ್ನದ ದರವೂ ಏರಿಕೆ ಕಂಡಿದ್ದು, ಒಂದು ಗ್ರಾಂ ಬೆಲೆ 11,197 ರೂ. ಹಾಗೂ 10 ಗ್ರಾಂಗೆ 1,11,970 ರೂ. ನಿಗದಿಯಾಗಿದೆ. ಬೆಂಗಳೂರು ಮಾತ್ರವಲ್ಲದೆ 24 ಕ್ಯಾರೆಟ್ 10 ಗ್ರಾಂಗೆ ಚೆನ್ನೈನಲ್ಲಿ 1,49,130 ರೂ. ಮುಂಬೈ, ಹೈದರಾಬಾದ್ ಹಾಗೂ ಕೊಲ್ಕತ್ತಾದಲ್ಲಿ 1,49,290 ರೂ. ತಲುಪಿದೆ.
ಬೆಳ್ಳಿ ದರದಲ್ಲೂ ಏರಿಕೆ
ಹಳದಿ ಲೋಹ ಮಾತ್ರವಲ್ಲದೆ ಬೆಳ್ಳಿ ದರದಲ್ಲಿಯೂ ಇಂದು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ದಾಖಲಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 5 ರೂ. ಹೆಚ್ಚಳವಾಗಿದ್ದು, 245 ರೂಪಾಯಿಗೆ ತಲುಪಿದೆ. 10 ಗ್ರಾಂ ಬೆಳ್ಳಿಗೆ 2,450 ರೂಪಾಯಿ ಪಾವತಿಸಬೇಕಾಗುತ್ತದೆ. ಅದೇ ರೀತಿ ಒಂದು ಕೆ.ಜಿ. ಬೆಳ್ಳಿಯ ಬೆಲೆಯಲ್ಲಿ 5,000 ರೂ. ಹೆಚ್ಚಳವಾಗಿದ್ದು, 2,50,000 ರೂಪಾಯಿಗೆ ತಲುಪಿದೆ. ದಿನೇ ದಿನೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಆಭರಣ ಪ್ರಿಯರಿಗೆ ಆತಂಕ ತಂದಿದೆ.
ಬೆಲೆ ಏರಿಕೆಗೆ ಕಾರಣವೇನು ?
ಸೆಂಟ್ರಲ್ ಬ್ಯಾಂಕ್ನಲ್ಲಿ ಚಿನ್ನದ ಮೀಸಲು ಸಂಗ್ರಹ ಹೆಚ್ಚಾಗಿರುವುದು ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಆಮದು ಪ್ರಮಾಣ ಏರಿಕೆಯಾಗಿರುವುದು ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಜಾಗತಿಕ ಉದ್ವಿಗ್ನತೆ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳ ನಿರೀಕ್ಷೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುವಂತೆ ಮಾಡಿರುವುದು ಬೆಲೆ ಹೆಚ್ಚಾಗುವಂತೆ ಮಾಡಿದೆ.
ಡಾಲರ್ ಸ್ಥಿರತೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಇಂಡೆಕ್ಸ್ 99.3 ಮಟ್ಟದಲ್ಲಿ ಸ್ಥಿರವಾಗಿರುವುದು ಸಹ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಗೆ ಪೂರಕವಾಗಿದೆ.
ಖರೀದಿ ಆಸಕ್ತಿ: ಇತ್ತೀಚಿನ ಭಾರಿ ಕುಸಿತದ ನಂತರ ಹೂಡಿಕೆದಾರರಲ್ಲಿ ಕಂಡುಬಂದ ಅಲ್ಪಾವಧಿಯ ಖರೀದಿ ಆಸಕ್ತಿಯು ಬೆಲೆಯನ್ನು ಮತ್ತೆ ಮೇಲಕ್ಕೆತ್ತಿದೆ ಎಂದು ಇಂಡಿಯಾ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಉಪಾಧ್ಯಕ್ಷೆ ಅಕ್ಷಾ ಕಾಂಬೋಜ್ ತಿಳಿಸಿದ್ದಾರೆ.

